ಕಿರುತೆರೆ ನಟಿ ತುನಿಷಾ ಶರ್ಮಾಗೆ ಉರ್ದು ಕಲಿಯಲು ಒತ್ತಾಯಿಸಿದ ಖಾನ್ ಕುಟುಂಬ; ತಾಯಿ ಹೇಳಿಕೆ ವೈರಲ್

Published : Dec 30, 2022, 04:20 PM IST
ಕಿರುತೆರೆ ನಟಿ ತುನಿಷಾ ಶರ್ಮಾಗೆ ಉರ್ದು ಕಲಿಯಲು ಒತ್ತಾಯಿಸಿದ ಖಾನ್ ಕುಟುಂಬ; ತಾಯಿ ಹೇಳಿಕೆ ವೈರಲ್

ಸಾರಾಂಶ

 ಮಗಳನ್ನು ಶ್ರೀಜಾನ್ ಕುಟುಂಬಸ್ಥರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ವನಿತಾ ಶರ್ಮಾ ಹೇಳಿಕೆ ನೀಡಿದ್ದಾರೆ. ಉರ್ದು ಭಾಷೆ ಮಾತನಾಡಲು ಕಲಿಸಿದ್ದರು.   

ಡಿಸೆಂಬರ್ 24ರಂದು ಕಿರುತೆರೆ ನಟಿ ತುನಿಷಾ ಶರ್ಮಾ ಶೂಟಿಂಗ್‌ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದು 6 ದಿನ ಕಳೆದರೂ ಯಾರೊಬ್ಬರೂ ಆ ನೋವಿನಿಂದ ಹೊರ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತುನಿಷಾ ಪರ ಮಾತನಾಡುವವರು ಸಾವಿರವಾರದ ಶ್ರೀಜಾನ್ ಖಾನ್ ಪರ ಮಾತನಾಡುವವರು 100 ಮಂದಿ. ಅಲ್ಲದೆ 5 ದಿನಗಳಿಂದ ಶ್ರೀಜಾನ್ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಈ ಸಾವಿಗೆ ಶ್ರೀಜಾನ್ ಕಾರಣ ಎಂದು ವಾಲಿವ್‌ ಪೊಲೀಸರು ಕಠಿಣ ತನಿಖೆ ಮಾಡಿ ಸಾಕ್ಷಿಗಳನ್ನು ವಸಾಯಿ ನ್ಯಾಯಾಲಯಕ್ಕೆ ಒಪ್ಪಿಸುತ್ತಿದ್ದಾರೆ. 

ತನಿಷಾ ಶರ್ಮಾ ತಾಯಿ ವನಿತಾ ಶರ್ಮಾ ಸಂದರ್ಶನದಲ್ಲಿ ಇದು ಆತ್ಮಹತ್ಯೆ ಅಲ್ಲ ಇದು ಕೊಲೆ ಎಂದು ಹೇಳಿಕೆ ನೀಡಿದ್ದಾರೆ. 'ನನಗಿದ್ದ ಒಂದು ಮಗು ಆ ಮಗುವನ್ನು ಕಳೆದುಕೊಂಡಿರುವೆ. ಆದರೆ ಈ ಹುಡುಗ ಸುಲಭವಾಗಿ ಇದರಿಂದ ಹೊರ ಹೋಗಲು ನನಗೆ ಇಷ್ಟವಿಲ್ಲ. ತಿಂಗಳುಗಳ ಕಾಲ ನನ್ನ ಮಗಳನ್ನು ಬಳಸಿಕೊಂಡಿದ್ದಾರೆ. ಅಕೆ ಜೊತೆ ಮಾತನಾಡಿ ನಾನು ಬೇರೆ ಸಂಬಂಧದಲ್ಲಿ ಇದ್ಯಾ ಎಂದು ಪ್ರಶ್ನೆ ಮಾಡಿದೆ. ನನ್ನ ಮಗಳ ಜೊತೆ ಮಾತನಾಡಿ ಅವನು ನನಗೆ ಹೇಳುತ್ತಾರೆ ಸಾರಿ ಆಂಟಿ ನಾನು ಸಹಾಯ ಮಾಡಲು ಆಗುವುದಿಲ್ಲ ಎಂದು. ಎಷ್ಟರ ಮಟ್ಟಕ್ಕೆ ತುನಿಷಾನ ಸೆಳೆದುಕೊಂಡಿದ್ದ ಅಂದ್ರೆ ನನ್ನ ಮಗಳು ನನ್ನಿಂದ ದೂರ ಉಳಿಯುವುದಕ್ಕೆ ಶುರು ಮಾಡಿದ್ದಳು. ಅವರ ರಿಲೇಷನ್‌ಶಿಪ್‌ ಬಗ್ಗೆ ಎಷ್ಟು ಸಲ ಪ್ರಶ್ನೆ ಮಾಡಿರುವ ಒಂದು ಚೂರು ಮಾಹಿತಿನೂ ಬಿಟ್ಟುಕೊಟ್ಟಿಲ್ಲ ಆಕೆ. ಶ್ರೀಜಾನ್ ನನ್ನ ಮಗಳಿಗೆ ಮೋಸ ಮಾಡಬಾರದಿತ್ತು. ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ದರೆ ಆಕೆಗೆ ಮೊದಲೇ ತಿಳಿಸಬೇಕಿತ್ತು' ಎಂದು ಇಂಡಿಯಾ ಟುಡೇ ಸಂದರ್ಶನದಲ್ಲಿ ವನಿತಾ ಮಾತನಾಡಿದ್ದಾರೆ.

'ತುನಿಷಾನ ಶ್ರೀಜಾನ್‌ ಚೆನ್ನಾಗಿ ಟ್ರ್ಯಾಪ್ ಮಾಡಿದ್ದ ಅಲ್ಲದೆ ಆತನ ಫ್ಯಾಮಿಲಿ ನನ್ನ ಮಗಳನ್ನು ತುಂಬಾನೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಒತ್ತಾಯ ಮಾಡಿ ಆಕೆಗೆ ಉರ್ದು ಹೇಳಿಕೊಟ್ಟಿದ್ದರು' ಎಂದು ವನಿತಾ ಹೇಳಿದ್ದಾರೆ.

250 ಪೇಜ್‌ ವಾಟ್ಸಪ್ ಮೆಸೇಜ್, 15 ನಿಮಿಷ ವಿಡಿಯೋ ಕಾಲ್; ತುನಿಷಾ ಸಾವಿಗೆ ಮತ್ತೊಂದು ಬಿಗ್ ಟ್ವಿಸ್ಟ್‌

ಪತ್ರ ಇರೋದು ನಿಜವೇ?

 ತುನಿಶಾ ಮತ್ತು ಶೀಜಾನ್‌ ಇಬ್ಬರೂ ಈ ಟಿವಿ ಶೋನಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಮಧ್ಯೆ, ತುನಿಶಾ ಮೃತಪಟ್ಟ ದಿನ, ಮೇಕಪ್ ರೂಮ್‌ನಲ್ಲಿ ಇಬ್ಬರೂ 15 ನಿಮಿಷಗಳ ಸಂಭಾಷಣೆ ನಡೆಸಿದ್ದರು. ನಂತರ, ಇಬ್ಬರೂ ಉದ್ರೇಕಗೊಂಡಿದ್ದರು ಎಂದೂ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.ಈ ನಡುವೆ ಸೀಕ್ರೆಟ್‌ ಗರ್ಲ್‌ಫ್ರೆಂಡ್‌ ಜತೆಗೆ  ಶೀಜಾನ್‌ನ ಫೋನ್‌ನಿಂದ ಅಳಿಸಲಾದ ವಾಟ್ಸಾಪ್ ಸಂಭಾಷಣೆಯನ್ನು ಸಹ ರಿಕವರ್‌ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಮಗ್ರ ತನಿಖೆಯ ಅಗತ್ಯವಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಆದರೆ, ಶೀಜನ್ ತನಿಖಾಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದೂ ಪೊಲೀಸ್‌ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?