
ಪಾಕಿಸ್ತಾನ ಮೂಲದ ಪತ್ರಕರ್ತ, ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಉಮೈರ್ ಸಂಧು ಭಾರತೀಯ ಸೆಲೆಬ್ರಿಟಿಗಳ ವಿರುದ್ಧ ಟ್ವಿಟ್ಟರ್‌ನಲ್ಲಿ ಕಿಡಿ ಕಾರುತ್ತಿರುತ್ತಾರೆ. ಮಾನಹಾನಿಕರ ಪೋಸ್ಟ್ ಶೇರ್ ಮಾಡಿ ಭಾರತದ ಅನೇಕ ಸಿನಿ ಗಣ್ಯರನ್ನು ತೇಜೋವಧೆ ಮಾಡುವುದು ಎಂದರೆ ಇವರಿಗೆ ಇನ್ನಿಲ್ಲದ ಪ್ರೀತಿ. ಇವರ ವಿರುದ್ಧ ಇದಾಗಲೇ ಹಲವಾರು ಮಂದಿ ಕೇಸ್ ಕೂಡ ದಾಖಲಿಸಿದ್ದಾರೆ. ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಅನ್ನೋ ಟೈಟಲ್ ಜತೆಗೆ ಹಿಂದಿ ಸಿನಿಮಾಗಳ ವಿದೇಶಿ ಸೆನ್ಸಾರ್ ಬೋರ್ಡ್‌ನ ಸದಸ್ಯನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರಂತೆ ಉಮೈರ್. ಆದರೆ, ಇದೆಲ್ಲದಕ್ಕಿಂತ ತಮ್ಮ ಟ್ವಿಟ್‌ಗಳ ಮೂಲಕವೇ ಈ ಉಮೈರ್ ಸದ್ದು ಮಾಡುತ್ತಿರುತ್ತಾರೆ.
ಈ ಹಿಂದೆ ಉಮೈರ್ ಅವರು ಯಶ್ ಬಗ್ಗೆಯೂ ಕೀಳಾಗಿ ಮಾತನಾಡಿದ್ದರು. ಅಷ್ಟಕ್ಕೂ ಯಶ್ ಬಗ್ಗೆ ಹೇಳಿದ್ದೇನು ಅಂತೀರಾ?, ಯಶ್ ಜೊತೆ ಸಿನಿಮಾ ಮಾಡಲು ಯಾವ ನಿರ್ಮಾಪಕರು ಮುಂದೆ ಬರ್ತಿಲ್ಲ. ಅವಕ ಆಟಿಟ್ಯೂಡ್‌ನಿಂದ ಅನೇಕ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವರನ್ನು ದೂರ ಇಟ್ಟಿವೆ ಎಂದು 'ಯಶ್ ಆ್ಯಟಿಟ್ಯೂಡ್ ನೋಡಿ ದಕ್ಷಿಣ ಹಾಗೂ ಬಾಲಿವುಡ್ನ ಪ್ರೊಡಕ್ಷನ್ ಹೌಸ್ಗಳು ಅವರನ್ನು ಹೊರಗಿಟ್ಟಿವೆ. ಕೆಜಿಎಫ್ 2 ಬಳಿಕ ಅವರು ಪ್ರತಿ ಚಿತ್ರಕ್ಕೆ 75 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ಇದು ತುಂಬಾನೇ ಹೆಚ್ಚಾಯಿತು ಅನ್ನೋದು ನಿರ್ಮಾಪಕರ ಅಭಿಪ್ರಾಯ. ಈ ಕಾರಣಕ್ಕೆ ಯಾರೂ ಯಶ್ ಜೊತೆ ಸಿನಿಮಾ ಮಾಡುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಉಮೈರ್‌ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಬಹುತೇಕ ಖ್ಯಾತನಾಮ ಸೆಲೆಬ್ರಿಟಿಗಳ ಬಗ್ಗೆ ಇವರು ಮಾತನಾಡುತ್ತಿರುತ್ತಾರೆ.
ಇದೀಗ ಇವರು ಬಾಲಿವುಡ್ನ ಹಾಟ್ ನಟಿಯ ಕುರಿತು ಟ್ವೀಟ್ ಮಾಡಿದ್ದಾರೆ. ಐಟಂ ಡ್ಯಾನ್ಸರ್ ಕೂಡ ಆಗಿರುವ ನೋರಾ ಫತೇಹಿ ಬಗ್ಗೆ ಉಮೈರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಅಷ್ಟಕ್ಕೂಅವರು ಹೇಳಿದ್ದೇನೆಂದರೆ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತ್ಯಂತ ದುಬಾರಿ ನೈಟ್ ಗರ್ಲ್ ಯಾರೆಂದರೆ ಅದು ನೋರಾ ಫತೇಹಿ. ಪ್ರತಿಯೊಬ್ಬ ನಟ, ರಾಜಕಾರಣಿ, ಉದ್ಯಮಿಗಳು ಅದರಲ್ಲೂ ಅಂಬಾನಿ ಸಹ ಈಕೆ ಜತೆ ಮಲಗಲು ಇಷ್ಟಪಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಪರ- ವಿರೋಧ ನಿಲುವು ವ್ಯಕ್ತವಾಗಿದೆ. ಇದಕ್ಕೆ ಹಲವರು ಕಿಡಿ ಕಾರಿದ್ದು, ನೀವೇಕೆ ಪ್ರಯತ್ನಿಸಲಿಲ್ಲ ಎನ್ನುತ್ತಿದ್ದಾರೆ.
ಇನ್ನು ನೋರಾ ಅವರ ಕುರಿತು ಹೇಳುವುದಾದರೆ, ಇವರು ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದಾರೆ.ಇವರು ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ. ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್ ಸಿಕ್ಕಿತ್ತು.
ಬಿಗ್ಬಾಸ್ಗೆ ಹೋಗ್ತೀರಾ ಎಂದಾಗ ಡ್ರೋನ್ ಪ್ರತಾಪ್ ಹಿಂದೆ ಹೇಳಿದ್ದೇನು? ವಿಡಿಯೋ ವೈರಲ್- ಸಕತ್ ಟ್ರೋಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.