ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶೀಜಾನ್ ಮೊಹಮ್ಮದ್ ಖಾನ್ ಬಂಧನ

By Anusha KbFirst Published Dec 26, 2022, 12:12 AM IST
Highlights

ಹಿಂದಿ ಸೀರಿಯಲ್ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಸಹನಟನಾಗಿ ನಟಿಸುತ್ತಿದ್ದ ಶೀಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ

ಮುಂಬೈ: ಹಿಂದಿ ಸೀರಿಯಲ್ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಸಹನಟನಾಗಿ ನಟಿಸುತ್ತಿದ್ದ ಶೀಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ ಶನಿವಾರ (ಡಿ.24) ಶೂಟಿಂಗ್‌ ಸೆಟ್‌ನಲ್ಲೇ ನಟಿ ತುನಿಷಾ ಶರ್ಮಾ ಸಾವಿಗೆ ಶರಣಾಗಿದ್ದರು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಅಲ್ಲಿ ಶೂಟಿಂಗ್ ವೇಳೆಯೇ ಶೌಚಾಲಯಕ್ಕೆ ತೆರಳಿದ ನಟಿ ತುನಿಷಾ ಶರ್ಮಾ ಶರ್ಮಾ ಅಲ್ಲೇ ಸಾವಿಗೆ ಶರಣಾಗಿದ್ದರು. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಟ ಶೀಜಾನ್ ಮೊಹಮ್ಮದ್ ಖಾನ್‌ನನ್ನು ಭಾನುವಾರ (ಡಿ.25) ರಂದು ಬಂಧಿಸಿದ್ದಾರೆ. ನಂತರ ಆತನನ್ನು ಮುಂಬೈನ ವಸಾಯಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ನ್ಯಾಯಾಲಯ ಮೊಹಮ್ಮದ್ ಖಾನ್‌ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಘಟನೆಯ ಕುರಿತು ವಿಚಾರಣೆಗಾಗಿ ನಿನ್ನೆ (ಡಿ.25) ಮತ್ತೊಬ್ಬ ಸಹ ನಟ ಪಾರ್ಥ್ ಜುಟ್ಶಿ ಅವರನ್ನು ಕೂಡ ಪೊಲೀಸರು ಕರೆದಿದ್ದಾರೆ.

ಪ್ರಕರಣದ  ಎಫ್‌ಐಆರ್‌ನಲ್ಲಿ (FIR) ಇವರಿಬ್ಬರು ಸಂಬಂಧದಲ್ಲಿದ್ದರು ಮತ್ತು 15 ದಿನಗಳ ಹಿಂದೆ ಇವರ ನಡುವಿನ ಸಂಬಂಧ ಮುರಿದು ಬಿತ್ತು. ಇದರಿಂದ ತುನಿಷಾ ಶರ್ಮಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಅದುವೇ ಅವರನ್ನು ಸಾವಿನ ದವಡೆಗೆ ದೂಡಿದೆ ಎಂದು ಶಂಕಿಸಲಾಗಿದೆ. ಪೊಲೀಸ್ ಠಾಣೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮತ್ತೊಬ್ಬ ನಟ ಪಾರ್ಥ ಜುಟ್ಶಿ (Parth Zutshi), ಘಟನೆಯ ಸಮಯದಲ್ಲಿ ನಾನು ಸೆಟ್‌ನಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನನ್ನನ್ನು ಪೊಲೀಸರು ವಿಚಾರಣೆಗೆ ಕರೆದರು ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಕೇಳಿದರು. ನಾನು ಅವರ ಬಗ್ಗೆ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನನಗೆ  ಆ ಬಗ್ಗೆ ಯಾವುದೇ ಕಲ್ಪನೆ ಇಲ್ಲ, ಅದು ಆಕೆಯ ಆಂತರಿಕ ವಿಚಾರವಾಗಿತ್ತು ಎಂದು ಪಾರ್ಥ ಹೇಳಿದ್ದಾರೆ. 

Tunisha Sharma Suicide: ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಅನಿಸೋದ್ಯಾಕೆ ?

ತುನಿಶಾ ಶರ್ಮಾ ಮರಣೋತ್ತರ ಪರೀಕ್ಷೆಯನ್ನು ನಿನ್ನೆ ಮುಂಜಾನೆ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ (JJ Hospital) ನಡೆಸಲಾಯಿತು. ಆಕೆಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಉಸಿರುಕಟ್ಟುವಿಕೆಯಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 14 ಜನರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇವರೆಲ್ಲರೂ ತುನಿಷಾ ಶರ್ಮಾ ನಟಿಸುತ್ತಿದ್ದ ಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್ ಕಾ (Ali Baba: Dastaan-E-Kabul) ಶೋದಲ್ಲಿ ನಟಿಸುವವರೇ ಆಗಿದ್ದಾರೆ. 

20 ವರ್ಷ ವಯಸ್ಸಿನ ನಟಿ ತುನಿಷಾ ಶೂಟಿಂಗ್ ನಡುವೆ ಚಹಾ ವಿರಾಮದ ವೇಳೆ ವಾಶ್‌ರೂಮ್‌ಗೆ (wash room) ತೆರಳಿದ್ದು, ಅಲ್ಲೇ ನೇಣು ಹಾಕಿಕೊಂಡಿದ್ದರು. ಶೌಚಾಲಯಕ್ಕೆ ಹೋದ ಆಕೆ ಎಷ್ಟೇ ಹೊತ್ತಾದರೂ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ಹೋದಾಗ ಅವರ ದೇಹ ನೇತಾಡುತ್ತಿರುವುದು ಕಾಣಿಸಿದೆ. ಕೂಡಲೇ ಶೂಟಿಂಗ್ ಸಿಬ್ಬಂದಿ ಅವಳನ್ನು ಮಧ್ಯರಾತ್ರಿ 1:30 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು  ವೈದ್ಯರು ಘೋಷಿಸಿದ್ದರು. 

ತುನಿಷಾ ಶರ್ಮಾ ಅವರ ಸಹೋದ್ಯೋಗಿಗಳು, ತುನೀಷಾ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ, ಆದರೆ ಪೊಲೀಸರು ಆ ಸ್ಥಳದಲ್ಲಿ ತನಿಖೆ ನಡೆಸಿದ್ದು, ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಆಕೆಯ ಸಾವನ್ನು ಕೊಲೆಯೇ ಆತ್ಮಹತ್ಯೆಯೇ ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ತುನಿಷಾ ತಾಯಿ, ನಟ ಶೀಜಾನ್ ಮೊಹಮ್ಮದ್ ವಿರುದ್ಧ ದೂರು ದಾಖಲಿಸಿದ ನಂತರ ಬಂಧನಕ್ಕೊಳಗಾದ ಶೀಜಾನ್ ಮೊಹಮ್ಮದ್ ಖಾನ್ (Sheezan Mohammed Khan) ಕೂಡ ಅಲಿ ಬಾಬಾ: ದಸ್ತಾನ್-ಎ-ಕಾಬೂಲ್' ಶೋನಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ತುನಿಷಾ ಶರ್ಮಾ ಅವರ ತಾಯಿ ನೀಡಿದ ದೂರಿನಲ್ಲಿ ತುನಿಷಾ ಮತ್ತು ಶೀಜಾನ್ ಸಂಬಂಧ ಹೊಂದಿದ್ದರು ಮತ್ತು ತನ್ನ ಮಗಳ ಈ ರೀತಿ ಆಘಾತಕಾರಿ ನಿರ್ಧಾರ ಕೈಗೊಳ್ಳಲು ಆತನೇ ಕಾರಣ ಎಂದು ದೂರಿದ್ದಾರೆ.

15 ದಿನಗಳ ಹಿಂದೆ ಬ್ರೇಕಪ್; ಕಿರುತೆರೆ ನಟಿ ತುನಿಷಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್‌

ತುನಿಷಾ  ಶರ್ಮಾ ಅವರು ಸೋನಿ ಟಿವಿ ಶೋ 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್' (Bharat Ka Veer Putra - Maharana Pratap) ನಲ್ಲಿ ಬಾಲ ನಟಿಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು, ಅಲ್ಲಿ ಅವರು ಚಂದ್ ಕನ್ವರ್ ಪಾತ್ರವನ್ನು ನಿರ್ವಹಿಸಿದರು. ಇದಾದ ನಂತರ ಅವರು ಹಲವಾರು ಪ್ರದರ್ಶನಗಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಜನಪ್ರಿಯ ನಟಿ ಕತ್ರಿನಾ ಕೈಫ್ ಅವರ ಬಾಲ್ಯದ ಪಾತ್ರಗಳಲ್ಲಿ ಪ್ರಮುಖವಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಇಷ್ಕ್ ಸುಭಾನ್ ಅಲ್ಲಾ, ಗಬ್ಬರ್ ಪೂಂಚ್‌ವಾಲಾ, 'ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್' ಮತ್ತು 'ಚಕ್ರವರ್ತಿನ್ ಅಶೋಕ ಸಾಮ್ರಾಟ್' ಮುಂತಾದ ಶೋಗಳಲ್ಲಿ ಕೆಲಸ ಮಾಡಿದ್ದಾರೆ.

click me!