Deepika Chikhalia: ಸೀತಾಮಾತೆಯ ಒನ್​ಪೀಸ್​ ಡ್ರೆಸ್​ಗೆ ನೆಟ್ಟಿಗರ ಆಕ್ರೋಶ

By Suvarna News  |  First Published Feb 4, 2023, 11:44 AM IST

ರಾಮಾಯಣ ಧಾರಾವಾಹಿಯಲ್ಲಿ ಸೀತೆಯ ಪಾತ್ರ ಮಾಡಿದ್ದ ದೀಪಿಕಾ ಚಿಖಲಿಯಾ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ಇದಕ್ಕೆ ಕಾರಣ ಏನು?
 


1987-88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ  ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಯಾರಿಗೆ ತಾನೆ ನೆನಪಿಲ್ಲ. ಟಿ.ವಿ ಇನ್ನೂ ಕೆಲವೇ ಕೆಲವರ ಮನೆಯನ್ನು ಅಲಂಕರಿಸಿತ್ತು. ಆ ಸಮಯದಲ್ಲಿ ರಾಮಾಯಣ ಧಾರಾವಾಹಿಯನ್ನು ನೋಡುವುದಕ್ಕಾಗಿ ಪ್ರತಿ ಭಾನುವಾರ ಎಷ್ಟೋ ದೂರದ ಮನೆಗಳಿಗಳಿಗೆ ಹೋಗಿ ನೋಡಿದವರೂ ಇದ್ದಾರೆ. ಅಷ್ಟೊಂದು ರೀತಿಯಲ್ಲಿ ಈ ಧಾರಾವಾಹಿ (Serial) ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದವರಿಗೂ ಕೊರತೆಯೇನಿಲ್ಲ. ಇಂದು ಸಿನಿಮಾ ಚಿತ್ರ ನಟ ನಟಿಯರನ್ನು ದೇವರಂತೆ ಆರಾಧಿಸುವವರಿಗಿಂತಲೂ ಭಿನ್ನವಾಗಿ ಅಂದಿನ ಸ್ಥಿತಿ ಇತ್ತು. 

ಅದರಲ್ಲಿಯೂ ರಾಮ, ಲಕ್ಷ್ಮಣ, ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia)ಯಾಗಿದ್ದ , ಲಕ್ಷ್ಮಣನಾಗಿದ್ದ ಸುನಿಲ್​ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್​ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದವರೂ ಇದ್ದಾರೆ. ಅವರು ಹೋದ ಕಡೆಗಳಲ್ಲಿ ದೇವರೇ ಮನೆಗೆ ಬಂದವಂತೆ ಪೂಜೆ, ಪುನಸ್ಕಾರ ಮಾಡಿದವರೂ ಇದ್ದಾರೆ. ಅದೇ ರೀತಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್​ ತ್ರಿವೇದಿಯವರು ನಿಜ ಜೀವನದಲ್ಲಿಯೂ ಕೆಟ್ಟವರೆಂದು ಬಿಂಬಿಸಿದವರೂ ಇದ್ದಾರೆ. ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. 

Tap to resize

Latest Videos

ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ: ನಿರ್ಮಾಪಕನ ಕರಾಳ ಕೃತ್ಯ ಬಿಚ್ಚಿಟ್ಟ Flora Saini

ರಾಮನ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್ (Arun Govil)​ ಅವರು ಕೆಲ ವರ್ಷಗಳ ಬಳಿಕ ಚಿತ್ರವೊಂದರಲ್ಲಿ ವಿಲನ್​ ಪಾತ್ರ ಮಾಡಿದ್ದಾಗ ಅದನ್ನು ಸಹಿಸಿಕೊಳ್ಳದೇ ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದವರೂ ಇದ್ದರು. ಈಗಿನಂತೆ ಆಗ ಸಾಮಾಜಿಕ ಜಾಲತಾಣ ಸಕ್ರಿಯವಾಗಿರಲಿಲ್ಲ. ಆದರೆ ರಾಮನ ಹಲವು ಅಭಿಮಾನಿಗಳು ತಮ್ಮ ರಾಮನನ್ನು ವಿಲನ್​ ರೀತಿಯಲ್ಲಿ ನೋಡಿ ಬೇಸರ ವ್ಯಕ್ತಪಡಿಸಿದ್ದರು.  ಈ ಧಾರಾವಾಹಿ ಬಂದು 36 ವರ್ಷಗಳೇ ಕಳೆದು ಹೋಗಿವೆ. ಈಗಂತೂ ಲೆಕ್ಕಕ್ಕೆ ಸಿಗದಷ್ಟು ಧಾರಾವಾಹಿಗಳು ತುಂಬಿವೆ. ಆದರೂ ಜನರು ರಾಮಾಯಣ, ಮಹಾಭಾರತವನ್ನು ಇಂದಿಗೂ ಮರೆತಿಲ್ಲ. ಅದರಲ್ಲಿನ ರಾಮ, ಸೀತೆಯ ಪಾತ್ರಧಾರಿಗಳು ಜನರನ್ನು ಎಷ್ಟು ಆವರಿಸಿದೆ ಎನ್ನುವುದಕ್ಕೆ ಈಗ ನಡೆದಿರುವ ಘಟನೆಯೇ ಸಾಕ್ಷಿ. 

ಆಗಿದ್ದೇನೆಂದರೆ ಸೀತೆಯ ಪಾತ್ರಧಾರಿಯಾಗಿದ್ದ ದೀಪಿಕಾ ಚಿಕ್​ಲಿಯಾ (ಅವರಿಗೆ ಈಗ 57 ವರ್ಷ ವಯಸ್ಸು) ಅವರು, ವಿಡಿಯೋ ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​ ಮಾಡಿದ್ದಾರೆ. ಅದರಲ್ಲಿ  ದೀಪಿಕಾ ನೀಲಿ ಬಣ್ಣದ ಒಂದು  ಡ್ರೆಸ್ ಧರಿಸಿದ್ದಾರೆ.  ಈ ಡ್ರೆಸ್‌ನೊಂದಿಗೆ ಅವರು ಹೀಲ್ಸ್ ಧರಿಸಿ ಕೂದಲು ತೆರೆದುಕೊಂಡಿದ್ದಾರೆ. ನಿಜಕ್ಕೂ ನೋಡಿದರೆ ಈ ಡ್ರೆಸ್​ನಲ್ಲಿ ಯಾವುದೇ ರೀತಿಯ ಅಶ್ಲೀಲತೆಯೂ ಇಲ್ಲ, ಅಷ್ಟೇ ಅಲ್ಲದೇ ಇದು ತುಂಡುಡುಗೆಯೂ ಅಲ್ಲ. ಮೈ ತುಂಬಾ ಇರುವ ಡ್ರೆಸ್​ ಇದು. ಇದರ ಹೊರತಾಗಿಯೂ ಸೀತಾಮಾತೆಯ ಅಭಿಮಾನಿಗಳ ಕಣ್ಣನ್ನು ಈ ಡ್ರೆಸ್​ ಕೆಂಪಾಗಿಸಿದೆ. ತಮ್ಮ ಸೀತಾಮಾತೆ ಹೀಗೆಲ್ಲಾ ಡ್ರೆಸ್​ ತೊಡುವುದನ್ನು ಅವರಿಂದ ಸಹಿಸಿಕೊಳ್ಳಲು ಆಗದೇ ಟ್ರೋಲ್​ ಮಾಡುತ್ತಿದ್ದಾರೆ.

ನಟಿ ಆಲಿಯಾ ಭಟ್​ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್​
 ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಅವರನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. ಕೆಲವು ಧಾರಾವಾಹಿಗಳಲ್ಲಿ ನಟಿಸುತ್ತಿರುವ  ದೀಪಿಕಾ ಚಿಖಾಲಿಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಇತ್ತೀಚಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ವೇದಿಕೆಗಳಲ್ಲಿ (social media) ಹಂಚಿಕೊಳ್ಳುವ ಮೂಲಕ ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದರೆ ಈ ಡ್ರೆಸ್ ಮಾತ್ರ ಕೆಲ ನೆಟ್ಟಿಗರಿಗೆ ಇಷ್ಟವಾಗುತ್ತಿಲ್ಲ. ದೀಪಿಕಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.  ಇದು ಇವರ ಹುಚ್ಚುತನದ ಪರಮಾವಧಿ... ಹೇ ರಾಮ್​ ನೀನೇ ಕಾಪಾಡು ಎಂದು ಒಬ್ಬ ಬಳಕೆದಾರ ಬರೆದಿದ್ದರೆ, ನಿಮ್ಮನ್ನು ಸೀತಾಮಾತೆಯ ರೂಪದಲ್ಲಿ ನೋಡುತ್ತಿದ್ದೆವು. ಅದೇ ಭಾವನೆಯನ್ನು ಇಟ್ಟುಕೊಂಡು ಪೂಜಿಸುತ್ತಿದ್ದೆವು. ಈಗ ಹೀಗೆ ಇಂಥ ಡ್ರೆಸ್​ನಲ್ಲಿ ಬಂದು ನೀವು ತುಂಬಾ ಅನ್ಯಾಯ ಮಾಡಿರುವಿರಿ, ಇದು ನಿಮಗೆ ತರವಲ್ಲ, ಸೀತಾ ಮಾತೆ(Seeta Mata)ಗೆ ನೀವು ಮಾಡುತ್ತಿರುವ ಅಗೌರವ ಎಂದು ಹಲವರು ಕಿಡಿ ಕಾರಿದ್ದಾರೆ!

click me!