ನಟಿ ರಶ್ಮಿಕಾ ಮಂದಣ್ಣ ಲೈಫ್ಗೆ ಎಂಟ್ರಿ ಕೊಟ್ಟವರಾರು? ನಿಗೂಢ ಪೋಸ್ಟ್ ಹಾಕಿ ಫ್ಯಾನ್ಸ್ ತಲೆಗೆ ಹುಳಬಿಟ್ಟಿದ್ದಾರೆ ನಟಿ. ಅವರು ಹೇಳಿದ್ದೇನು?
ಅನಿಮಲ್ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್ ಸುದ್ದಿಯಲ್ಲಿದ್ದಾರೆ. ನಟ ರಣಬೀರ್ ಕಪೂರ್ ಜೊತೆಗಿನ ಲಿಪ್ಲಾಕ್ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್ ಸೀನ್ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಪಾತ್ರಕ್ಕಾದರೂ ಸೈ ಎನ್ನುವಂಥ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ಜೀವನದಲ್ಲಿ ಯಾರೋ ಎಂಟ್ರಿ ಕೊಟ್ಟ ಹಾಗಿದೆ. ನಿಗೂಢ ಪೋಸ್ಟ್ ಹಾಕುವ ಮೂಲಕ ನಟಿ, ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ನನ್ನ ಲೈಫ್ಗೆ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂಬ ಬರಹ ಇರುವ ಪೋಸ್ಟ್ ಹಾಕಿದ್ದಾರೆ. ಅಷ್ಟಕ್ಕೂ ನಟಿ ಈ ಪೋಸ್ಟ್ ಹಾಕಿರುವುದು ನಟ ವಿಜಯ ದೇವರಕೊಂಡ ಅವರಿಗೆ ಎಂದು ಹೇಳಲಾಗುತ್ತಿದ್ದರೂ, ನಟಿಯ ಬದುಕಲ್ಲಿ ಬೇರೆ ಯಾರಾದ್ರೂ ಎಂಟ್ರಿ ಕೊಟ್ಟಿರಬಹುದೇ ಎಂಬ ಊಹೆಯನ್ನೂ ಫ್ಯಾನ್ಸ್ ಮಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ, ವಿಜಯ್ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು. ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ಅದರಲ್ಲೇನು ಎಂದು ಸ್ವಲ್ಪ ಗರಂ ಆಗಿದ್ದರು. ಇವರಿಬ್ಬರೂ ನ್ಯೂಯಾರ್ಕ್ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು.
ಅರೆಬರೆ ಬೆತ್ತಲಾದ ರಶ್ಮಿಕಾಗಿಂತ ಪೂರ್ತಿ ನಗ್ನಳಾದ ತೃಪ್ತಿಗೆ ಇಷ್ಟು ಕಮ್ಮಿ ದುಡ್ಡಾ? ಮೋಸ ಅಂತಿದ್ದಾರೆ ಫ್ಯಾನ್ಸ್
ಇತ್ತೀಚೆಗೆ ಇವರು ಟರ್ಕಿಯಲ್ಲಿ ಒಟ್ಟಿಗೇ ಇದ್ದರು ಎನ್ನುವುದು ಇಬ್ಬರ ಫೋಟೋಗಳಿಂದ ಫ್ಯಾನ್ಸ್ ಪತ್ತೆ ಹಚ್ಚಿದ್ದರು. ಟರ್ಕಿಯಲ್ಲಿ ಒಟ್ಟಿಗೇ ಸುತ್ತಾಡಿದ್ದರು ಎನ್ನುವುದು ಈ ಫೋಟೋಗಳಿಂದ ತಿಳಿದುಬಂದಿತ್ತು. ಅಷ್ಟಕ್ಕೂ ವಿಜಯ ಮತ್ತು ರಶ್ಮಿಕಾ ಟರ್ಕಿಯ ಫೋಟೋಗಳನ್ನು ತುಂಬಾ ದಿನಗಳ ಅಂತರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲು ಇದನ್ನು ವಿಜಯ್ ಶೇರ್ ಮಾಡಿಕೊಂಡಿದ್ದರು. ರೆಸ್ಟೋರೆಂಟ್ ಒಂದರಲ್ಲಿ ಆಹಾರ ಸೇವಿಸುವ ಫೋಟೋ ಇದಾಗಿದೆ. ಅದೇ ಬ್ಯಾಕ್ಗ್ರೌಂಡ್ ಇರುವ ಫೋಟೋವನ್ನು ರಶ್ಮಿಕಾ ಬಹಳ ದಿನಗಳ ಬಳಿ ಶೇರ್ ಮಾಡಿಕೊಂಡಿದ್ದು, ಇದು ತುಂಬಾ ಹಳೆಯ ಫೋಟೋ ಎಂದಿದ್ದರು. ಆದರೆ ಇಬ್ಬರ ಫೋಟೋಗಳನ್ನು ಕಂಪೇರ್ ಮಾಡಿರುವ ಫ್ಯಾನ್ಸ್ ಇವೆರಡೂ ಒಂದೇ ಹೋಟೆಲ್ನದ್ದು ಎಂದು ಪತ್ತೆ ಹಚ್ಚಿದ್ದರು.
ಅಷ್ಟಕ್ಕೂ ಈ ಹಿಂದೆ ಕೂಡ ರಶ್ಮಿಕಾ ಇದೇ ರೀತಿ ಸೇಮ್ ಬ್ಯಾಕ್ಗ್ರೌಂಡ್ ಇರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಆಗಲೂ ಫ್ಯಾನ್ಸ್ ಸಕತ್ ಕಮೆಂಟ್ಮಾಡಿದ್ದರು. ಈಗ ಪುನಃ ಅದೇ ರೀತಿ ಮಾಡಿರುವ ಕಾರಣ ಕೆಲವೊಂದು ನಟಿಯ ವಿರುದ್ಧ ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ತಾವು ಮತ್ತು ವಿಜಯ್ ದೇವರಕೊಂಡ ರಿಲೇಷನ್ನಲ್ಲಿ ಇರುವುದು ಫ್ಯಾನ್ಸ್ಗಳಿಗೆ ತಿಳಿಯಲಿ ಎನ್ನುವ ಕಾರಣಕ್ಕೆ ಈ ರೀತಿ ನಟಿ ನಾಟಕ ಮಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಅವರು ಫೋಟೋ ಶೇರ್ ಮಾಡಿದ ಮೇಲೆ ಅದೇ ರೀತಿಯ ಬ್ಯಾಕ್ಗ್ರೌಂಡ್ ಇರುವ ಫೋಟೋಗಳನ್ನು ತಾವೂ ಶೇರ್ ಮಾಡುತ್ತಾರೆ ಎನ್ನುತ್ತಿದ್ದಾರೆ.
'ಅನಿಮಲ್'ನಲ್ಲಿ ರಶ್ಮಿಕಾ ನೋಡಿ ಡೀಪ್ಫೇಕ್ನವ್ರು ಬೆಚ್ಚಿ ಬಿದ್ರಂತೆ! ಕ್ಷಮಿಸಿ ಎಂದ ಅಮಿತಾಭ್- ಕಾಲೆಳೆದ ಫ್ಯಾನ್ಸ್!