ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರು ಖರೀದಿಸಿದ ಶಾರುಖ್ ಖಾನ್, ಇದರ ಬೆಲೆ ಎಷ್ಟು?

Published : Mar 30, 2026, 04:23 PM IST
Shah Rukh Khan Mercedes Benz V Class

ಸಾರಾಂಶ

ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರು ಖರೀದಿಸಿದ ಶಾರುಖ್ ಖಾನ್, ಇದರ ಬೆಲೆ ಎಷ್ಟು?, ಶಾರುಖ್ ಖಾನ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇದೀಗ ಶಾರುಖ್ ಖರೀದಿಸಿದ ಹೊಸ ಕಾರಿನ ವಿಶೇಷತೆ ಏನು? 

ಮುಂಬೈ (ಮಾ.30) ಬಾಲಿವುಡ್ ನಟ ಶಾರುಖ್ ಖಾನ್ ಬಳಿ ಬುಗಾಟಿ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಸಿನಿಮಾ ರಂಗದ ಶ್ರೀಮಂತ ನಟನಾಗಿ ಗುರುತಿಸಿಕೊಂಡಿರುವ ಶಾರುಖ್ ಖಾನ್ ಇದೀಗ ಹೊಸ ಕಾರು ಖರೀದಿಸಿದ್ದಾರೆ. ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಕಾರನ್ನು ಶಾರುಖ್ ಖಾನ್ ಖರೀದಿಸಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬೆಂಜ ವಿ ಕ್ಲಾಸ್ ಹೊಸ ವರ್ಶನ್ ಕಾರು ಬುಕಿಂಗ್ ಆರಂಭಗೊಂಡಿತ್ತು. ಇದೀಗ ಶಾರುಖ್ ಖಾನ್‌ಗೆ ಕಾರು ಡೆಲಿವರಿಯಾಗಿದೆ.

ಶಾರುಖ್ ಖಾನ್ ಹೊಸ ಕಾರಿನ ಬೆಲೆ ಎಷ್ಟು?

ಶಾರುಖ್ ಖಾನ್ ಖರೀದಿಸಿದ ಕಾರು ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಕಾರಿನ ಆರಂಭಿಕ ಬೆಲೆ 1.4 ಕೋಟಿ ರೂಪಾಯಿ. ಪೆಟ್ರೋಲ್ ಹಾಗೂ ಡೀಸೆಲ್ ವರ್ಶನ್‌ನಲ್ಲಿ ಲಭ್ಯವಿದೆ. ಶಾರುಖ್ ಖರೀದಿಸಿದ ಕಾರಿನ ವೇರಿಯೆಂಟ್ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ವೇರಿಯೆಂಟ್ ಹಾಗೂ ಇತರ ಆಕ್ಸಸರಿ ಮೂಲಕ ಕಾರಿನ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. 7 ಏರ್‌ಬ್ಯಾಗ್, ಇಬಿಡಿ, ಎಬಿಎಸ್, ಹಿಲ್ ಅಸಿಸ್ಟ್, ಡ್ರೈವರ್ ಅಟೆನ್ಶನ್ ಅಸಿಸ್ಟೆಂಟ್, ಎಲೆಕ್ಟ್ರಾನಿಕ್ ಪಾರ್ಕಿಂಕ್ ಬ್ರೇಕ್, ಆಟೋ ಹೋಲ್ಡ್, 360 ಡಿಗ್ರಿ ಕ್ಯಾಮೆರಾ, ಆಟೋ ಡಿಮ್ಮಿಂಗ್ ರೇರ್ ವಿವ್ಯೂ ಮಿರರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ಶಾರುಖ್ ಖಾನ್ ಕಾರು ಸಂಗ್ರಹ

ಶಾರುಖ್ ಖಾನ್ ಬಳಿ ಹಲವು ಕಾರುಗಳಿವೆ. ಲೆಕ್ಸಾಸ್ ಎಲ್ಎಂ 350ಹೆಚ್, ರೋಲ್ಸ ರಾಯ್ಸ್ ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್, ಬುಗಾಟಿ ವೆಯ್ರಾನ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, BMW 7 ಸೀರಿಸ್, BMW 8 ಸೀರಿಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಇದೀಗ ಮರ್ಸಿಡಿಸ್ ವಿ ಕ್ಲಾಸ್ ಕಾರು ಸೇರಿಕೊಂಡಿದೆ.

ಸಿದ್ದಾರ್ಥ ಆನಂದ್ ನಿರ್ದೇಶದ ಕಿಂಗ್ ಸಿನಿಮಾದಲ್ಲಿ ಶಾರುಖ್ ಖಾನ್ ತೊಡಗಿಸಿಕೊಂಡಿದ್ದಾರೆ. ಸದ್ಯ ಇರಾನ್ ಇಸ್ರೇಲ್ ಯುದ್ಧದಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಅರಬ್ ರಾಷ್ಟ್ರಗಳಲ್ಲಿ ಶೂಟಿಂಗ್ ನಡೆಯಬೇಕಿತ್ತು. ಆದರೆ ಯುದ್ಧದಿಂದ ಶೂಟಿಂಗ್ ಮುಂದೂಡಲಾಗಿದೆ. ಎಪ್ರಿಲ್ 19 ರಿಂದ ದುಬೈನಲ್ಲಿ ಶೂಟಿಂಗ್ ಆರಂಭಗೊಳ್ಳಬೇಕಿತ್ತು. ಆದರೆ ಯುದ್ಧ ತೀವ್ರಗೊಳ್ಳುತ್ತಿರುವ ಕಾರಣ ಶೂಟಿಂಗ್ ಮುಂದೂಡಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sonam Kapoor: ಮತ್ತೊಂದು ಗಂಡು ಮಗು ಸ್ವಾಗತಿಸಿದ ಸೋನಂ ಕಪೂರ್-ಆನಂದ್ ಅಹುಜಾ ದಂಪತಿ
ಕಾಶಿಯಲ್ಲಿ ಬಾಹುಬಲಿಯ ಮಾಸ್ಟರ್​ ಮೈಂಡ್! ರಾಜಮೌಳಿಯಿಂದ ವಾರಣಾಸಿ ರೀ ಕ್ರಿಯೆಟ್..!