5 ವರ್ಷಗಳ ಹಿಂದೆಯೇ ಅಂಡಾಣು ರಕ್ಷಣೆ: ನಟಿಯ ಬೋಲ್ಡ್ ಹೇಳಿಕೆ ವೈರಲ್!

Published : Nov 23, 2020, 03:30 PM IST
5 ವರ್ಷಗಳ ಹಿಂದೆಯೇ ಅಂಡಾಣು ರಕ್ಷಣೆ: ನಟಿಯ ಬೋಲ್ಡ್ ಹೇಳಿಕೆ ವೈರಲ್!

ಸಾರಾಂಶ

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮೋನಾ ಸಿಂಗ್ ಸದ್ಯಕ್ಕೆ ತಾಯಿ ಆಗುವ ಕನಸು ಹಾಗೂ  ಮದರ್‌ಹುಡ್‌ ಬಗ್ಗೆ ಮಾತನಾಡಿದ್ದಾರೆ. ನಟಿಯ ಬೋಲ್ಡ್‌ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

ನಟಿ ಮೋನಾ ಸಿಂಗ್ ಹಾಗೂ ಶ್ಯಾಮ್ ಗೋಪಾಲ್ ಕಳೆದ ವರ್ಷ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಕ್ಕಳು ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದ ಜನರಿಗೆ ಬೋಲ್ಡ್‌ ಆಗಿ ಉತ್ತರ ನೀಡಿದ್ದಾರೆ. 

ಕಂಗನಾ ಶೇರ್ ಮಾಡಿದ ಆ ಫೋಟೋಗೆ ನೆಟ್ಟಿಗರಿಂದ ಫುಲ್ ಕ್ಲಾಸ್!

2003ರಲ್ಲಿ 'ಜಸ್ಸಿ ಜೈಸಿ ಕೊಯಿ ನಹಿ ಹೇ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಮೋನಾ ಸದ್ಯಕ್ಕೆ ಜೀ5 ನ 'ಬ್ಲಾಕ್ ವಿಡೋ' ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮವೊಂದರ ಜೊತೆ ತಮ್ಮ ಮಂದರ್‌ಹುಡ್‌ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. 

'ನಾನು 34 ವರ್ಷವಿದ್ದಾಗಲೇ ನನ್ನ ಅಂಡಾಣುಗಳನ್ನು ಫ್ರೀಜ್ ಮಾಡಿದ್ದೀನಿ. ನಾನು ಮದುವೆಯಾಗಿ ವರ್ಷ ಆಗಿದೆಯಷ್ಟೇ. ನನ್ನ ಪಾರ್ಟನರ್ ಜೊತೆ ಎಂಜಾಯ್ ಮಾಡಬೇಕು. ಇಷ್ಟು ದಿನಗಳ ಕಾಲ ನನ್ನ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿದ್ದೆ. ಈಗ ಪಾರ್ಟನರ್‌ ಜೊತೆ ಅದ್ಭುತ ಸಮಯ ಕಳೆಯಬೇಕು. ನನಗೆ ಮಕ್ಕಳೆಂದರೆ ಇಷ್ಟ. ಮುಂದಕ್ಕೆ ಮಕ್ಕಳ ಪ್ಲಾನ್ ಮಾಡಬೇಕು, ' ಎಂದು ಮೋನಾ ಸಿಂಗ್ ಹೇಳಿದ್ದಾರೆ. 

ಮಿಲ್ಖಾ ಸಿಂಗ್ ಪಾದ ಮುಟ್ಟಿ ನಮಸ್ಕರಿಸಿದ ಊರ್ವಶಿ 

ವೈದ್ಯರ ಸಹಾಯದಿಂದ ಅಂಡಾಣು ಸಂರಕ್ಷಣೆ:
ಮೋನಾ ಸಿಂಗ್ ತೆಗೆದುಕೊಂಡ ಈ ನಿರ್ಧಾರಕ್ಕೆ ತಾಯಿಯ ಸಾಥ್‌ ಇದೆ ಎಂದು ಹೇಳಿದ್ದಾರೆ. 'ನಾನು ಮೊದಲು ನನ್ನ ತಾಯಿ ಜೊತೆ ಪೂಣೆಯಲ್ಲಿ ಗೈನಾಕಾಲಜಿಸ್ಟ್ ಅನ್ನು ಸಂಪರ್ಕಿಸಿದೆ. ಕೆಲಸದಿಂದ ಕೆಲವು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದೆ, ಈ ಪ್ರೊಸೆಸ್‌ನಲ್ಲಿ ತುಂಬಾ ಮೂಡ್ ಸ್ವಿಂಗ್ ಆಗುತ್ತದೆ. ಇವೆಲ್ಲಾ5 ತಿಂಗಳ ಪ್ರಾಸೆಸ್‌. ನಾನು ಈಗ ಆರಾಮಾಗಿರುವೆ,' ಎಂದು ಮೋನಾ ಸಿಂಗ್ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನಗಿಂತ 20 ವರ್ಷ ಚಿಕ್ಕವಳು, ಅವಳನ್ನು ದೂರ ತಳ್ಳಲು ಯತ್ನಿಸಿದ್ದೆ': ನಿರ್ದೇಶಕ ಅನುರಾಗ್ ಕಶ್ಯಪ್
ತೆಲುಗು ಓದಲು ಬರಲ್ಲ.. ಆದರೂ ಡೈಲಾಗ್ ಹೇಳುವುದರಲ್ಲಿ ಎಕ್ಸ್‌ಪರ್ಟ್: ಮಹೇಶ್ ಬಾಬು ಸೀಕ್ರೆಟ್ ರಿವೀಲ್!