ಸದ್ದಿಲ್ಲದೇ ನಡೆಯಿತು ಉರ್ಫಿ ಎಂಗೇಜ್‌ಮೆಂಟ್‌? ಯಾರೀ ಹಿಂದೂ ಯುವಕ? ಸತ್ಯ ತಿಳಿದು ಅಭಿಮಾನಿಗಳು ಶಾಕ್‌!

Published : Feb 14, 2025, 01:33 PM ISTUpdated : Feb 14, 2025, 01:40 PM IST
ಸದ್ದಿಲ್ಲದೇ ನಡೆಯಿತು ಉರ್ಫಿ ಎಂಗೇಜ್‌ಮೆಂಟ್‌? ಯಾರೀ ಹಿಂದೂ ಯುವಕ? ಸತ್ಯ ತಿಳಿದು ಅಭಿಮಾನಿಗಳು ಶಾಕ್‌!

ಸಾರಾಂಶ

ಉರ್ಫಿ ಜಾವೇದ್‌, ವಿಚಿತ್ರ ಉಡುಗೆಗಳಿಂದಲೇ ಪ್ರಸಿದ್ಧಿ ಪಡೆದವರು, ಇತ್ತೀಚೆಗೆ ಹಿಂದೂ ಯುವಕನೊಂದಿಗಿನ ನಿಶ್ಚಿತಾರ್ಥದ ಫೋಟೋಗಳಿಂದ ಸುದ್ದಿಯಲ್ಲಿದ್ದಾರೆ. ಆದರೆ, ಇದು ಡಿಸ್ನಿ+ ಹಾಟ್‌ಸ್ಟಾರ್‌ನ "ಎಂಗೇಜ್ಡ್: ರೋಕಾ ಯಾ ಧೋಕಾ" ಕಾರ್ಯಕ್ರಮದ ಪ್ರಚಾರದ ತಂತ್ರವಾಗಿದೆ. ನಟ ಹರ್ಷ್ ಗುಜ್ರಾಲ್ ಜೊತೆಗೆ ಉರ್ಫಿ ಈ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದಾರೆ. ಇಸ್ಲಾಂ ತ್ಯಜಿಸಿರುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಉರ್ಫಿ, ಈಗ ಈ ಪ್ರಚಾರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಉರ್ಫಿ ಜಾವೇದ್‌ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡುವ ನಟಿ ಈಕೆ.  ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ.  ಆದರೆ ಕೆಲ ದಿನಗಳ ಹಿಂದೆ ನಟಿ  ಶಿವನ ದರ್ಶನಕ್ಕಾಗಿ 400 ಮೆಟ್ಟಿಲುಗಳನ್ನು ಚಕಾಚಕ್​ ಏರಿ ಹೋಗಿ ಸದ್ದು ಮಾಡಿದ್ದರು.  ಅದೂ ಸೀದಾ ಸಾದಾ ಬಟ್ಟೆಯಲ್ಲಿ ಹೋಗಿರುವುದರಿಂದ ಎಲ್ಲರೂ ಭೇಷ್​ ಭೇಷ್​ ಎಂದಿದ್ದರು.  ಉರ್ಫಿ ನೀವು ಹೀಗೆಯೇ ಇರಿ, ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಕೆಲವರು ಹಿಂದೂ ಧರ್ಮಕ್ಕೆ ಮತಾಂತರವಾದ್ರಾ ಎಂದು ಪ್ರಶ್ನಿಸಿದ್ದಾರೆ. ಮೆಟ್ಟಿಲುಗಳನ್ನು ಹತ್ತಿದ ನಟಿ, ಅಲ್ಲಿಯ ಬೃಹತ್​ ಗಂಟೆಯನ್ನು ಕಷ್ಟಪಟ್ಟು ಬಾರಿಸಿರುವುದನ್ನು ನೋಡಿ ಟ್ರೋಲ್​  ಮಾಡುತ್ತಿದ್ದವರೆಲ್ಲರೂ ಉರ್ಫಿಯನ್ನು ಹಾಡಿ ಹೊಗಳಿದ್ದರು.
 
ಇಸ್ಲಾಂನಲ್ಲಿ ಹುಟ್ಟಿರುವ ಉರ್ಫಿ ಜಾವೇದ್​, ಇತ್ತೀಚೆಗಷ್ಟೇ ಶಾಕಿಂಗ್​ ಹೇಳಿಕೆಯೊಂದನ್ನು ಕೊಟ್ಟಿದ್ದರು.  ನಟಿ, ತಮ್ಮ  ವೈಯಕ್ತಿಕ ನಂಬಿಕೆಗಳ ಬಗ್ಗೆ ಮಾತನಾಡುತ್ತಾ, ತಾನು ಇಸ್ಲಾಂ ಧರ್ಮವನ್ನು ಅನುಸರಿಸುವುದಿಲ್ಲ. ನನ್ನ ತಂದೆಯನ್ನು ನೋಡಿಯೇ, ಆತ ನಮಗೆ ಮತ್ತು ನನ್ನ ತಾಯಿಗೆ ಕೊಟ್ಟಿರುವ ಹಿಂಸೆಯನ್ನು ಕಂಡವಳು ನಾನು. ಅವರು ನನ್ನ  ತಾಯಿ ಮತ್ತು ನಮಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ನಾವೆಲ್ಲಾ ಹೆಣ್ಣು ಮಕ್ಕಳು ಎನ್ನುವುದು. ನಾನು ಮೂರನೆಯವಳು. ನಾನು ಕೂಡ ಹೆಣ್ಣಾಗಿ ಹುಟ್ಟಿದ ಮೇಲೆ ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ನಾಲ್ಕನೆಯ ಬಾರಿಗೆ ಅಮ್ಮ ಗರ್ಭಿಣಿಯಾದರು. ಆಗಲೂ ಹೆಣ್ಣು ಹುಟ್ಟಿದರೆ ಡಿವೋರ್ಸ್​  ನಡುನೀರಿನಲ್ಲಿ ಬಿಟ್ಟು ಬೇರೆ ಮದುವೆಯಾದರು. ಅವರು ತುಂಬಾ ಕ್ರೂರಿ ಎಂದಿರುವ ಉರ್ಫಿ, ಇಡೀ ಇಸ್ಲಾಂ ಧರ್ಮದ ಬಗ್ಗೆ ಕಟುವಾಗಿ ಮಾತನಾಡಿದ್ದರು. 

ಮುಸ್ಲಿಂ ವ್ಯಕ್ತಿಯನ್ನು ಮಾತ್ರ ಮದ್ವೆಯಾಗಲ್ಲ ಎಂದ ಉರ್ಫಿ ಜಾವೇದ್​ ಕೊಟ್ಟ ಕಾರಣ ಮಾತ್ರ ಶಾಕಿಂಗ್​!

ಇದೀಗ ಹಿಂದೂ ಯುವಕನ ಜೊತೆ ಉರ್ಫಿ ಎಂಗೇಜ್‌ಮೆಂಟ್‌ ಆಗಿರುವಂಥ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. Got Engaged ಎಂದೂ ನಟಿ ಬರೆದುಕೊಂಡಿದ್ದಾರೆ. ಈತ ಹಿಂದೂ ಯುವಕ ಎನ್ನುವುದೂ ಇದರಿಂದ ತಿಳಿಯುತ್ತದೆ. ಒಟ್ಟಿನಲ್ಲಿ ಉರ್ಫಿ ತಮ್ಮ ಆಸೆ ಈಡೇರಿಸಿಕೊಂಡರು ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಆತನ ಕಥೆ ಅಷ್ಟೇ ಎಂದೂ ತಮಾಷೆ ಮಾಡುತ್ತಿದ್ದಾರೆ. ಆದರೆ ಅಸಲಿಯತ್ತೇ ಬೇರೆ. ಇದನ್ನು ಕೇಳಿ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.

ಅಸಲಿಗೆ ಇದು ಕೆಲವರು ಅಂದುಕೊಂಡಂತೆ ಪಬ್ಲಿಸಿಟಿ ಸ್ಟಂಟ್‌ ಅಲ್ಲ. ಬದಲಿಗೆ ಇಂದಿನಿಂದ  ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ರೋಮಾಂಚಕಾರಿ ಕಾರ್ಯಕ್ರಮದ ಝಲಕ್‌ ಎನ್ನುವುದು ತಿಳಿದು ಬಂದಿದೆ.  ಉಂಗುರ ಮತ್ತು ನಿಗೂಢ ವ್ಯಕ್ತಿಯೊಂದಿಗೆ ಅವರು ಹೊಂದಿರುವ ವೈರಲ್ ಫೋಟೋ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಅವರ ಹೊಸ ಕಾರ್ಯಕ್ರಮ ಎಂಗೇಜ್ಡ್: ರೋಕಾ ಯಾ ಧೋಕಾದ ಫೋಟೋ ಆಗಿದೆ. ಇದರಲ್ಲಿ ಉರ್ಫಿ ಅವರು ನಟ  ಹರ್ಷ್ ಗುಜ್ರಾಲ್ ಅವರ ಜೊತೆ ನಟಿಸುತ್ತಿದ್ದಾರೆ. ಅದರ ಫೋಟೋಗಳು ಇದಾಗಿವೆ. ಅಷ್ಟಕ್ಕೂ ಈ ಹಿಂದೆ ನಟಿ ಮುಸ್ಲಿಮರ ಬಗ್ಗೆ ಹೇಳಿದ್ದ ಹೇಳಿಕೆಗಳಿಂದ ಆಕೆ ಹಿಂದೂ ಯುವಕನನ್ನು ಮದುವೆಯಾಗುತ್ತಿರುವ ಸಾಧ್ಯತೆ ಇದೆ ಎಂದೇ ಹೇಳಲಾಗಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಹೀಗೆ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ನಟಿ.  

400 ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಉರ್ಫಿ ಜಾವೇದ್​! ವಿಡಿಯೋದಲ್ಲಿ ಡ್ರೆಸ್​ ನೋಡಿ ಫ್ಯಾನ್ಸ್​ ಶಾಕ್​

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ