ಅನಿಮಲ್ ಚಿತ್ರದಲ್ಲಿ ಬೆತ್ತಲಾಗಿ ಹಲ್ಚಲ್ ಸೃಷ್ಟಿಸಿದ್ದ ನಟಿ ತೃಪ್ತಿ ಡಿಮ್ರಿ, ಇದೀಗ ಕತ್ರೀನಾ ಕೈಫ್ ಪತಿ ವಿಕ್ಕಿ ಜೊತೆ ಮತ್ತೆ ಬೆತ್ತಲಾಗಿದ್ದಾರೆ. ಈ ಬಾರಿ ಅವರ ಸಂಭಾವನೆ ಎಷ್ಟು?
ಅನಿಮಲ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್ ಮೀಡಿಯಾ ಕೂಡ ಸರ್ಚ್ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ.
ಈ ನಟಿಯ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ಬೆತ್ತಲಾದ ನಟಿಯ ಜೊತೆ ಡೇಟಿಂಗ್ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಇದೀಗ ಅನಿಮಲ್ ಚಿತ್ರದಲ್ಲಿ ತೃಪ್ತಿ ಜೊತೆ ನಟಿಸಿದ ನಟ ಸಿದ್ಧಾಂತ್ ಕಾರ್ನಿಕ್ ಅವರೂ ತೃಪ್ತಿ ಡಿಮ್ರಿಯ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಡೇಟಿಂಗ್ ಮಾಡುವುದು ತಮ್ಮ ಬಹು ದಿನಗಳ ಕನಸು ಎಂದು ಹೇಳಿದ್ದರು. ಇದಿಷ್ಟೇ ಅಲ್ಲದೇ ಈಗ ಸಿನಿಮಾದಲ್ಲಿಯೂ ನಟಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ. ಅರೆಬರೆ ಬೆತ್ತಲಾಗುತ್ತಿದ್ದ ನಟಿಯರನ್ನು ಹಿಂದಿಕ್ಕಿ ಪೂರ್ಣ ಬೆತ್ತಲಾದ ಮೇಲೆ ಸಹಜವಾಗಿ ಈಕೆಗೆ ಸಿನಿಮಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಇದೀಗ ‘ಬ್ಯಾಡ್ ನ್ಯೂಸ್’ ಚಿತ್ರದಲ್ಲಿ ನಟಿ ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಜೊತೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲೂ ಅನಿಮಲ್ ರೀತಿಯಲ್ಲಿಯೇ ಧಾರಾಳವಾದ ಇಂಟಿಮೇಟ್ ದೃಶ್ಯಗಳು ಇವೆ ಎನ್ನಲಾಗಿದೆ.
ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್
ಅಂದಹಾಗೆ ಅನಿಮಲ್ ಚಿತ್ರದ ಯಶಸ್ಸಿನ ಬಳಿಕ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ದ ತೃಪ್ತಿಯ ಸಂಭಾವನೆ ಕೂಡ ಇದೀಗ ಡಬಲ್ ಆಗಿದೆ. ಇದಾಗಲೇ ‘ಬ್ಯಾಡ್ ನ್ಯೂಸ್’ ಸಿನಿಮಾದ ಹಸಿಬಿಸಿ ದೃಶ್ಯಗಳಿಂದ ಅಭಿಮಾನಿಗಳು ಚಿತ್ರ ನೋಡಲು ಕಾತರರಾಗಿರುವ ನಡುವೆಯೇ ನಟಿಯ ಸಂಭಾವನೆಯ ಬಗ್ಗೆಯೂ ಸಾಕಷ್ಟು ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ, ರಣಬೀರ್ ಕಪೂರ್ ಜೊತೆ ಬೆತ್ತಲಾಗಲು 40 ಲಕ್ಷ ರೂಪಾಯಿ ಪಡೆದಿದ್ದ ನಟಿ, ಈಗ ವಿಕ್ಕಿ ಕೌಶಲ್ ಜೊತೆ ಇದೇ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈಕೆಯಿಂದಲೇ ಅನಿಮಲ್ ಸಿನಿಮಾ ಬ್ಲಾಕ್ಬಸ್ಟರ್ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಈಕೆ ಕೇಳಿದ್ದಷ್ಟು ಕೊಡಲು ಚಿತ್ರ ತಂಡ ಒಪ್ಪಿದೆ.
ಇನ್ನು, ನಟಿಯ ಕುರಿತು ಹೇಳುವುದಾದರೆ, 29 ವರ್ಷದ ತೃಪ್ತಿ ಈ ಮೊದಲು ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಜೊತೆ ಸಂಬಂಧದಲ್ಲಿದ್ದರು. ಅದರ ಬಳಿ ಅವರ ನಡುವೆ ಬ್ರೇಕಪ್ ಆಗಿದೆ. ಇದೀಗ ನಟಿ, ಹೋಟೆಲ್ ಉದ್ಯಮಿ ಆಗಿರುವ ಸ್ಯಾಮ್ ಮರ್ಚೆಂಟ್ ಜೊತೆ ಸಂಬಂಧ ಹೊಂದಿದ್ದು, ಇವರಿಬ್ಬರ ಫೋಟೋಗಳು ಇದಾಗಲೇ ವೈರಲ್ ಆಗಿವೆ. ತಮ್ಮ ಸಂಬಂಧವನ್ನು ಇನ್ನೂ ಕನ್ಫರ್ಮ್ ಮಾಡಿಲ್ಲ ನಟಿ. ಆದರೆ ಚಿತ್ರತಾರೆಯರ ಸಂಬಂಧ ಗುಟ್ಟಾಗೇನೂ ಉಳಿಯುವುದಿಲ್ಲವಲ್ಲ. ಅಂದಹಾಗೆ, ಸ್ಯಾಮ್ ಮರ್ಚೆಂಟ್ ಅವರು ಗೋವಾದಲ್ಲಿರುವ ವಾಟರ್ಸ್ ಬೀಚ್ ಲೌಂಜ್ ಮತ್ತು ಗ್ರಿಲ್‌ನ ಸಂಸ್ಥಾಪಕರಾಗಿದ್ದಾರೆ. ಅವರ 249K ಅನುಯಾಯಿಗಳಲ್ಲಿ ದಿಶಾ ಪಟಾನಿ, ತೃಪ್ತಿ ಡಿಮ್ರಿ ಮತ್ತು ಟೈಗರ್ ಶ್ರಾಫ್ ಸೇರಿದ್ದಾರೆ. ಸ್ಯಾಮ್ ಮರ್ಚೆಂಟ್ ಮಾಡೆಲ್ ಆಗಿದ್ದರು. 2002ರಲ್ಲಿ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ನಂತರ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡರು. ಗೋವಾದಲ್ಲಿ ಬೀಚ್ ಕ್ಲಬ್‌ಗಳು ಮತ್ತು ಹೋಟೆಲ್‌ಗಳನ್ನು ಪ್ರಾರಂಭಿಸಿದರು.
ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು!