Swara Bhaskar: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಡಿಂಪಲ್ ಯಾದವ್ ಹಾಗೂ ದ್ವಿಲಿಂಗಿಗಳ ಬಗ್ಗೆ ಮಾತನಾಡಿ ಚರ್ಚೆಗೆ ಬಂದಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Bollywood actress Swara Bhaskar,) ಸಂದರ್ಶನವೊಂದ್ರಲ್ಲಿ ಆಘಾತಕಾರಿ ವಿಷ್ಯ ಹೇಳಿದ್ದಾರೆ. ಪತಿ ಫಹಾದ್ ಅಹ್ಮದ್ ಜೊತೆ ಸಂದರ್ಶನಕ್ಕೆ ಬಂದಿದ್ದ ಸ್ವರಾ ಭಾಸ್ಕರ್, ನಾವೆಲ್ಲರೂ ದ್ವಿಲಿಂಗಿಗಳು ಎಂದಿದ್ದಾರೆ. ಅಷ್ಟೇ ಅಲ್ಲ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ತಮ್ಮ ಕ್ರಶ್ ಅಂತ ಸ್ವರಾ ಭಾಸ್ಕರ್ ಹೇಳಿದ್ದಾರೆ.
ನಾವೆಲ್ಲ ದ್ವಿಲಿಂಗಿಗಳು : ರಾಂಝಾನಾ ಮತ್ತು ಅನಾರ್ಕಲಿ ಆಫ್ ಆರಾ ದಂತಹ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಭೇಷ್ ಎನ್ನಿಸಿಕೊಂಡಿರುವ ಸ್ವರಾ ಭಾಸ್ಕರ್, ಜಾತಿ, ವರ್ಗ, ಲಿಂಗಗಳ ಬಗ್ಗೆ ಸದಾ ತಮ್ಮ ಅಭಿಪ್ರಾಯವನ್ನು ಎಲ್ಲರ ಮುಂದಿಡ್ತಾರೆ. ಅನೇಕ ಬಾರಿ ತಮ್ಮ ಮಾತಿನಿಂದ ಅವ್ರು ಕಾಂಟ್ರವರ್ಸಿಗೆ ಒಳಗಾಗ್ತಾರೆ. ಈಗ ದ್ವಿಲಿಂಗಿ (bisexual)ಗಳ ಬಗ್ಗೆ ಸ್ವರಾ ಭಾಸ್ಕರ್ ಮಾತನಾಡಿದ್ದಾರೆ. ಜನರನ್ನು ಅವರವರ ಪಾಡಿಗೆ ಬಿಟ್ಟರೆ, ನಾವೆಲ್ಲರೂ ವಾಸ್ತವವಾಗಿ ದ್ವಿಲಿಂಗಿಗಳು. ಆದ್ರೆ ಭಿನ್ನಲಿಂಗೀಯತೆಯು ಸಾವಿರಾರು ವರ್ಷಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಒಂದು ಸಿದ್ಧಾಂತವಾಗಿದೆ. ಇದು ಮಾನವ ಜನಾಂಗ ಮುಂದುವರಿಯಲು ಅತ್ಯಗತ್ಯವಾಗಿದೆ ಎಂದು ಸ್ವರಾ ಭಾಸ್ಕರ್ ಹೇಳಿದ್ದಾರೆ.
ಡಿಂಪಲ್ ಯಾದವ್ ಮೇಲೆ ಕ್ರಶ್ : ಸಂದರ್ಶನದಲ್ಲಿ ಸ್ವರಾ ಭಾಸ್ಕರ್, ನನಗೆ ಡಿಂಪಲ್ ಯಾದವ್ ಮೇಲೆ ಕ್ರಶ್ ಇದೆ ಎಂದಿದ್ದಾರೆ. ನಾನು ಮೊದಲ ಬಾರಿ ಡಿಂಪಲ್ ಕಪಾಡಿಯಾ ಭೇಟಿ ಯಾದ್ಮೇಲೆ ಅವ್ರ ಮೇಲೆ ಕ್ರಶ್ ಆಗಿದೆ ಎಂದಿದ್ದಾರೆ. ಇದನ್ನು ಕೇಳ್ತಿದ್ದಂತೆ ನಿರೂಪಕರು, ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ ಅವರಿಗೆ ಕಿವಿ ಮುಚ್ಚಿಕೊಳ್ಳುವಂತೆ ಹೇಳ್ತಾರೆ. ಆದ್ರೆ ಸ್ವರಾ ಭಾಸ್ಕರ್, ನಾನು ಮೊದಲೇ ಫಹಾದ್ ಅಹ್ಮದ್ ಅವರಿಗೆ ಈ ವಿಷ್ಯ ಹೇಳಿದ್ದೇನೆ ಎನ್ನುತ್ತಾರಲ್ಲದೆ, ಡಿಂಪಲ್ ಬಗ್ಗೆ ವಿವರಣೆ ನೀಡ್ತಾರೆ. ಡಿಂಪಲ್ ಯಾದವ್, ಅಖಿಲೇಶ್ ಯಾದವ್ ಪತ್ನಿ ಅಂತ ಫಹಾದ್ ಅಹ್ಮದ್ ಸ್ವರಾ ಭಾಸ್ಕರ್ ಮಾತಿನ ಮಧ್ಯೆ ಹೇಳೋದನ್ನು ಕೇಳ್ಬಹುದು.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಸ್ವರಾ ಭಾಸ್ಕರ್ ವಿರುದ್ಧ ಅನೇಕರು ಕಮೆಂಟ್ ಮಾಡಿದ್ದಾರೆ. ಸ್ವರಾ ಭಾಸ್ಕರ್ ಈ ಹೇಳಿಕೆ ಹಿಂದೆ ರಾಜಕೀಯದ ನಂಟಿದೆ ಎಂದಿದ್ದಾರೆ. ಸ್ವರಾ ಭಾಸ್ಕರ್ ಗೆ ಈಗ ಪಕ್ಷದಿಂದ ಟಿಕೆಟ್ ಬೇಕಾಗಿದೆ. ಹಾಗಾಗಿ ಅವ್ರು ಡಿಂಪಲ್ ಯಾದವ್ ಹೊಗಳ್ತಿದ್ದಾರೆ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಸ್ವರಾ ಭಾಸ್ಕರ್ ಪತಿ ಫಹಾದ್ ಸಮಾಜವಾದಿ ಪಕ್ಷದ ನಾಯಕರಾಗಿದ್ದಾರೆ. ಸ್ವರಾ ಭಾಸ್ಕರ್ ಕೂಡ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. ದ್ವಿಲಿಂಗಿ ನಾವಲ್ಲ, ನಾನು ಅಂತ ಸ್ವರಾ ಹೇಳ್ಬೇಕು. ಸ್ವರಾ ಭಾಸ್ಕರ್ ಮಾತ್ರ ದ್ವಿಲಿಂಗಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸ್ವರಾ ಭಾಸ್ಕರ್ ಪರ ಬ್ಯಾಟ್ ಬೀಸಿದ್ದಾರೆ. ಇಂಥ ವಿಷ್ಯವನ್ನು ಹೇಳಲು ಸ್ವರಾ ಭಾಸ್ಕರ್ ಧೈರ್ಯ ಮಾಡಿದ್ದು, ಮೆಚ್ಚುವಂತಹದ್ದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಸದ್ಯ ಸ್ವರಾ ಭಾಸ್ಕರ್, ಸಿನಿಮಾ, ಟಿವಿ ಶೋಗಳಿಂದ ದೂರವಿದ್ದಾರೆ. 2023 ರಲ್ಲಿ, ಸ್ವರಾ ಮತ್ತು ಫಹಾದ್ ಮಗಳು ರಾಬಿಯಾಳನ್ನು ಸ್ವಾಗತಿಸಿದ್ದಾರೆ. ಮದುವೆಯಾದ ಕೇವಲ 9 ತಿಂಗಳ ನಂತ್ರ ರಾಬಿಯಾ ಜನಿಸಿದ್ದಾಳೆ. ಪ್ರಸ್ತುತ, ಸದ್ಯ ಪತಿ ಹಾಗೂ ಮಗಳ ಜೊತೆ ಸಮಯ ಕಳೆಯುತ್ತಿರುವ ಸ್ವರಾ ಭಾಸ್ಕರ್, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಹಿಂದೆ ಪತಿ ಧರ್ಮದ ಬಗ್ಗೆ ಅವಹೇಳನ ಮಾಡಿದ್ದವರಿಗೆ ಸ್ವರಾ ತಕ್ಕ ಉತ್ತರ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.