
ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಈಚೆಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಹಿಳಾ ಫ್ಯಾನ್ ಒಬ್ಬರಿಗೆ ಲಿಪ್‌ಲಾಕ್ ಮಾಡಿ ಭಾರಿ ಟ್ರೋಲ್‌ಗೆ ಒಳಗಾಗಿದ್ದರು. ಇವರ ಸಂಗೀತದಿಂದ ಯುವತಿಯೊಬ್ಬಳು ಮೋಡಿಗೊಳಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಸಂದರ್ಭದಲ್ಲಿ, ಆಕೆಯೂ ಮೈಮರೆತಾದ ಉದಿತ್ ಅವರು ಆಕೆಯ ತುಟಿಗೆ ಚುಂಬಿಸಿದ್ದರು. ಯುವತಿ ಕೂಡ ತುಂಬಾ ಖುಷಿಯಿಂದಲೇ ಇದ್ದರು. ಆದರೆ ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಉದಿತ್ ನಾರಾಯಣ್ ಅವರ ವಿರುದ್ಧ ಇನ್ನಿಲ್ಲದ ಟೀಕೆಗಳು ವ್ಯಕ್ತವಾಗಿದ್ದರು. ಈ ಸುದ್ದಿ ಸ್ವಲ್ಪ ತಣ್ಣಗಾಗುತ್ತಿದ್ದಂತೆಯೇ ಮತ್ತೊಂದು ವಿವಾದ ಉದಿತ್ ಅವರ ಬೆನ್ನು ಹತ್ತಿದೆ.
ಅವರ ಮೊದಲ ಪತ್ನಿ ರಂಜನಾ ಝಾ ಈಗ ಜೀವನಾಂಶ ಕೋರಿ ಆಸ್ತಿ ವಿವಾದಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಮಾಜಿ ಪತಿ ಉದಿತ್ ನಾರಾಯಣ ಅವರು ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ, ತಮ್ಮ ಆಸ್ತಿ ಕಬಳಿಸಿದ್ದಾರೆ ಎನ್ನುವುದು ಅವರ ಆರೋಪ. ಇವರಿಬ್ಬರ ಈ ಗಲಾಟೆ ಮುಂಚೆಯೂ ಕೋರ್ಟ್‌ಗೆ ಹೋಗಿತ್ತು. ಕೋರ್ಟ್ ಆದೇಶದಂತೆ ರಂಜನಾ ಅವರಿಗೆ ಉದಿತ್ ನಾರಾಯಣ ಅವರು, ತಿಂಗಳಿಗೆ 25 ಸಾವಿರ ರೂ ನೀಡುತ್ತಿದ್ದಾರೆ. 1 ಕೋಟಿ ರೂಪಾಯಿ ಮೌಲ್ಯದ ಭೂಮಿ ಹಾಗೂ ಮನೆ ಜೊತೆಗೆ, 25 ಲಕ್ಷ ಬೆಲೆಯ ಆಭರಣಗಳನ್ನೂ ನೀಡಲಾಗಿದೆ ಎನ್ನಲಾಗಿದೆ. ಇದನ್ನು ರಂಜನಾ ಮಾರಿಕೊಂಡಿರುವುದಾಗಿ ವರದಿಯಾಗಿದ್ದು, ಇದರ ಬೆನ್ನಲ್ಲೇ ಪುನಃ ಮಾಜಿ ಪತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಶ್ರೀದೇವಿ ಸಾವಿಗಿಂದು 7 ವರ್ಷ: ವಾರದ ಹಿಂದೆಯೇ ನಡೆದಿತ್ತು ಸಂಚು? ನಟಿಗೆ ಮಾಮುಷಿ ವಿಷ ಕೊಟ್ಟವರಾರು?
ಉದಿತ್ ನಾರಾಯಣ್ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅವರ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಂಜನಾ ಆರೋಪಿಸಿದ್ದಾರೆ. ಈ ಕೇಸ್‌ಗೆ ಸಂಬಂಧಿಸಿದಂತೆ ಉದಿತ್ ನಾರಾಯಣ ಅವರು ಕೋರ್ಟ್‌ಗೆ ಹಾಜರಾಗಿದ್ದು, ಆರೋಪ ತಳ್ಳಿ ಹಾಕಿದ್ದಾರೆ ಮತ್ತು ಪತ್ನಿಯ ಜೊತೆ ರಾಜಿ ಮಾಡಿಕೊಳ್ಳಲು ಇಚ್ಛಿಸುತ್ತಿಲ್ಲ ಎಂದಿದ್ದಾರೆ. ಈಕೆಯೇ ನನ್ನಿಂದ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾಳೆ ಎಂದಿದ್ದಾರೆ ಅವರು.
ಅಂದಹಾಗೆ, ಈ ಜೋಡಿ 1984ರಲ್ಲಿ ವಿವಾಹ ಆಗಿತ್ತು. ಉದಿತ್ ಅವರ ವೃತ್ತಿ ಜೀವನ ಉತ್ತಮವಾಗುತ್ತಾ ಬಂದಂತೆ ಸಂಬಂಧದಲ್ಲಿ ಒಡಕು ಉಂಟಾಗಿತ್ತು. ಇಬ್ಬರೂ ಬೇರೆ ಬೇರೆಯಾದರು. ಇದೀಗ ಮಾಜಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ, ಜೊತೆಗೆ ತಮಗೆ ವಯಸ್ಸಾಗುತ್ತಾ ಇರುವ ಹಿನ್ನೆಲೆಯಲ್ಲಿ ಒಂಟಿಯಾಗಿರುವುದು ಕಷ್ಟವಾಗಿದೆ. ಉದಿತ್ ತಮಗೆ ಮೋಸ ಮಾಡಿದ್ದಾರೆ ಎಂದು ರಂಜನಾ ಹೇಳಿದ್ದಾರೆ.
ಸ್ವಂತ ತಂಗಿಗೇ ನಟಿ ಶ್ರೀದೇವಿಯಿಂದ ಮೋಸ? ಅಂತ್ಯಕ್ರಿಯೆಗೆ ಗೈರಾಗಿದ್ದೇಕೆ? ಯಾರೀ ನಿಗೂಢ ಸಹೋದರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.