ನಟಿ ಜಾಹ್ನವಿ ಕಪೂರ್ ಬಾಯ್ಫ್ರೆಂಡ್ ಶಿಖರ್ ಪಹರಿಯಾ ಜೊತೆ ತಿರುಪತಿಗೆ ಹೋಗಿದ್ದ ಸಂದರ್ಭದಲ್ಲಿ ಬೆರಳಿನಲ್ಲಿ ವಜ್ರದ ಉಂಗುರ ಕಾಣಿಸಿಕೊಂಡಿದೆ. ಏನಿದರ ರಹಸ್ಯ?
ಬಾಲಿವುಡ್‌ನ ಬ್ಯೂಟಿ ಕ್ವೀನ್ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್ (Jahnavi Kapoor) ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್, ಮಿಲಿ ಚಿತ್ರದಲ್ಲಿಯೂ ಪ್ರಶಂಸೆ ಗಳಿಸಿದವರು. ಇವರು ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು. ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India)ಹೀರೋ ಎನ್‌ಟಿಆರ್ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡು ಜಾಹ್ನವಿ ಹಲವು ಬಾರಿ ಟ್ರೋಲ್ಗೆ ಒಳಗಾಗಿರೋದೂ ಇದೆ. ಶ್ರೀದೇವಿ ಪುತ್ರಿಯಾಗಿ ನಿಮಗೆ ಇದೆಲ್ಲಾ ಶೋಭೆ ತರುವುದಿಲ್ಲ ಎಂದು ಹೇಳಿಸಿಕೊಂಡಿರುವುದೂ ಆಗಿದೆ. ಅದೇನೇ ಇದ್ದರೂ ಇಂದಿನ ಚಿತ್ರನಟಿಯರ ಬಗ್ಗೆ ಬೇರೆ ಹೇಳಬೇಕಾಗಿಲ್ಲವಲ್ಲ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡರೇನೇ ತಮಗೆ ಬೆಲೆ ಎನ್ನುವಂಥ ಸ್ಥಿತಿ ಅವರದ್ದು. ನಿನ್ನೆಯಷ್ಟೇ ಜಾಹ್ನವಿ ಕಪೂರ್ ಹಾಫ್ ಸ್ಯಾರಿ ತೊಟ್ಟು ತಿರುಪತಿಗೆ ಭೇಟಿ ಕೊಟ್ಟ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ತಮ್ಮ ಬಾಯ್ಫ್ರೆಂಡ್ ಶಿಖರ್ ಪಹಾಡಿಯಾ ಅವರ ಜೊತೆಗೆ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ.
ಚಿತ್ರತಾರೆಯರು ದೇವಾಲಯಗಳಿಗೆ ಭೇಟಿ ಕೊಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ತಮ್ಮ ಬಾಯ್ಫ್ರೆಂಡ್ ಜೊತೆಗೆ ಹೋಗಿದ್ದೂ ಅಲ್ಲದೇ ಅವರ ಬೆರಳಿನಲ್ಲಿ ವಜ್ರದ ಉಂಗುರ ಈಗ ಎಲ್ಲರ ಕಣ್ಣು ಕುಕ್ಕಿಸಿದೆ. ಜಾಹ್ನವಿ ಅವರು ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುವ ಸಮಯದಲ್ಲಿ ಈ ವಜ್ರದ ಉಂಗುರ ಎಲ್ಲರ ಕಣ್ಣಿಗೆ ಬಿದ್ದಿದ್ದು, ಅದರ ಬಗ್ಗೆ ಸಕತ್ ಸುದ್ದಿಯಾಗುತ್ತಿದೆ. ಶಿಖರ್ ಪಹರಿಯಾ ಜೊತೆ ಗುಟ್ಟಾಗಿ ಎಂಗೇಜ್ಮೆಂಟ್ ಆಯ್ತಾ ಎಂದು ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಮೊದಲೇ ಎಂಗೇಜ್ಮೆಂಟ್ ಆಗಿತ್ತಾ ಅಥವಾ ತಿರುಪತಿಯಲ್ಲಿಯೇ ಆಯಿತಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಈ ಜೋಡಿ ತಿರುಪತಿಗೆ ಹೋಗುವಾಗ ಕೈಯನ್ನು ಹೆಚ್ಚು ಮಂದಿ ಗಮನಿಸದಿದ್ದ ಕಾರಣ, ಮೊದಲೇ ಎಂಗೇಜ್ಮೆಂಟ್ ಆಗಿತ್ತಾ ಅಥ್ವಾ ತಿರುಪತಿಯಲ್ಲಿಯೇ ಆಗಿದ್ಯಾ ಎನ್ನೋದು ಇವರ ಫ್ಯಾನ್ಸ್ ಪ್ರಶ್ನೆ.
ಕದ್ದುಮುಚ್ಚಿ ಸಿಗೋದೆ ಕಷ್ಟವಾಗಿತ್ತು, ಸೋ ಕೈಕೊಟ್ಟೆ: ಜಾಹ್ನವಿ ಮಾತಿಗೆ ಹೆಣ್ಮಕ್ಳಿಗೆ ಬೈತಿರೋ ಹೈಕ್ಳು!
ಅಂದಹಾಗೆ ಶಿಖರ್ ಪಹರಿಯಾ (Shikhar Pahariya) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಮಾರು 6-7 ವರ್ಷಗಳ ಹಿಂದೆ, ಜಾಹ್ವನಿ ಅವರೊಂದಿಗಿನ ಅವರ ಸಂಬಂಧದ ವಿಷಯವು ಮುನ್ನೆಲೆಗೆ ಬಂದಿತ್ತು. ಅವರ ಫೋಟೋ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಟಿಯನ್ನು ಚುಂಬಿಸುತ್ತಿರುವುದು ಕಂಡುಬಂದಿತ್ತು. ಇವರಿಬ್ಬರ ನಡುವೆ ನಂತರದಲ್ಲಿ ಏನೋ ಬ್ರೇಕಪ್ ಆಗಿ ಪುನಃ ಈಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಇವರು ಉದ್ಯಮಿಯಾಗಿದ್ದಾರೆ.
ಇನ್ನು ಈ ಉಂಗುರದ ವಿಷಯಕ್ಕೆ ತರುವುದಾದರೆ, ಈ ಉಂಗುರ ಜಾಹ್ನವಿ ಅವರಿಗೆ ತಾಯಿ ಶ್ರೀದೇವಿ ನೀಡಿದ್ದಂತೆ. ಆಗಸ್ಟ್ 13 ಶ್ರೀದೇವಿ ಅವರ ಜನ್ಮದಿನವಾಗಿತ್ತು. ಆ ದಿನ, ಜಾಹ್ನವಿ ಅವರು ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗಿರಲಿಲ್ಲವಂತೆ. ಆದ್ದರಿಂದ ತಿರುಪತಿಗೆ ಭೇಟಿ ಕೊಟ್ಟಿರುವುದಾಗಿ ಹೇಳಲಾಗಿದೆ. ಈ ಉಂಗುರ ಶ್ರೀದೇವಿ ಅವರದ್ದು ಎಂದು ವರದಿಯಾಗಿದೆ. ತಮ್ಮ ತಾಯಿಯ ಉಂಗುರವನ್ನು ಧರಿಸಿ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆದಿದ್ದಾರೆ ಜಾಹ್ನವಿ. ಅಂದಹಾಗೆ ನಟಿ ಪ್ರತಿ ವರ್ಷ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಅವರು ಭೋಪಾಲ್‌ನಲ್ಲಿ ‘ಉಲ್ಜ್’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಈ ಹಿನ್ನೆಲೆಯಲ್ಲಿ ಶೂಟಿಂಗ್ ಮುಗಿಸಿ ತಿರುಪತಿಗೆ ಭೇಟಿ ಕೊಟ್ಟಿದ್ದು, ಅಮ್ಮನ ನೆನಪಿಗಾಗಿ ಉಂಗುರ ಧರಿಸಿದ್ದರು ಎನ್ನಲಾಗಿದೆ.
ಸೀರೆ ಮೇಲಕ್ಕೆತ್ತಿ ಜಾಹ್ನವಿ ಕಪೂರ್ ತಿರುಪತಿ ದರ್ಶನ: ಇಷ್ಟೆಲ್ಲಾ ಕಷ್ಟಪಡ್ಬೇಡಿ ಎಂದ ಫ್ಯಾನ್ಸ್
ಜಾಹ್ನವಿಯವರ ಸಿನಿ ಪಯಣದ ಕುರಿತು ಹೇಳುವುದಾದರೆ ಇವರು, ಇತ್ತೀಚೆಗೆ ಕರಣ್ ಜೋಹರ್ ಅವರ ‘ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಸದ್ಯ ‘ಮಿಸ್ಟರ್ ಅಂಡ್ ಮಿಸೆಸ್ ಮಾಹಿ’, ‘ದೇವ್ರಾ’, ‘ಬಡೆ ಮಿಯಾನ್ ಚೋಟೆ ಮಿಯಾನ್ 2’ ಮತ್ತು ಉಲ್ಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.