
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಹಿನ್ನೆಲೆ ಭಾರೀ ವಿವಾದ ಸೃಷ್ಟಿಯಾಗಿತ್ತು. ತಮ್ಮ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುಶಾಂತ್ ಅವರ ಸಾವಿನ ನಂತರವೇ ಎನ್‌ಸಿಬಿ ವಿಚಾರಣೆಯೂ ಹೆಚ್ಚು ಆಕ್ಟಿವ್ ಆಗಿದೆ.
ಇದೀಗ ನಟನಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಅವರ ಅಭಿಮಾನಿಗಳಿಂದ ಟ್ವಿಟರ್‌ನಲ್ಲ ಅಭಿಯಾನ ಶುರುವಾಗಿದೆ. ಬಹಳಷ್ಟು ಅಭಿಮಾನಿಗಳು ಈ ಸಂಬಂಧವಾಗಿ Padma Shri 4 Sushant ಎನ್ನುವ ಅಭಿಯಾನದಲ್ಲಿ ತಮ್ಮ ಒತ್ತಾಯವನ್ನು ಹೆಚ್ಚಿಸಿದ್ದಾರೆ.
ಸಾರಾ ಜೊತೆ ಫೋಟೋ ತೆಗೆಯಿಸಿಕೊಳ್ಳಲು ಸುಶಾಂತ್ ಒಲ್ಲೆ ಎಂದಿದ್ಯಾಕೆ?
ಆದರೆ ಇನ್ನೊಂದು ಕಡೆ ಸುಶಾಂತ್ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಅಂಥವರಿಗೆ ಪದ್ಮಶ್ರೀ ನೀಡಲಾಗುವುದಿಲ್ಲ ಎಂಬ ವಿರೋಧಗಳೂ ಕೆಳಿ ಬಂದಿದೆ.
ಸಾವಿನ ನಂತರ ಇಷ್ಟು ದೀರ್ಘ ಸುಶಾಂತ್ ಕುರಿತ ವಿವಾದ ಹಾಗೆಯೇ ಇದೆ. ಅವರ ಸಾವಿನ ನಂತರವೇ ಬಾಲಿವುಡ್‌ನ ಬಹಳಷ್ಟು ಸೆಲೆಬ್ರಿಟಿಗಳು ಡ್ರಗ್ಸ್ ಸಂಬಂಧ ವಿಚಾರಣೆ ಎದುರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.