ತಪ್ಪು ಜಾಗದಲ್ಲಿ ಉದಿತ್​ ನಾರಾಯಣ್​ ಮುತ್ತು ಕೊಟ್ಟರು ಎಂದ ಬಾಲಿವುಡ್​ ನಟಿ! ಗಾಯಕ ಹೇಳಿದ್ದೇನು?

Published : Mar 11, 2025, 11:00 PM ISTUpdated : Mar 12, 2025, 10:15 AM IST
ತಪ್ಪು ಜಾಗದಲ್ಲಿ ಉದಿತ್​ ನಾರಾಯಣ್​ ಮುತ್ತು ಕೊಟ್ಟರು ಎಂದ ಬಾಲಿವುಡ್​ ನಟಿ! ಗಾಯಕ ಹೇಳಿದ್ದೇನು?

ಸಾರಾಂಶ

ಖ್ಯಾತ ಗಾಯಕ ಉದಿತ್ ನಾರಾಯಣ್ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗೆ ಮುತ್ತಿಕ್ಕಿದ್ದು ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಎರಡು ವರ್ಷಗಳ ಹಿಂದಿನ ಘಟನೆ ಎಂದಿದ್ದಾರೆ. ಬಾಲಿವುಡ್ ನಟಿ ಕುಣಿಕಾ ಸದಾನಂದ್ ಉದಿತ್ ನಾರಾಯಣ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಉದಿತ್ ನಾರಾಯಣ್ ಹಲವು ಭಾಷೆಗಳಲ್ಲಿ ಹಾಡಿದ್ದು, ರಾಷ್ಟ್ರೀಯ ಪ್ರಶಸ್ತಿ ಹಾಗೂ ಪದ್ಮಭೂಷಣ ಪುರಸ್ಕಾರ ಪಡೆದಿದ್ದಾರೆ.

 ಖ್ಯಾತ ಗಾಯಕ ಉದಿತ್‌ ನಾರಾಯಣ್‌ ಅವರು ಈಚೆಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಹಿಳಾ ಫ್ಯಾನ್‌ ಒಬ್ಬರಿಗೆ ಲಿಪ್‌ಲಾಕ್‌ ಮಾಡಿ ಭಾರಿ ಟ್ರೋಲ್‌ಗೆ ಒಳಗಾಗಿದ್ದರು. ಇವರ ಸಂಗೀತದಿಂದ ಯುವತಿಯೊಬ್ಬಳು ಮೋಡಿಗೊಳಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಸಂದರ್ಭದಲ್ಲಿ, ಆಕೆಯೂ ಮೈಮರೆತಾದ ಉದಿತ್‌ ಅವರು ಆಕೆಯ ತುಟಿಗೆ ಚುಂಬಿಸಿದ್ದರು. ಯುವತಿ ಕೂಡ ತುಂಬಾ ಖುಷಿಯಿಂದಲೇ ಇದ್ದರು. ಆದರೆ ಇದರ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಉದಿತ್‌ ನಾರಾಯಣ್‌ ಅವರ ವಿರುದ್ಧ ಇನ್ನಿಲ್ಲದ ಟೀಕೆಗಳು ವ್ಯಕ್ತವಾಗಿದ್ದರು. ಈ ಸುದ್ದಿ ಸ್ವಲ್ಪ ತಣ್ಣಗಾಗುತ್ತಿದ್ದಂತೆಯೇ ಉದಿತ್​ ಅವರು, ಈ ಬಗ್ಗೆ ರಿಯಾಕ್ಟ್​ ಮಾಡಿದ್ದಾರೆ. 

  'ಪಿಂಟು ಕಿ ಪಪ್ಪಿ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಉದಿತ್​ ನಾರಾಯಣ್​ ಅವರು,  ಅಲ್ಲಿಯೇ ಉಪಸ್ಥಿತರಿದ್ದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರನ್ನು ಉದ್ದೇಶಿಸಿ ಮಾತನಾಡಿದಂತೆ  ಮಾಡಿ, ತಮ್ಮ ಕಿಸ್​ ಬಗ್ಗೆಯೂ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.  ನಾನು ಗಣೇಶ್  ಅವರನ್ನು ಅಭಿನಂದಿಸುತ್ತೇನೆ. ಅವರು ಪಿಂಟು ಕಿ ಪಪ್ಪಿ ಎನ್ನುವ  ಅದ್ಭುತ ಶೀರ್ಷಿಕೆಯನ್ನು ನೀಡಿದ್ದಾರೆ. ಆದರೆ, ನೀವು ಶೀರ್ಷಿಕೆಯನ್ನು ಬದಲಾಯಿಸಿ ಪಿಂಟು ಕಿ ಪಪ್ಪಿ ಬದಲು '?  'ಉದಿತ್ ಕಿ ಪಪ್ಪಿ' ಮಾಡಿದರೆ ಚೆನ್ನಾಗಿತ್ತು ಎಂದಿದ್ದಾರೆ.  ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಇಡೀ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಸಂಗೀತ ಅದ್ಭುತವಾಗಿದೆ. ಬರವಣಿಗೆ ಕೂಡ ಅದ್ಭುತವಾಗಿದೆ. ನೀವು ಹಾಡಿದ ಮತ್ತು ರೆಕಾರ್ಡ್ ಮಾಡಿದ ಹಾಡುಗಳನ್ನು ಎಲ್ಲರೂ ಹೊಗಳುತ್ತಾರೆ. ಆದರೆ ಇದು ನಿಜವಾಗಿಯೂ ಪ್ರಶಂಸನೀಯ ಎಂದಿದ್ದಾರೆ. 

ಬೋಲ್ಡ್ ಬ್ಯೂಟಿಯಿಂದ ಭಿಕ್ಷುಕಿಯವರೆಗೆ... ಮನದ ಮಾತು ಹೀಗೆ ತೆರೆದಿಟ್ಟ ಬಿಗ್​ಬಾಸ್​ ನೀತು ವನಜಾಕ್ಷಿ...

 ಕೊನೆಗೆ ತಮ್ಮ ವೈರಲ್​ ವಿಡಿಯೋದ ಬಗ್ಗೆ ಮಾತನಾಡಿದ ಅವರು, ಇದು ನಿಜವಾಗಿಯೂ ಈಗಿನ ವಿಡಿಯೋ ಅಲ್ಲ. ಅದನ್ನು ಈಗ ವೈರಲ್​ ಮಾಡಿರುವ ಉದ್ದೇಶ ಏನಿತ್ತೋ ಗೊತ್ತಿಲ್ಲ ಎಂದಿದ್ದಾರೆ. ಅದು ಎರಡು ವರ್ಷ ಹಿಂದಿನದ್ದು. ಅದು ಆಸ್ಟ್ರೇಲಿಯಾದಲ್ಲಿ ನಡೆದದ್ದು. ನಾನು ಮಾಡಿದ್ದರಲ್ಲಿ ತಪ್ಪೇನಿದೆ? ಇಷ್ಟೊಂದು ಕಾಂಟ್ರವರ್ಸಿ ಮಾಡುವ ಅಗತ್ಯವೇನಿತ್ತು ಎಂದಿರುವ ಉದಿತ್​ ನಾರಾಯಣ್​ ಅವರು, ತುಂಬಾ ಸುಂದರವಾದ ಶೀರ್ಷಿಕೆಗಳ ಜೊತೆ ಇದರ ಸುದ್ದಿಗಳು ಪ್ರಕಟವಾಗಿವೆ, ಓದಲು ಮಜಾ ಇತ್ತು ಎಂದಿದ್ದಾರೆ. ಉದಿತ್​ ನಾರಾಯಣ್ ಪರವಾಗಿ ಬಾಲಿವುಡ್​​ ನಟಿ ಕುಣಿಕಾ ಸದಾನಂದ್ ಸಮರ್ಥಿಸಿಕೊಂಡಿದ್ದಾರೆ.   ಉದಿತ್ ನಾರಾಯಣ್ ಅವರು ತುಂಬಾ ಸುಸಂಸ್ಕೃತ ಜನರು. ಅವರು ಮುತ್ತಿಟ್ಟಿದ್ದರಲ್ಲಿ ತಪ್ಪೇನಿಲ್ಲ. ಆದರೆ  ತಪ್ಪಾದ ಸ್ಥಳದಲ್ಲಿ ಮುತ್ತಿಟ್ಟರು' ಎಂದು ಹೇಳಿದರು. ಅವರು  ಕೆನ್ನೆಗೆ ಮುತ್ತಿಡಬೇಕಿತ್ತು ಎಂದಿದ್ದಾರೆ. 

ಇನ್ನು ಉದಿತ್​ ನಾರಾಯಣ್​ ಅವರ ಕುರಿತು ಹೇಳುವುದಾದರೆ, 69 ವರ್ಷದ ಗಾಯಕ ಹಿಂದಿ, ತೆಲುಗು, ಕನ್ನಡ, ತಮಿಳು, ಬಂಗಾಳಿ, ಸಿಂಧಿ, ಒಡಿಯಾ, ಭೋಜ್‌ಪುರಿ, ನೇಪಾಳಿ, ಮಲಯಾಳಂ, ಅಸ್ಸಾಮಿ, ಬಘೇಲಿ ಮತ್ತು ಮೈಥಿಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತ ಸರ್ಕಾರ ಅವರಿಗೆ 2009 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಗೊಂಬೆ ಜೊತೆ ಮದ್ವೆಯಾದ ಮಹಿಳೆ ಈಗ ಎರಡು ಮಕ್ಕಳ ತಾಯಿ! ವಿಚಿತ್ರ ಎನಿಸಿರೋ ಈ ಸ್ಟೋರಿ ಕೇಳಿ....

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?
ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!