
'ಅನಿಮಲ್' ಚಿತ್ರದ ಯಶಸ್ಸಿನ ನಂತರ, ನಟಿ ತೃಪ್ತಿ ದಿಮ್ರಿ ನ್ಯಾಷನಲ್ ಕ್ರಶ್ ಎಂದು ಗುರುತಿಸಿಕೊಂಡಿದ್ದಾರೆ. ಈ ವರ್ಷ ಭಾರಿ ಸದ್ದು ಮಾಡಿದ ಅನಿಮಲ್ ಚಿತ್ರದಲ್ಲಿ ತೃಪ್ತಿ ದಿಮ್ರಿ ಎರಡನೇ ನಾಯ. ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿರೋ ತೃಪ್ತಿ ದಿಮ್ರಿ ಇತ್ತೀಚಿನ ದಿನಗಳಲ್ಲಿ ಹಾಟ್ ಟಾಪಿಕ್ ಆಗಿ ಉಳಿದಿದ್ದಾರೆ. ಚಿತ್ರದಲ್ಲಿ ನಟಿಯ ಪಾತ್ರ ಮತ್ತು ಧೈರ್ಯವನ್ನು ಸಿನಿ ರಸಿಕರು ತುಂಬಾ ಇಷ್ಟಪಟ್ಟಿದ್ದಾರೆ. ಚಿತ್ರದ ನಂತರ, ತೃಪ್ತಿಗೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂಬ ಟ್ಯಾಗ್ ನೀಡಿದ್ದಾರೆ. ಅಷ್ಟೇ ಅಲ್ಲ ನಟಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಟ್ರೆಂಡಿಂಗ್ ನಲ್ಲಿದ್ದಾರೆ.
ಇದರ ಜೊತೆಯಲ್ಲಿ ತೃಪ್ತಿಯ ಲೈಫ್‌ಸ್ಟೈಲ್, ವೈಯುಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೀತಿವೆ. ನಟಿಯ ಫ್ಯಾಮಿಲಿ, ಬಾಯ್‌ಫ್ರೆಂಡ್ ಬಗ್ಗೆ ಜನರು ಗೂಗಲ್ ಮಾಡುತ್ತಿದ್ದಾರೆ. ತೃಪ್ತಿ ದಿಮ್ರಿಗೆ ಈ ಹಿಂದೆ ನಟಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಶರ್ಮಾ ಅವರೊಂದಿಗೆ ಸಂಬಂಧವಿದೆ (Relationship) ಅನ್ನೋ ವದಂತಿ ಕೇಳಿ ಬಂದಿತ್ತು.
ಸದ್ಯದ ನ್ಯಾಷನಲ್ ಕ್ರಶ್ ಆಗಿರೋ ತೃಪ್ತಿ ದಿಮ್ರಿ ಮನೆ ಹೇಗಿದೆ ನೋಡಿ!?
ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಜೊತೆ ಡೇಟ್ ಮಾಡ್ತಿದ್ದ ತೃಪ್ತಿ
ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿಯಾಗಿರುವ ಅನುಷ್ಕಾ ಶರ್ಮಾ ಅವರ ಸೋದರ ಕರ್ಣೇಶ್ ಶರ್ಮಾ ಬಾಲಿವುಡ್‌ನ ಹೆಸರಾಂತ ನಿರ್ಮಾಪಕನಾಗಿದ್ದಾರೆ. ತನ್ನ ಸೋದರಿ ಅನುಷ್ಕಾ ಜೊತೆ ಸೇರಿ ಕ್ಲೀನ್ ಸ್ಲೇಟ್ ಫಿಲ್ಮ್ ಎಂಬ ಪ್ರೊಡಕ್ಷನ್ ಹೌಸ್‌ನ್ನು 2013ರಲ್ಲಿ ಕರ್ಣೇಶ್ ಶರ್ಮಾ ಸ್ಥಾಪಿಸಿದ್ದರು. ಅಲ್ಲದೇ ತ್ರಿಪ್ತಿ ನಟನೆಯ ಬುಲ್‌ಬುಲ್ ಹಾಗೂ ಖಲ ಸಿನಿಮಾವನ್ನು ಕರ್ಣೇಶ್ ಶರ್ಮಾ ನಿರ್ಮಾಣ ಮಾಡಿದ್ದರು. ಆದರೆ ಸದ್ಯ ಅವರಿಬ್ಬರೂ ಬೇರೆಯಾಗಿದ್ದಾರೆ ಮತ್ತು ಈಗ, ನಟಿ ಮಾಡೆಲ್-ಆಗಿರುವ ಉದ್ಯಮಿ (Businessman)ಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಇತ್ತೀಚೆಗೆ, ತೃಪ್ತಿ ದಿಮ್ರಿ ಮದುವೆಗೆ ಹಾಜರಾಗಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ (Social media) ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು.. ಇತ್ತೀಚೆಗೆ, ತೃಪ್ತಿ, ಮದುವೆ ಕಾರ್ಯದಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಒಂದು ಸ್ಯಾಮ್ ಮರ್ಚೆಂಟ್ ಜೊತೆಗಿನ ಸೆಲ್ಫಿ ಆಗಿತ್ತು. ಇದು ಇವರಿಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗಳನ್ನು ಹುಟ್ಟುಹಾಕಿದೆ.
ರಶ್ಮಿಕಾ ಮಂದಣ್ಣ 'ಅನಿಮಲ್'ನಲ್ಲಿ ಮಿಂಚಿದ ತೃಪ್ತಿ ಧಿಮ್ರಿ; ಹಾಟ್ ಅವತಾರಕ್ಕೆ ಭಾರತ ಫಿದಾ!
ಸ್ಯಾಮ್ ಮರ್ಚೆಂಟ್ ಯಾರು?
ಸ್ಯಾಮ್ ಮರ್ಚೆಂಟ್, ಅವರ Instagram ಬಯೋ ಪ್ರಕಾರ, ಗೋವಾದಲ್ಲಿರುವ ವಾಟರ್ಸ್ ಬೀಚ್ ಲೌಂಜ್ ಮತ್ತು ಗ್ರಿಲ್‌ನ ಸಂಸ್ಥಾಪಕರಾಗಿದ್ದಾರೆ. ಅವರ 249K ಅನುಯಾಯಿಗಳಲ್ಲಿ ದಿಶಾ ಪಟಾನಿ, ತೃಪ್ತಿ ಡಿಮ್ರಿ ಮತ್ತು ಟೈಗರ್ ಶ್ರಾಫ್ ಸೇರಿದ್ದಾರೆ. ಸ್ಯಾಮ್ ಮರ್ಚೆಂಟ್ ಮಾಡೆಲ್ ಆಗಿದ್ದರು. 2002ರಲ್ಲಿ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ನಂತರ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡರು. ಗೋವಾದಲ್ಲಿ ಬೀಚ್ ಕ್ಲಬ್‌ಗಳು ಮತ್ತು ಹೋಟೆಲ್‌ಗಳನ್ನು ಪ್ರಾರಂಭಿಸಿದರು.
ತೃಪ್ತಿ ದಿಮ್ರಿ ಇತ್ತೀಚಿನ ಬ್ಲಾಕ್‌ಬಸ್ಟರ್ ಅನಿಮಲ್ ಚಿತ್ರದಲ್ಲಿ ತನ್ನ ಅಭಿನಯದಿಂದ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು. ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದಲ್ಲಿ ನಟಿ ಜೋಯಾ ಪಾತ್ರವನ್ನು ನಿರ್ವಹಿಸಿದರು. ರಣಬೀರ್ ಕಪೂರ್ ಜೊತೆಗಿನ ಅವರ ನಿಕಟ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಚಿತ್ರ ಬಿಡುಗಡೆಯಾದಾಗಿನಿಂದ, ಆಕೆಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ವೇಗವಾಗಿ ಹೆಚ್ಚಿದೆ. ಕೆಲವೇ ದಿನಗಳಲ್ಲಿ 600k ನಿಂದ 4 ಮಿಲಿಯನ್‌ಗೆ ಏರಿದೆ.
ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಬಿಡುಗಡೆಯಾದಾಗಿನಿಂದ ಪ್ರೇಕ್ಷಕರಿಂದ ಗುಡುಗು ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಶ್ವದಾದ್ಯಂತ 800 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಲೇ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.