ಬೆಳ್ಳಂಬೆಳಗ್ಗೆ ಶಾರುಖ್ ಖಾನ್ ಬಂಗ್ಲೆಗೆ ಏಕಾಏಕಿ ನುಗ್ಗಿದ ಇಬ್ಬರ ಬಂಧನ; ವಿಚಾರಣೆಗೂ ಮುನ್ನವೇ FIR ದಾಖಲು

Published : Mar 03, 2023, 11:35 AM IST
ಬೆಳ್ಳಂಬೆಳಗ್ಗೆ ಶಾರುಖ್ ಖಾನ್ ಬಂಗ್ಲೆಗೆ ಏಕಾಏಕಿ ನುಗ್ಗಿದ ಇಬ್ಬರ ಬಂಧನ; ವಿಚಾರಣೆಗೂ ಮುನ್ನವೇ FIR ದಾಖಲು

ಸಾರಾಂಶ

ವಿಚಾರಣೆಗೂ ಮುನ್ನವೇ ಅಭಿಮಾನಿಗಳ ವಿರುದ್ಧ ಎಫ್‌ಐಆರ್‌ ದಾಖಲು. ಮನ್ನತ್‌ ಬಂಗ್ಲೆಗೆ ನುಗ್ಗಿದ ವ್ಯಕ್ತಿಗಳು ಯಾರು?

ಬಾಲಿವುಡ್‌ ಕಿಂಗ್ ಶಾರುಖ್ ಖಾನ್‌ ಮುಂಬೈನಲ್ಲಿ ಭವ್ಯ ಬಂಗ್ಲೆಯೊಳಗೆ ಇಬ್ಬರು ಅಭಿಮಾನಿಗಳು ಪ್ರವೇಶ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ ತಡೆದು ವಿಚಾರಣೆ ಶುರು ಮಾಡುವಷ್ಟರಲ್ಲಿ ಎಫ್‌ಐಆರ್‌ ದಾಖಲಾಗಿದೆ. ಯಾವ ಕಾರಣಕ್ಕೆ ಏಕಾಏಕಿ ನುಗ್ಗಿದ್ದಾರೆ ಎಂದು ತಿಳಿದು ಬಂದಿಲಲ್ಲ ಆದರೆ ಶಾರುಖ್‌ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಘಟನೆ ನಡೆದಿರುವುದು ಬೆಳ್ಳಂಬೆಳಗ್ಗೆ 4 ಗಂಟೆಗೆ ನಡೆದಿದೆ.

'ಮನ್ನತ್ ಬಂಗ್ಲೆ ಸೆಕ್ಯೂರಿಟಿ ಗಾರ್ಡ್‌ಗಳು ಇಬ್ಬರು ವ್ಯಕ್ತಿಗಳು ಟ್ರೆಸ್‌ಪಾಸ್ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ನೋಡಲು 20 ವರ್ಷದ ವ್ಯಕ್ತಿಗಳಂತೆ ಕಾಣಿಸುತ್ತಿತ್ತು ಬೆಳ್ಳಂಬೆಳಗ್ಗೆ 4 ಗಂಟೆಗೆ ಘಟನೆ ನಡೆದಿದೆ. ಮನ್ನತ್‌ ಮನೆಯಲ್ಲಿ ಸ್ಟಾಫ್‌ಗಳನ್ನು ಪೊಲೀಸರಿಗೆ ತಿಳಿಸಿದ್ದಾರೆ. ಗಾರ್ಡ್‌ಗಳನ್ನು ಅವರನ್ನು ಬಂಧಿಸಿದ್ದರು. ಅವರನ್ನು ಹಿಡಿಯಲು ಟೀಂ ಕಳುಹಿಸಲಾಗಿತ್ತು' ಎಂದು ಬಾಂದ್ರಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶಾರುಖ್ ಖಾನ್ ಪತ್ನಿ ವಿರುದ್ಧ FIR ದಾಖಲು; ಹಣ ಪಡೆದರೂ ಅಮಾಯಕರ ಮನೆ ಮೇಲೆ ಕಣ್ಣಾಕಿರುವ ಗೌರಿ? 

ಠಾಣೆಗೆ ಕರೆದುಕೊಂಡು ವಿಚಾರಣೆ ಆರಂಭಿಸುವ ಮುನ್ನವೇ ಮನೆಯೊಳಗೆ ನುಗ್ಗಿದ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 'ಮನೆಯೊಳಗೆ ನುಗ್ಗಿದ ವ್ಯಕ್ತಿಗಳು ಶಾರುಖ್ ಖಾನ್ ಅವರ ಅಭಿಮಾನಿಯಾಗಿದ್ದು  ಹತ್ತಿರದಿಂದ ನಾಯಕನನ್ನು ನೋಡಬೇಕೆಂದು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರಿಬ್ಬರ ಫ್ಯಾಮಿಲಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ ತನಿಖೆ ನಡೆಯುತ್ತಿದೆ. ಗುಜರಾತ್‌ ಪೊಲೀಸರಿಗೆ ಕರೆ ಮಾಡಿ ಅವರಿಬ್ಬರ ಹೆಸರಿನಲ್ಲಿ ಏನಾದರೂ ಕ್ರಿಮಿನಲ್ ಕೇಸ್ ಇದ್ಯಾ ಎಂದು ಚೆಕ್ ಮಾಡಲಾಗುತ್ತಿದೆ. ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಪೊಲೀಸರು ಹೇಳಿದ್ದಾರೆ.

Rajkumar Hirani: ಶಾರುಖ್​ ಕುರಿತ ಸೀಕ್ರೇಟ್​ ಬಹಿರಂಗಗೊಳಿಸಿದ ನಿರ್ಮಾಪಕ !

ಶಾರುಖ್ ಮನೆಯ ನಾಮಫಲಕ ಡೈಮಂಡ್‌ದಾ?

ಶಾರುಖ್ ಮನ್ನತ್ ಮನೆಯ ನಾಮಫಲಕ ಡೈಮಾಂಡ್ ನಿಂದ ಮಾಡಲಾಗಿದೆ ಎನ್ನಲಾಗಿದೆ. ಶಾರುಖ್ ಪತ್ನಿ ಗೌರಿ ಖಾನ್ ಅವರೇ ನಮಫಲಕ ಡಿಸೈನ್ ಮಾಡಿಸಿದ್ದಾರೆ. ಅಂತಹಾಗೆ ಗೌರಿ ಖಾನ್ ಇಂಟೀರಿಯರ್ ಡಿಸೈನರ್. ತನ್ನ ಮನೆಯ ಡಿಸೈನ್ ಕೂಡ ಗೌರಿ ಖಾನ್ ಅವರೇ ಮಾಡಿದ್ದು ನಾಮ ಫಲಕ ಕೂಡ ಆಕರ್ಷಕವಾಗಿದೆ.ಹೊಸ ನಾಮಫಲಕದ ಜೊತೆ ಗೌರಿ ಖಾನ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಫೋಟೋ ಜೊತೆಗೆ ನಾಮ ಫಲಕದ ಬಗ್ಗೆಯೂ ಬರೆದುಕೊಂಡಿದ್ದಾರೆ. 

ನಿಮ್ಮ ಮನೆಯ ಮುಖ್ಯದ್ವಾರ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ಎಂಟ್ರಿ ಕೊಡುವ ಮುಖ್ಯವಾದ ಸ್ಥಳವಾಗಿದೆ. ನಾಮಫಲಕ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತದೆ. ನಮ್ಮನೆ ನಾಮಫಲಕ ಗ್ಲಾಸ್ ಗಾಜಿನ ಹರಳುಗಳನ್ನು ಹೊಂದಿರುವ ಪಾರದರ್ಶಕವಾಗಿದೆ. ಇದು ಉನ್ನತಿ ಮತ್ತು ಶಾಂತಿಯುತವಾದ ವೈಬ್ ನೀಡುತ್ತದೆ' ಎಂದು ಹೇಳಿದ್ದಾರೆ. ಈ ಮೂಲಕ ಡೈಮಂಡ್ ನಿಂದ ಮಾಡಿದ್ದು ಎನ್ನುವ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?