6 ವರ್ಷದ ಹಿಂದೆಯೇ ಮದುವೆ ರಿಜಿಸ್ಟರ್ ಆಗಿತ್ತು, ಬಾಡಿಗೆ ತಾಯಿ ನಮ್ಮ ಸಂಬಂಧಿ- ನಯನತಾರಾ ಸ್ಪಷ್ಟನೆ

Published : Oct 16, 2022, 03:24 PM ISTUpdated : Oct 16, 2022, 08:33 PM IST
6 ವರ್ಷದ ಹಿಂದೆಯೇ ಮದುವೆ ರಿಜಿಸ್ಟರ್ ಆಗಿತ್ತು, ಬಾಡಿಗೆ ತಾಯಿ ನಮ್ಮ ಸಂಬಂಧಿ- ನಯನತಾರಾ ಸ್ಪಷ್ಟನೆ

ಸಾರಾಂಶ

ಬಾಡಿಗೆ ತಾಯಿ ವಿವಾದದ ಬಗ್ಗೆ ನಟಿ ನಯನತಾರಾ ಪ್ರತಿಕ್ರಿಯೆ ನೀಡಿದ್ದು ಬಾಡಿಗೆ ತಾಯಿ ತನ್ನ ಸಂಬಂಧಿ, ನಾವು 6 ವರ್ಷಗಳ ಹಿಂದೆಯೇ ಮದುವೆ ನೋಂದಣಿ ಮಾಡಿಸಿದ್ವಿ ಎಂದು ಸ್ಪಷ್ಟನೆ ನೀಡಿದ್ದಾರೆ. 

ಸೌತ್ ಸ್ಟಾರ್ ದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚಿಗಷ್ಟೆ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ತಂದೆ-ತಾಯಿಯಾಗಿದ್ದಾರೆ. ಮನೆಗೆ ಮುದ್ದಾದ ಮಕ್ಕಳು ಆಗಮಿಸಿದ ಸಂತಸವನ್ನು ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ಬಹಿರಂಗ ಪಡಿಸುತ್ತಿದ್ದಂತೆ ವಿವಾದ ಸುತ್ತಿಕೊಂಡಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದು ನಿಯಮಗಳ ಪ್ರಕಾರವೇ ಇದಿಯಾ ಎಂದು ತಮಿಳು ನಾಡು ಸರ್ಕಾರ ತನಿಖೆಗೆ ಆದೇಶಿಸಿತ್ತು. ಈ ಬಗ್ಗೆ ನಯನತಾರಾ ಪ್ರತಿಕ್ರಿಯೆ ನೀಡಿದ್ದಾರೆ. ಬಾಡಿಗೆ ತಾಯಿ ತನ್ನ ಸಂಬಂಧಿ, ನಾವು 6 ವರ್ಷಗಳ ಹಿಂದೆಯೇ ಮದುವೆ ನೋಂದಣಿ ಮಾಡಿಸಿದ್ವಿ ಎಂದು ಸ್ಪಷ್ಟನೆ ನೀಡಿದ್ದಾರೆ. 

ತಮಿಳುನಾಡು ಆರೋಗ್ಯ ಇಲಾಖೆಗೆ ನೀಡಿದ ಅಫಿಡವಿಟ್‌ನಲ್ಲಿ ನಯನತಾರಾ ದಂಪತಿ ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ಮದುವೆಯಾದೆವು ಆದರೆ 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಆಗಿದ್ದೆವು ಎಂದು ಮದುವೆ ನೋಂದಣಿ ಸರ್ಕಿಫಿಕೇಟ್ ಅನ್ನು ಅಫಿಡವಿಟ್ ಜೊತೆಯೇ ನೀಡಿದ್ದಾರೆ. ಸ್ಟಾರ್ ಜೋಡಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ, ಕಳೆದ ವರ್ಷ ಡಿಸೆಂಬರ್‌ನಲ್ಲೇ ಬಾಡಿಗೆ ತಾಯ್ತನದ ಅಗ್ರಿಮೆಂಟ್‌ಗೆ ಸಹಿ ಮಾಡಿದ್ದೆವು ಎಂದು ಹೇಳಿದ್ದಾರೆ. ಬಾಡಿಗೆ ತಾಯಿ ನಯನತಾರಾ ಅವರ ಸಂಬಂಧಿ ಆಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಅವಳಿ ಮಕ್ಕಳು ಚೆನ್ನೈ ಆಸ್ಪತ್ರೆಯಲ್ಲಿ ಜನಿಸಿದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 

ಬಾಡಿಗೆ ತಾಯ್ತನದ ನಿಯಮ

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ವಯಸ್ಸು 21-35ರ ಅಂತರದಲ್ಲಿ ಇರಬೇಕು. ದಂಪತಿಗೆ ಹತ್ತರದ ಸಂಬಂಧಿ ಆಗಿರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ. 

ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ನಿಯಮವನ್ನು ಪಾಲಿಸಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ದಂಪತಿ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. 

ಬಾಡಿಗೆ ತಾಯ್ತನದ ನಿಯಮವೇನು; ನಯನತಾರಾ-ವಿಘ್ನೇಶ್ ದಂಪತಿಗೆ ಸಂಕಷ್ಟ ಎದುರಾಗಿದ್ದೇಕೆ?

ಜೂನ್‌ನಲ್ಲಿ ಅದ್ದೂರಿ ಮದುವೆ

ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ನಯನತಾರಾ ಮದುವೆ ಸಮಾರಂಭವನ್ನು ನೆಟ್‌ಫ್ಲಿಕ್ಸ್ ಸೆರೆಹಿಡಿದಿದ್ದು ಇನ್ನು ಸ್ಟ್ರೀಮಿಂಗ್ ಮಾಡಿಲ್ಲ.  

ಡಿಯರ್ ನೆಟ್‌ಫ್ಲಿಕ್ಸ್, ನಯನತಾರಾಗೆ ಮಗು ಆಯ್ತು, ಮದುವೆ ವಿಡಿಯೋ ಎಲ್ಲಿ? ಕಾಲೆಳೆಯುತ್ತಿರುವ ನೆಟ್ಟಿಗರು

ನಯನತಾರಾ ಸಿನಿಮಾಗಳು 

ಇನ್ನು ನಯನತಾರಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ತಮಿಳು ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ ನಲ್ಲಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಶಾರುಖ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ನಯನತಾರಾ ಇರೈವನ್, ಕನೆಕ್ಟ್, ಲೇಡಿ ಸೂಪರ್ ಸ್ಟಾರ್ ಮಲಯಾಳಂನಲ್ಲಿ ಗೋಲ್ಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಹುಭಾಷ ನಟಿ ನಯನತಾರಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?