Rashmika Mandannaಗೆ ಇದ್ಯಾವ ಸೀಮೆ ನ್ಯಾಷನಲ್‌ ಕ್ರಷ್‌ ಎಂದ ನೆಟ್ಟಿಗರು

Published : Jul 20, 2023, 06:32 PM IST
Rashmika Mandannaಗೆ  ಇದ್ಯಾವ ಸೀಮೆ ನ್ಯಾಷನಲ್‌ ಕ್ರಷ್‌ ಎಂದ ನೆಟ್ಟಿಗರು

ಸಾರಾಂಶ

ನ್ಯಾಷನಲ್‌ ಕ್ರಷ್‌ ಎಂದೇ ಹೆಸರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ವೈರಲ್‌ ಆಗಿದ್ದು, ಇದ್ಯಾವ ಸೀಮೆ national crush ಇವರು ಎಂದು ಕೇಳುತ್ತಿದ್ದಾರೆ ನೆಟ್ಟಿಗರು.    

ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಚೆಗೆ ತಮ್ಮ ಈ ಪಟ್ಟದಿಂದ ಹಿಂದಕ್ಕೆ ಸರಿಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಹೆಚ್ಚಾಗಿ ನೆಗೆಟಿವ್​ ಸುದ್ದಿಗಳಿಂದಲೇ  ಕೆಲ ತಿಂಗಳಿನಿಂದ  ಸುದ್ದಿಯಲ್ಲಿರೋ ರಶ್ಮಿಕಾರನ್ನು ಇತ್ತೀಚಿನ ದಿನಗಳಲ್ಲಿ ಟ್ರೋಲ್‌ ಮಾಡುವವರೇ ಹೆಚ್ಚಾಗಿದ್ದಾರೆ.  ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಈಕೆ ಟ್ರೋಲ್​ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದರೂ, ಈಕೆಯನ್ನು ಯಾಕೋ ಈಗ ನ್ಯಾಷನಲ್‌ ಕ್ರಷ್‌ ಎನ್ನಲು  ಮನಸ್ಸು ಬಾರದು ಎಂಬುದಾಗಿ ಅನೇಕರು ಅಭಿಪ್ರಾಯಪಡುತ್ತಿದ್ದಾರೆ.  ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿರೋ  ನಟಿ ಈಗ ಏನೇ ಪೋಸ್ಟ್‌ ಹಾಕಿದರೂ ಹೊಗಳಿಕೆಗಿಂತ ಹೆಚ್ಚಾಗಿ ತೆಗಳಿಕೆಯ ಕಮೆಂಟ್‌ಗಳನ್ನೇ ಪಡೆಯುತ್ತಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಇನ್​ಸ್ಟಾಗ್ರಾಮ್​ನಲ್ಲಿ (Instagram) ಹೊಸ ದಾಖಲೆ ಬರೆದಿದ್ದ ನಟಿ, ದಕ್ಷಿಣ  ಸಿನಿ ಇಂಡಸ್ಟ್ರಿಯ ಬಹುತೇಕ ಖ್ಯಾತನಾಮ  ಸ್ಟಾರ್ ನಟರನ್ನು ಹಿಂದಿಕ್ಕಿದ್ದರು.  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು 38 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ದೊಡ್ಡ ದಾಖಲೆ ಬರೆದಿದ್ದರು.  ಇದರೊಂದಿಗೆ ರಶ್ಮಿಕಾ ಮಂದಣ್ಣ ಭಾರತದಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಾಯಕಿಯರಲ್ಲಿ ಒಬ್ಬರು ಎಂಬ ಸೆನ್ಸೇಷನಲ್ ದಾಖಲೆಯನ್ನು ದಾಖಲಿಸಿದ್ದಾರೆ. ಕಳೆದ ತಿಂಗಳು ಈಕೆಗೆ ಮ್ಯಾನೇಜರ್ ಮೋಸ ಮಾಡಿದ್ದರು ಎನ್ನುವ ಸುದ್ದಿ ಸಕತ್​ ವೈರಲ್​ ಆಗಿತ್ತು. ರಶ್ಮಿಕಾ ಅವರ ಮ್ಯಾನೇಜರ್​ ನಟಿಗೆ 80 ಲಕ್ಷ ರೂಪಾಯಿಗೂ ಅಧಿಕ  ಹಣ ವಂಚನೆ ಮಾಡಿದ್ದರು,  ಅವರನ್ನು  ರಶ್ಮಿಕಾ  ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿತ್ತು. ಆದರೆ ಈ ಸುದ್ದಿ ಸುಳ್ಳು ಎಂದೂ ಕೇಳಿಬಂದಿತ್ತು.

ಮ್ಯಾನೇಜರ್​ನಿಂದಲೇ ಮೋಸ ಹೋದ ರಶ್ಮಿಕಾ ಮಂದಣ್ಣ? ಫ್ಯಾನ್ಸ್​ ಶಾಕ್​!

ಅದೇನೇ ಇದ್ದರೂ ನಟಿ ಈಗ ನ್ಯಾಷನಲ್‌ ಕ್ರಷ್‌ (National Crush) ಹೆಸರಿನಿಂದ ತಮ್ಮ ಇಮೇಜನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಹುಟ್ಟಿದೆ. ಕಳೆದ ತಿಂಗಳಷ್ಟೇ ಈಗ ನಮ್ಮ ನ್ಯಾಷನಲ್‌ ಕ್ರಷ್‌  ನಟಿ ಮೃಣಾಲ್ ಠಾಕೂರ್‌ (Mrunal Thakur) ಎಂದು ಆಕೆಯ ಅಭಿಮಾನಿಗಳು ಹೇಳಿಕೊಂಡಿದ್ದರು.  ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿರುವ ನಟಿ ಮೃಣಾಲ್​, 'ಸೀತಾ ರಾಮಂ’ ಸಿನಿಮಾ ಬಿಡುಗಡೆಯ ನಂತರ  ಖ್ಯಾತಿ ಹೆಚ್ಚಿಸಿಕೊಂಡವರು.  ಇದೀಗ ಅವರನ್ನು ಫ್ಯಾನ್ಸ್​  ನ್ಯಾಷನಲ್ ಕ್ರಶ್ ಎನ್ನಲು ಆರಂಭಿಸಿದ್ದಾರೆ.  ಈಕೆ, ಕೇನ್ಸ್​ ಫೆಸ್ಟಿವಲ್​ನಲ್ಲಿ ಕಾಣಿಸಿಕೊಂಡ ಬಳಿಕ ನ್ಯಾಷನಲ್‌ ಕ್ರಷ್‌ ಬಿರುದನ್ನು ಈಕೆಗೆ ನೀಡಿದ್ದರು ಫ್ಯಾನ್ಸ್‌.

ಇದೀಗ ನಟಿ ರಶ್ಮಿಕಾ ತಮ್ಮ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಈಗ ಹಾಕಿರುವ ಇನ್ನೊಂದು ವಿಡಿಯೋ ಸಾಕ್ಷಿಯಾಗಿದೆ. ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುವ ವಿಡಿಯೋ ಒಂದನ್ನು ನಟಿ ಶೇರ್‌ ಮಾಡಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ತಮ್ಮ ಸಹೊದ್ಯೋಗಿಗಳ ಜೊತೆ ಹೊರಬಂದಿರುವ ನಟಿ, ನಂತರ ಕಾರಿನಲ್ಲಿ ಹೋಗಿ ಕುಳಿತುಕೊಳ್ಳುವ ವಿಡಿಯೋ ಇದಾಗಿದೆ. ಈಕೆಯ ಫ್ಯಾನ್ಸ್‌ ಸುಂದರಿ ಎಂದೆಲ್ಲಾ ಬಣ್ಣಿಸಿದರೂ, ಹಲವರು ಇವಳ್ಯಾವ ಸೀಮೆಯ ನ್ಯಾಷನಲ್ ಕ್ರಷ್‌ ಎಂದು ಮೂದಲಿಸಿದ್ದಾರೆ. ಈಕೆಯಿಂದ ಸಿನಿಮಾ ಇಂಡಸ್ಟ್ರಿಗೆ ಸಕತ್‌ ಲಾಸ್‌ ಆಗಿದ್ದು, ನ್ಯಾಷನಲ್‌ ಕ್ರಷ್‌ ಎನ್ನಲು ಸಾಧ್ಯವಿಲ್ಲ ಎಂಬ ಕಮೆಂಟ್‌ಗಳು ಬಂದಿವೆ.

Cannes 2023: ಬಾಲಿವುಡ್​ನ ಈ ಸುಂದರಿ ಈಗ NATIONAL CRUSH! ರಶ್ಮಿಕಾ ಫ್ಯಾನ್ಸ್​ ಶಾಕ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?