Intimate Scenes: ಮುತ್ತಿನ ದೃಶ್ಯದಲ್ಲಿ ಮಾಧುರಿ ದೀಕ್ಷಿತ್‌ ತುಟಿಯನ್ನು ಕಡಿದೇಬಿಟ್ಟಿದ್ದ ಆ ನಟ!

Published : Feb 13, 2025, 09:46 PM ISTUpdated : Feb 14, 2025, 10:17 AM IST
Intimate Scenes: ಮುತ್ತಿನ ದೃಶ್ಯದಲ್ಲಿ ಮಾಧುರಿ ದೀಕ್ಷಿತ್‌ ತುಟಿಯನ್ನು ಕಡಿದೇಬಿಟ್ಟಿದ್ದ ಆ ನಟ!

ಸಾರಾಂಶ

ಬಾಲಿವುಡ್‌ನಲ್ಲಿ ಚುಂಬನದ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಕೆಲವು ನಟರು ಮಿತಿಮೀರಿ ವರ್ತಿಸಿದ ಘಟನೆಗಳು ಆಗಿವೆ. ಮಾಧುರಿ ದೀಕ್ಷಿತ್, ರೇಖಾ ಸೇರಿದಂತೆ ಹಲವು ನಟಿಯರು ಇಂತಹ ಅನುಭವಗಳನ್ನು ಎದುರಿಸಿದ್ದಾರೆ. ಒಬ್ಬ ನಟನಂತೂ ಮಾಧುರಿ ದೀಕ್ಷಿತ್‌ಗೆ ಸಹಿಸಲಾಗದ ಹಿಂಸೆಕೊಟ್ಟುಬಿಟ್ಟಿದ್ದ!

ಬಾಲಿವುಡ್‌ ಆಗಲೀ ಹಾಲಿವುಡ್‌ ಆಗಲೀ ಅಥವಾ ಸ್ಯಾಂಡಲ್‌ವುಡ್‌ ಆಗಲೀ. ಬೆಡ್‌ರೂಂ ಸೀನುಗಳು, ಚುಂಬನದ ದೃಶ್ಯಗಳನ್ನು ಚಿತ್ರೀಕರಿಸುವುದು ಒಂದು ಸವಾಲೇ ಸರಿ. ಇತ್ತೀಚಿನ ದಿನಗಳಲ್ಲಿ ಇಂಟಿಮಸಿ ಸೀನ್‌ ಕೋಆರ್ಡಿನೇಟರ್‌ಗಳಿರುತ್ತಾರೆ. ನಾಯಕಿಯರು ಅಥವಾ ನಾಯಕರು ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಬಹುದು. ಆದರೆ ಹಿಂದೆಲ್ಲಾ ಆ ವ್ಯವಸ್ಥೆ ಇರಲಿಲ್ಲ. ಡೈರೆಕ್ಟರ್‌ ಹೇಳಿದ್ದೇ ಅಂತಿಮ. ಹೀಗಿದ್ದಾಗ ಕೆಲವು ಧಾಡಸಿ ನಾಯಕರು ಮಿತಿ ಮೀರಿ ವರ್ತಿಸಿಬಿಡುತ್ತಿದ್ದರು. ಚಿತ್ರರಂಗಕ್ಕೆ ಹೊಸದಾಗಿ ಬಂದ ನಾಯಕಿಯರಂತೂ ಇವರ ದಾಳಿಗೆ ಸಿಕ್ಕಿ ತರಗೆಲೆಗಳಂತಾಗಿಬಿಡುತ್ತಿದ್ದರು. ಮಾಧುರಿ ದೀಕ್ಷಿತ್‌, ರೇಖಾ ಅವರು ಕೂಡ ಇದಕ್ಕೆ ಹೊರತಲ್ಲ. ಮಾಧುರಿ, ರೇಖಾ ಮತ್ತು ಇನ್ನೂ ಕೆಲವು ನಟಿಯರಿಗೆ ಮುತ್ತಿಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡತೆ ವರ್ತಿಸಿದ ಕೆಲವು ಹೀರೋಗಳ ಕತೆ ಇಲ್ಲಿದೆ.  

ಮಾಧುರಿ ದೀಕ್ಷಿತ್ ಮತ್ತು ವಿನೋದ್ ಖನ್ನಾ: ಮಾಧುರಿ ಮತ್ತು ವಿನೋದ್ ಖನ್ನಾ ನಡುವಿನ ಲಿಪ್-ಲಾಕ್ ದೃಶ್ಯವನ್ನು ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಚುಂಬನವೆಂದು ಪರಿಗಣಿಸಲಾಗಿದೆ. 80ರ ದಶಕದಲ್ಲಿ ಬಾಲಿವುಡ್‌ನಲ್ಲಿ ಇಂತಹ ಚುಂಬನದ ದೃಶ್ಯಗಳು ಸಾಮಾನ್ಯವಾಗಿರಲಿಲ್ಲ. ದಯಾವನ್ ಚಿತ್ರೀಕರಣದ ಸಮಯದಲ್ಲಿ, ವಿನೋದ್ ಖನ್ನಾ ಚುಂಬನದ ದೃಶ್ಯದಲ್ಲಿ ಪೂರ್ತಿ ಉದ್ರೇಕಗೊಂಡು ಮುಳುಗಿಹೋಗಿದ್ದರು. ನಿರ್ದೇಶಕರು 'ಕಟ್' ಎಂದು ಕೂಗಿದರೂ ಸಹ ವಿನೋದ್‌ಗೆ ಅದರ ಅರಿವೇ ಇರಲಿಲ್ಲ. ಆತ ಮಾಧುರಿಯ ತುಟಿಯನ್ನು ಚುಂಬಿಸುವುದನ್ನು ಮುಂದುವರಿಸಿದ ಮತ್ತು ಆಕೆಯ ತುಟಿಯನ್ನು ಕಚ್ಚಿದ! ಕಡೆಗೆ ಮಾಧುರಿ ಬಲವಂತವಾಗಿ ಬಿಡಿಸಿಕೊಳ್ಳಬೇಕಾಯಿತು.

ವಿನೋದ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ: ವಿನೋದ್‌ ಖನ್ನಾ ಇಂಥ ಮೈಮರೆವಿಗೆ ಕುಖ್ಯಾತ ಎಂದು ಕಾಣುತ್ತದೆ. ಡಿಂಪಲ್‌ ಜೊತೆಗೂ ಅವನು ಹೀಗೇ ವರ್ತಿಸಿದ್ದ. ಪ್ರೇಮ್ ಧರಮ್ ಚಿತ್ರದ ಇಂಟಿಮೇಟ್ ದೃಶ್ಯದಲ್ಲಿ ವಿನೋದ್ ಖನ್ನಾ, ಡಿಂಪಲ್ ಜೊತೆ ಅನುಚಿತವಾಗಿ ವರ್ತಿಸಿದ್ದ. ಮಹೇಶ್ ಭಟ್ ಒಂದಕ್ಕಿಂತ ಹೆಚ್ಚು ಬಾರಿ 'ಕಟ್' ಎಂದು ಕೂಗಿದರೂ ಖನ್ನಾ ದೃಶ್ಯವನ್ನು ಮುಗಿಸಲು ನಿರಾಕರಿಸಿದ. ಖನ್ನಾನ ಈ ಅನುಚಿತ ವರ್ತನೆಗಾಗಿ ಡಿಂಪಲ್ ಕಪಾಡಿಯಾ ಬಳಿ ಮಹೇಶ್‌ ಭಟ್‌ ಅವರೇ ಕ್ಷಮೆ ಕೇಳಬೇಕಾಯಿತು.

ರೇಖಾ ಮತ್ತು ಬಿಸ್ವಜಿತ್ ಚಟರ್ಜಿ: ಬಿಸ್ವಜಿತ್ ಚಟರ್ಜಿ ತಮ್ಮ ಮೊದಲ ಹೆಸರಿನಿಂದಲೇ ಚಿರಪರಿಚಿತ. ಅವರು 1960ರ ದಶಕದಲ್ಲಿ ಹಿಂದಿ ಚಲನಚಿತ್ರಗಳಲ್ಲಿ ನಿರ್ವಹಿಸಿದ ಪ್ರಣಯ ಪಾತ್ರಗಳಿಗಾಗಿ ಚಿತ್ರರಸಿಕರು ಅವರನ್ನು ಕೊಂಡಾಡುತ್ತಾರೆ. ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ಒಂದು ಗೊಂದಲದ ಘಟನೆಯಿದೆ. ಅದು ರೇಖಾ ಅವರ ಚೊಚ್ಚಲ ಚಿತ್ರ ಅಂಜನಾ ಸಫರ್ ಚಿತ್ರೀಕರಣದ ಸಮಯ. ಆಗ ಇನ್ನೂ ರೇಖಾಗೆ ಬರೀ 15 ವರ್ಷ. ರೇಖಾಗೆ ಬಿಸ್ವಜಿತ್‌ ಬಲವಂತವಾಗಿ, ರೇಖಾ ಅನುಮತಿಯಿಲ್ಲದೆ ಚುಂಬಿಸಿದರು. ಘಟನೆಯನ್ನು ರೇಖಾ ಅವರ ಜೀವನಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ ಉಲ್ಲೇಖಿಸಲಾಗಿದೆ.

58 ಪ್ರಶಸ್ತಿ ಬಾಚಿಕೊಂಡ ಆ ಫಿಲಂ ಶೂಟಿಂಗ್‌ಗೆ ಶಾರುಖ್‌ ಖಾನ್‌ ಕುಡಿದೇ ಬರುತ್ತಿದ್ದ!

ಜಯಪ್ರದಾ ಮತ್ತು ದಲೀಪ್ ತಾಹಿಲ್: ಜಯಪ್ರದಾ ಜೊತೆಗಿನ ಮಿಲನದ ಸೀನ್‌ ಒಂದರ ಚಿತ್ರೀಕರಣದ ವೇಳೆ, ದಲೀಪ್ ತಾಹಿಲ್ ಮೈಮೇಲಿನ ನಿಯಂತ್ರಣವನ್ನು ಕಳೆದುಕೊಂಡ. ರೀಲ್ ಮತ್ತು ರಿಯಲ್‌ ನಡುವಿನ ವ್ಯತ್ಯಾಸವನ್ನು ಮರೆತು ವರ್ತಿಸಿದ. ಜಯಪ್ರದಾ ಇದರಿಂದ ಸಿಟ್ಟಿಗೆದ್ದರು ಮತ್ತು ತಾಹಿಲ್‌ಗೆ ಕಪಾಲಮೋಕ್ಷ ಮಾಡಿದರು. ಈ ಘಟನೆಯ ನಂತರ ಸೆಟ್ ತೊರೆದು ಹೋದರು.

ಪ್ರೇಮ್ ನಾಥ್ ಮತ್ತು ಫರ್ಯಾಲ್: ಹಿಂದಿ ನಟ ಪ್ರೇಮ್ ನಾಥ್ ಅವರೊಂದಿಗೆ ಒಂದು ಚಿತ್ರದಲ್ಲಿ ಫರ್ಯಾಲ್‌ ಸಹನಟಿಯಾಗಿ ನಟಿಸಿದ್ದರು. ಒಂದು ದೃಶ್ಯದಲ್ಲಿ ಪ್ರೇಮ್‌ ನಾಥ್‌ ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡರು. ಫರ್ಯಾಲ್ ಅವರ ಮೈಮೇಲೆ ಅನಗತ್ಯವಾಗಿ ಕೈಹಾಕಲು ಆರಂಭಿಸಿದರು. ಇದು ಫರ್ಯಾಲ್‌ಗೆ ಅತ್ಯಂತ ಕಿರಿಕಿರಿ ಉಂಟುಮಾಡಿತು. ಅವಳು ತಕ್ಷಣವೇ ಅವನ ಹಿಡಿತದಿಂದ ತಪ್ಪಿಸಿಕೊಂಡಳು.

ಚಿರಂಜೀವಿ ಹೇಳಿದ ಒಂದು ಸಣ್ಣ ಮಾತಿನಿಂದ 500 ಸಿನಿಮಾಗಳಲ್ಲಿ ನಟಿಸಿದ್ದಾರಂತೆ ಒಬ್ಬ ಸ್ಟಾರ್ ಹಾಸ್ಯನಟ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!