Upcoming Indian Movies: ಯಶ್‌ರಿಂದ ಶಾರುಖ್‌ ಖಾನ್‌ವರೆಗೆ... ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಿವು!

Published : Aug 22, 2025, 11:22 AM IST
upcoming movies

ಸಾರಾಂಶ

Must Watch Indian Movies: ಭಾರತೀಯ ಚಿತ್ರರಂಗದಲ್ಲಿ 2025, 2026ರಲ್ಲಿ ರಿಲೀಸ್‌ ಆಗಲಿರುವ ಬಹುನಿರೀಕ್ಷಿತ ಸಿನಿಮಾಗಳಿವು

2025 ಮತ್ತು 2026ರಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ದೊಡ್ಡಮಟ್ಟದ ಸಿನಿಮಾಗಳು ರಿಲೀಸ್‌ ಆಗಲಿವೆ. ಹಾಗಾದರೆ ಆ ಸಿನಿಮಾಗಳು ಯಾವುವು?

ಬಾರ್ಡರ್ 2 ( ರಿಲೀಸ್: ಜನವರಿ 23, 2026)

1997ರ ಯುದ್ಧ ಕ್ಲಾಸಿಕ್‌ನ ಸೀಕ್ವೆಲ್, ಸನ್ನಿ ಡಿಯೋಲ್, ಆಯುಷ್ಮಾನ್ ಖುರಾನಾ ನಟಿಸಿದ್ದಾರೆ. ಈ ದೇಶಭಕ್ತಿಯ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಸಾಧಿಸಲಿದೆ, ₹800 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆ ಇದೆ. ಅನುರಾಗ್‌ ಸಿಂಗ್‌ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ರಾಮಾಯಣ (ರಿಲೀಸ್: ದೀಪಾವಳಿ 2026) ‌

ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದಲ್ಲಿ ರಣಬೀರ್ ಕಪೂರ್ ಶ್ರೀ ರಾಮನಾಗಿ ನಟಿಸಿದ್ದಾರೆ. ಯಶ್‌ ಅವರು ರಾವಣನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ನಟಿಸಿದ್ದಾರೆ. ದೊಡ್ಡ ಬಜೆಟ್, ಸುಂದರ ಸೀನ್‌ಗಳು ಕೂಡ ಇರಲಿವೆ, ಇದು ವಿಶ್ವಾದ್ಯಂತ ₹2000 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ.

ಕಿಂಗ್ (ರಿಲೀಸ್: 2026, ದಿನಾಂಕ ಖಚಿತವಾಗಿಲ್ಲ) ‌

ಶಾರುಖ್ ಖಾನ್, ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಸುಜೊಯ್ ಘೋಷ್‌ರ ಆಕ್ಷನ್‌ ರೊಮ್ಯಾಂಟಿಕ್‌ ಥ್ರಿಲ್ಲರ್‌ ಸಿನಿಮಾ ಇದಾಗಿದೆ. ಸಿದ್ದಾರ್ಥ್‌ ಆನಂದ್‌ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ₹1000 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯನ್ನು ಹೊಂದಿದ್ದಾರೆ.

ಎನ್‌ಟಿಆರ್-ನೀಲ್ ( ರಿಲೀಸ್: ಜನವರಿ 9, 2026) ‌

ಜೂನಿಯರ್ ಎನ್‌ಟಿಆರ್ ಅವರು ಪ್ರಶಾಂತ್ ನೀಲ್‌ ಜೊತೆ ಸಿನಿಮಾ ಮಾಡೋದಾಗಿ ಹೇಳಿದ್ದಾರೆ. ₹1000 ಕೋಟಿ ಗಳಿಕೆಯ ನಿರೀಕ್ಷೆಯಿದ್ದು. ಕೆಜಿಎಫ್‌ 1, 2 ಭಾಗಗಳ ಮೂಲಕ ಹಿಟ್‌ ಕೊಟ್ಟಿರುವ ಈ ಬಾರಿ ಮತ್ತೊಂದು ಹಿಟ್‌ ಕೊಡ್ತಾರಾ?

ಟಾಕ್ಸಿಕ್ (‌ ರಿಲೀಸ್‌: 2026, ದಿನಾಂಕ ಖಚಿತವಾಗಿಲ್ಲ)

KGF ನಂತರ ಯಶ್‌ ಅವರು ಈ ಸಿನಿಮಾ ಘೋಷಿಸಿದ್ದಾರೆ. ಇದು ದೊಡ್ಡ ಪ್ರಾಜೆಕ್ಟ್‌ ಆಗಿದ್ದು, ಮುಂದಿನ ವರ್ಷ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಗೋವಾದ ಡ್ರಗ್ ಕಾರ್ಟೆಲ್ ಜಗತ್ತಿನಲ್ಲಿ ನಡೆಯುವ ಈ ಆಕ್ಷನ್‌ ಸಿನಿಮಾವು ₹500 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಹಾಲಿವುಡ್‌ ತಂತ್ರಜ್ಞರು, ಕಲಾವಿದರು ಕೂಡ ನಟಿಸಲಿದ್ದಾರೆ ಎನ್ನಲಾಗಿದೆ.

ಲವ್ ಆಂಡ್ ವಾರ್ (‌ ರಿಲೀಸ್: ಮಾರ್ಚ್ 20, 2026) 

ಸಂಜಯ್ ಲೀಲಾ ಭನ್ಸಾಲಿಯ ರೊಮ್ಯಾಂಟಿಕ್ ಮಹಾಕಾವ್ಯದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಾಲ್ ನಟಿಸಿದ್ದಾರೆ, ವಿಶ್ವಾದ್ಯಂತ ₹500 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ.

ಬ್ಯಾಟಲ್‌ ಆಫ್ ಗಲ್ವಾನ್ (‌ ರಿಲೀಸ್: 2025, ದಿನಾಂಕ ಖಚಿತವಾಗಿಲ್ಲ) 

ದೇಶಭಕ್ತಿಯ ಈ ಸಿನಿಮಾವು ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ₹500 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ.

ಪೆಡ್ಡಿ (ರಿಲೀಸ್: 2025, ದಿನಾಂಕ ಖಚಿತವಾಗಿಲ್ಲ) 

ರಾಮ್‌ ಚರಣ್‌ ನಟನೆಯ ಕ್ರೀಡಾ ಆಕ್ಷನ್‌ ಸಿನಿಮಾವಾಗಿದೆ. ಈ ಸಿನಿಮಾವು ₹300 ಕೋಟಿ ಗಳಿಕೆಯ ನಿರೀಕ್ಷೆಯಿದೆ.

ಸ್ಪಿರಿಟ್ ( ರಿಲೀಸ್: 2026, ದಿನಾಂಕ ಖಚಿತವಾಗಿಲ್ಲ) ‌

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿರುವ ಆಕ್ಷನ್‌ ರೊಮ್ಯಾಂಟಿಕ್‌ ಸಿನಿಮಾವಾಗಿದೆ. ದೊಡ್ಡ ಬಾಕ್ಸ್ ಆಫೀಸ್ ಗಳಿಕೆ ಆಗಬಹುದು ಎಂಬ ನಿರೀಕ್ಷೆ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
ಇದು ನಿಜ.. ಸದ್ಯವೇ ತಮಿಳು ಸಿನಿಮಾದಲ್ಲಿ ನಟಿಸಲಿರುವ ಶಾರುಖ್ ಖಾನ್; ನಿರ್ದೇಶಕರು ಯಾರು?