Sunil Shetty ದಂಪತಿಯ ಅಂತರ್​ಧರ್ಮೀಯ ರೋಚಕ ಪ್ರೇಮ್​ ಕಹಾನಿ!

By Suvarna News  |  First Published Feb 4, 2023, 10:09 AM IST

ಇತ್ತೀಚೆಗಷ್ಟೇ ಸುನೀಲ್​ ಶೆಟ್ಟಿ ಅವರ ಪುತ್ರಿ  ಆಥಿಯಾ ಶೆಟ್ಟಿ ಮದುವೆ ನಡೆದಿದೆ. ಈ ಸಂದರ್ಭದಲ್ಲಿ ಸುನೀಲ್​  ಶೆಟ್ಟಿ ಅವರ ಮದುವೆಯ ರೋಚಕ ಕಥೆ ವೈರಲ್​ ಆಗಿದೆ. ಏನಿದು ಕಥೆ?
 


ಬಾಲಿವುಡ್ ನಟ ಸುನೀಲ್ ಶೆಟ್ಟಿ (Sunil Shetty) ಅವರ ಪುತ್ರಿ ಅಥಿಯಾ ಶೆಟ್ಟಿ (Athiya Shetty) ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ಮಹೋತ್ಸವ ಜನವರಿ 23 ರಂದು ಕೆಲವೇ ಕೆಲವು ಜನರ ಸಮ್ಮುಖದಲ್ಲಿ ನೆರವೇರಿತ್ತು.  ಈ ಮೂಲಕ ಕ್ರಿಕೆಟಿಗ ರಾಹುಲ್​ ಸುನೀಲ್​ ಶೆಟ್ಟಿ ಅವರ ಅಳಿಯರಾಗಿದ್ದಾರೆ. ಚಿತ್ರನಟರು, ಕ್ರಿಕೆಟ್​ (Cricket) ತಾರೆಯರಿಂದ  ಈ ಜೋಡಿಗೆ ದುಬಾರಿ ಉಡುಗೊರೆ ದೊರೆತಿದೆ ಎಂಬ ಬಗ್ಗೆ ಭಾರಿ ಸುದ್ದಿಯಾಗಿತ್ತು. ನಂತರ ಅಷ್ಟೊಂದು ದುಬಾರಿ ಉಡುಗೊರೆ ತಮಗೆ ಸಿಕ್ಕಿಲ್ಲ ಎಂದೂ ಸುನೀಲ್​ ಶೆಟ್ಟಿ ಸ್ಪಷ್ಟನೆ ನೀಡಿದ್ದರು. ಒಟ್ಟಿನಲ್ಲಿ ಈ ಉಡುಗೊರೆಯ ಸತ್ಯಾಸತ್ಯತೆ ಈ ಕುಟುಂಬಗಳಿಗೆ ಮಾತ್ರವಿದೆ. ಆದರೆ ಇದೀಗ ಮಗಳ ಮದುವೆಯ ಸಂದರ್ಭದಲ್ಲಿ ಸುನೀಲ್​ ಶೆಟ್ಟಿ ಅವರ ಇಂಟರೆಸ್ಟಿಂಗ್​ ಲವ್​ ಸ್ಟೋರಿ (love story) ಕುರಿತು ಭಾರಿ ಚರ್ಚೆಯಾಗುತ್ತಿದೆ. 

ಹೌದು. ಹಿಂದಿ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿರೋ ಸುನೀಲ್​ ಶೆಟ್ಟಿ ಭಾರತೀಯ ಚಿತ್ರರಂಗದ ಮೊದಲ ಮಾಡರ್ನ್ ಆಕ್ಷನ್ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸುನೀಲ್ ಶೆಟ್ಟಿ ಅವರಿಗೆ ಈಗ 61 ವರ್ಷ ವಯಸ್ಸು. 1991ರಲ್ಲಿ ಸುನೀಲ್​ ಶೆಟ್ಟಿ ಅವರು, ಮನಾ ಶೆಟ್ಟಿ ಅವರ ಕೈಹಿಡಿದಿದ್ದಾರೆ. ಇವರ ಪುತ್ರಿಯೇ ಆಥಿಯಾ ಶೆಟ್ಟಿ. ಇದೀಗ ಮಗಳ ಮದುವೆಯ ಸಂದರ್ಭದಲ್ಲಿ ಅಪ್ಪನ ಲವ್​ ಸ್ಟೋರಿ ಬಹಿರಂಗಗೊಂಡಿದೆ. ಸಿನಿಮೀಯ ರೀತಿಯ ಇವರ ಪ್ರೇಮ ಕಥನ ವೈರಲ್​ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಇದನ್ನು ಕೂಡ ಒಂದು ಸಿನಿಮಾ ಮಾಡಬಹುದು ಎನ್ನುತ್ತಿದ್ದಾರೆ. 

Tap to resize

Latest Videos

Rakhi Sawant: ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

ಅಸಲಿಗೆ ಮನಾ ಅವರ ಹೆಸರು ಮನಾ ಅಲ್ಲ. ಬದಲು ಮೋನಿಷಾ ಕದ್ರಿ (Monisha Kadri). ಇವರ ತಂದೆ ಗುಜರಾತಿ ಮುಸ್ಲಿಂ ಹಾಗೂ ತಾಯಿ ಪಂಜಾಬಿ ಹಿಂದೂ. ಸುನೀಲ್​ ಮತ್ತು ಮನಾ ಅವರ  ಮೊದಲ ಬಾರಿಗೆ ಭೇಟಿಯಾಗಿದ್ದು ಮುಂಬೈನ ನೇಪಿಯನ್ ಸೀ ಬಳಿಯ ಪೇಸ್ಟ್ರಿ ಪ್ಯಾಲೇಸ್‌ನಲ್ಲಿ. ತಮ್ಮ ಸ್ನೇಹಿತರನ್ನು ಮೀಟ್​ ಆಗಲು ಹೋಗಿದ್ದಾಗ ಅಲ್ಲಿಗೆ ಬಂದಿದ್ದ ಮೋನಿಷಾ ಅವರನ್ನು ಕಂಡ ಸುನೀಲ್​ ಅವರಿಗೆ ಮೊದಲ ನೋಟದಲ್ಲಿಯೇ ಮನಸ್ಸಾಯಿತು. ಅಕ್ಕನನ್ನು ಒಲಿಸಿಕೊಳ್ಳಲು ಮೊದಲು ಮೋನಿಷಾ ಅವರ ತಂಗಿಯ ಪರಿಚಯ ಮಾಡಿಕೊಂಡರು. ಹೀಗೆ ಇಬ್ಬರ ನಡುವೆ ಪ್ರೇಮದ ಕೊಂಡಿಯಾದರು ಮೋನಿಷಾ ಅವರ ತಂಗಿ. ನಂತರ ಸ್ನೇಹಿತರೊಬ್ಬರ ಪಾರ್ಟಿಗೆ ಮೋನಿಷಾ ಅವರನ್ನೂ ಸುನೀಲ್ ಆಹ್ವಾನಿಸಿದ್ದರು.  ಪಾರ್ಟಿ ಮುಗಿದ ಬಳಿಕ ಸುನೀಲ್ ಅವರು ಮೋನಿಷಾರನ್ನು ಬೈಕ್​ನಲ್ಲಿ ಲಾಂಗ್ ಡ್ರೈವ್​ (Long drive) ಕರೆದುಕೊಂಡು ಹೋಗಿದ್ದರು. ಇದಾಗಲೇ ಮೋನಿಷಾ ಅವರಿಗೂ ಸುನೀಲ್​ ಅವರ ಮೇಲೆ ಪ್ರೀತಿ ಹುಟ್ಟಲು ಶುರುವಾಗಿತ್ತು. ಇಬ್ಬರೂ ತಂತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರೂ, ಮದುವೆಗೆ ಧರ್ಮ ಅಡ್ಡಿ ಬಂದಿತ್ತು!

ಮುಸ್ಲಿಂ ಕುಟುಂಬದ ಮೋನಿಷಾ ಹಾಗೂ  ಕರಾವಳಿಯ ತುಳು (tulu) ಸಂಪ್ರದಾಯದ ಸುನೀಲ್​ ಅವರ ಮದುವೆಗೆ ಮನೆಯಲ್ಲಿ ಬಹಳ ವಿರೋಧವಿತ್ತು. ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರೂ ಕುಟುಂಬಸ್ಥರು ಒಪ್ಪಿಕೊಳ್ಳಲಿಲ್ಲ. ಆದರೆ ಕುಟುಂಬದವರ ಒಪ್ಪಿಗೆ ಇಲ್ಲದೇ ಮದುವೆಯಾಗಲು ಈ ಜೋಡಿ ಒಪ್ಪಲಿಲ್ಲ. ಆದರೆ ಡೇಟಿಂಗ್​ ಮುಂದುವರೆಸಿದ್ದ ಈ ಜೋಡಿ ಒಂದಲ್ಲ, ಎರಡಲ್ಲ ಬರೋಬ್ಬರಿ 9 ವರ್ಷ ಮನೆಯವರ ಒಪ್ಪಿಗೆಗಾಗಿ ಕಾದಿತು. ಒಂಬತ್ತು ವರ್ಷಗಳ ಬಳಿಕ ಕೊನೆಗೂ ಮದುವೆಗೆ ಇಬ್ಬರ ಮನೆಯವರು ಒಪ್ಪಿಗೆ ನೀಡಿದರು. ಡಿಸೆಂಬರ್ 25, 1991 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿತು. 1992ರಲ್ಲಿ  ಅಥಿಯಾ  ಹುಟ್ಟಿದರೆ  1996ರಲ್ಲಿ ಅಹಾನ್ ಶೆಟ್ಟಿ (Ahan Shetty) ಹುಟ್ಟಿದರು. ಸದ್ಯ ಇಬ್ಬರೂ ಅಪ್ಪನಂತೆ ಚಿತ್ರರಂಗಕ್ಕೆ ಧುಮುಕಿದ್ದಾರೆ. ಸುನೀಲ್​ ಮತ್ತು ಮಾನಾ ಕಳೆದ ಡಿಸೆಂಬರ್​ 25ರಂದು  31ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಪ್ರೀತಿ ನಿಜವಾಗಿದ್ದರೆ, ಯಾವ ಧರ್ಮವೂ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಈ ಜೋಡಿಯೇ ಜ್ವಲಂತ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು. 

ನಟಿ ಆಲಿಯಾ ಭಟ್​ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್​
 

click me!