ಸಮಂತಾ ಬೋಲ್ಡ್‌ ಪಾತ್ರಕ್ಕೆ ಡಿವೋರ್ಸ್‌ ಆದ್ರೆ, ಶೋಭಿತಾ ಕಾಂಡೋಮ್‌ ಜಾಹೀರಾತು ನಾಗಚೈತನ್ಯಗೆ ಕಾಣಿಸಿಲ್ವಾ?: ನೆಟ್ಟಿಗರು

Published : Apr 01, 2025, 12:43 PM ISTUpdated : Apr 09, 2025, 01:21 PM IST
ಸಮಂತಾ ಬೋಲ್ಡ್‌ ಪಾತ್ರಕ್ಕೆ ಡಿವೋರ್ಸ್‌ ಆದ್ರೆ, ಶೋಭಿತಾ ಕಾಂಡೋಮ್‌ ಜಾಹೀರಾತು ನಾಗಚೈತನ್ಯಗೆ ಕಾಣಿಸಿಲ್ವಾ?: ನೆಟ್ಟಿಗರು

ಸಾರಾಂಶ

ನಾಗಚೈತನ್ಯ ಹಾಗೂ ಸಮಂತಾ ಮಧ್ಯೆ ಏನಾಯ್ತು? ಯಾಕೆ ಡಿವೋರ್ಸ್‌ ಆಯ್ತು ಎನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೊಂದು ಕಡೆ ಸಮಂತಾ ಬೋಲ್ಡ್‌ ಪಾತ್ರಗಳೇ ಕಾರಣ ಎನ್ನುವವರೂ ಇದ್ದಾರೆ. ಈಗ ಶೋಭಿತಾರ ಕಾಂಡೋಮ್‌ ಜಾಹೀರಾತಿನ ಬಗ್ಗೆ ಏನಂತಾರೆ? 

‘ದಿ ಫ್ಯಾಮಿಲಿ ಮ್ಯಾನ್’‌ ವೆಬ್‌ ಸಿರೀಸ್‌ನಲ್ಲಿ ಅತಿಯಾದ ಬೋಲ್ಡ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ‘ಪುಷ್ಪ’ ಸಿನಿಮಾದಲ್ಲಿ ‘ಊ ಅಂಟಾವಾ ಮಾವ’ ಹಾಡಿನಲ್ಲಿ ಹೆಜ್ಜೆ ಹಾಕಿದ್ದಕ್ಕೆ ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್‌ ಆಯಿತು ಎಂಬ ಮಾತು ಕೇಳಿ ಬಂದಿತ್ತು. ಈಗ ನಾಗಚೈತನ್ಯ ಅವರ ಎರಡನೇ ಪತ್ನಿ ಶೋಭಿತಾ ಧುಲಿಪಾಲ ಅವರು ಕಾಂಡೋಮ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಏನು ಹೇಳ್ತೀರಾ ಎಂದು ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ಪ್ರಶ್ನೆ ಮಾಡ್ತಿದ್ದಾರೆ.

ಸಮಂತಾ ಬಿಟ್ಟು ಬೇರೆ ಯಾರೂ ಬೇಡ! 
ಆರು ವರ್ಷಗಳ ಕಾಲ ಪ್ರೀತಿಸಿದ್ದ ನಾಗಚೈತನ್ಯ ಹಾಗೂ ಸಮಂತಾ ಅವರು ಬಹಳ ಅದ್ದೂರಿಯಾಗಿ ಮದುವೆಯಾದರು. ಈ ಮದುವೆಗೆ ಹತ್ತು ಕೋಟಿ ರೂಪಾಯಿ ಖರ್ಚು ಮಾಡಿತ್ತು. ಸಮಂತಾ ಸೀರೆಯಲ್ಲಿ ಇವರಿಬ್ಬರ ಲವ್‌ ಕಹಾನಿ ರುಜು ಹಾಕಲಾಗಿತ್ತು ಟಾಲಿವುಡ್‌ನ ಲವ್‌ಲೀ ಕಪಲ್‌ ಲಿಸ್ಟ್‌ಗೆ ಸೇರಿದ್ದ ಇವರು ಸಂದರ್ಶನಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ಸುದ್ದಿಗೋಷ್ಠಿಗಳಲ್ಲಿ ಪರಸ್ಪರ ಪ್ರೀತಿಯನ್ನು ಹೇಳಿಕೊಂಡುವ ರೀತಿ ನೋಡಿ, ನಮಗೂ ಈ ರೀತಿ ಸಂಗಾತಿ ಸಿಗಬೇಕು, ಸಿಕ್ಕಿದ್ರೆ ಎಷ್ಟು ಚೆನ್ನ ಎನ್ನುವ ಮಾತು ಬಂದಿತ್ತು. ಒಂದು ಟಾಕ್‌ ಶೋನಲ್ಲಿ ನಾಗಚೈತನ್ಯ ಅವರಂತೂ “ನನಗೆ ಸಮಂತಾ ಬಿಟ್ರೆ ಯಾವ ಆಪ್ಶನ್‌ ಬೇಡ” ಎಂದು ಹೇಳಿದ್ದರು. 

ಕೊನೆಗೂ ಸಂದರ್ಶನದಲ್ಲಿ ಶೋಭಿತಾ ಧುಲಿಪಾಲ ಜೊತೆ ಮದುವೆಯಾದ ಕಾರಣ ಬಿಚ್ಚಿಟ್ಟ ನಾಗಚೈತನ್ಯ! ಹೌಹಾರಿದ ಫ್ಯಾನ್ಸ್!‌

ನಾಗಚೈತನ್ಯ ಮೋಸ ಮಾಡಿದ್ರಾ? 
ಅದ್ಯಾರ ಕಣ್ಣು ಬಿತ್ತೋ ಏನೋ! ಇವರಿಬ್ಬರು ಬೇರೆ ಬೇರೆಯಾದರು. ಡಿವೋರ್ಸ್‌ ಬಗ್ಗೆ ಸಾಕಷ್ಟು ಅನುಮಾನ ಬಂದರೂ ಕೂಡ ಯಾವುದಕ್ಕೂ ರಿಯಾಕ್ಟ್‌ ಮಾಡದೆ, ಒಂದು ದಿನ ಡಿವೋರ್ಸ್‌ ಆಗಿರೋದು ಪಕ್ಕಾ ಎಂದು ಅಧಿಕೃತ ಮಾಹಿತಿ ನೀಡಿದ್ದರು. ಇಲ್ಲಿ ಯಾರದ್ದು ತಪ್ಪು ಎನ್ನೋ ಬಗ್ಗೆ ಕ್ಲಾರಿಟಿಯೇ ಇಲ್ಲ. ಸಂದರ್ಶನಗಳಲ್ಲಿ ಸಮಂತಾ ಮಾತುಗಳನ್ನು ಕೇಳಿದೋರಿಗೆ ನಾಗಚೈತನ್ಯ ಮೋಸ ಮಾಡಿದ್ದಾರೆಂದು ಮೇಲ್ನೋಟಕ್ಕೆ ಅರ್ಥ ಆಗಿತ್ತು. 

ಈ ವಿಷಯ ನಾಗಚೈತನ್ಯಗೆ ಗೊತ್ತಾ? 
ಸಮಂತಾ, ನಾಗಚೈತನ್ಯ ಡಿವೋರ್ಸ್‌ ಆಗ್ತಿದ್ದಂತೆ ನಾಗಚೈತನ್ಯ ಹಾಗೂ ಶೋಭಿತಾ ಒಟ್ಟಿಗೆ ಇರುವ ಫೋಟೋಗಳು ವೈರಲ್‌ ಆಗಿತ್ತು. ಆಗೆಲ್ಲ ಪ್ರೀತಿ ವಿಷಯವನ್ನು ತಳ್ಳಿಹಾಕಿದ್ದ ಶೋಭಿತಾ, ಆಮೇಲೆ ಎಂಗೇಜ್‌ ಮಾಡಿಕೊಂಡು ಅಧಿಕೃತ ಮಾಹಿತಿ ನೀಡಿದರು. ಸಮಂತಾ ಅವರು ಬೋಲ್ಡ್‌ ಪಾತ್ರಗಳನ್ನು ಮಾಡುತ್ತಿರೋದರಿಂದ ಇವರಿಬ್ಬರ ಮಧ್ಯೆ ಡಿವೋರ್ಸ್‌ ಆಗಿದೆ ಎಂದು ಅನೇಕರು ಹೇಳಿದ್ದರು. ಈಗ ಶೋಭಿತಾರ ಕಾಂಡೋಮ್‌ ಜಾಹೀರಾತು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದು, ಇದು ನಾಗಚೈತನ್ಯಗೆ ಗೊತ್ತೇ ಎನ್ನುವ ಪ್ರಶ್ನೆ ಎದ್ದಿದೆ. 

ನಾಗಾರ್ಜುನ, ನಾಗ ಚೈತನ್ಯರಲ್ಲಿ ಜಾಸ್ತಿ ರೊಮ್ಯಾಂಟಿಕ್ ಯಾರು ಗೊತ್ತಾ?: ಆ ರಹಸ್ಯ ಬಿಚ್ಚಿಟ್ಟ ಶೋಭಿತಾ!

ಈಗ ಏನು ಹೇಳ್ತಾರೆ? 
ಕಾಂಡೋಮ್‌ ಜಾಹೀರಾತಿನಲ್ಲಿ ರಣವೀರ್‌ ಸಿಂಗ್‌, ಶೋಭಿತಾ ಕಾಣಿಸಿಕೊಂಡಿದ್ದಾರೆ. ಇದರ ಸಂಪೂರ್ಣ ತುಣುಕು ಯುಟ್ಯೂಬ್‌ನಲ್ಲಿದೆ. ಶೋಭಿತಾ ಈ ರೀತಿ ಮಾಡಿದ್ದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಸಮಂತಾ ಪಾತ್ರಗಳಿಂದಲೇ ಡಿವೋರ್ಸ್‌ ಆಗಿದ್ದು ಎನ್ನೋದಾದರೆ, ಈಗ ಕಾಂಡೋಮ್‌ ಜಾಹೀರಾತಿನ ಬಗ್ಗೆ ಏನು ಹೇಳ್ತಾರೆ ಎಂದು ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡ್ತಿದ್ದಾರೆ. 

ಹಣ ವ್ಯರ್ಥ ಮಾಡಿದೆ ಎಂದಿದ್ದ ಸಮಂತಾ! 
ಇನ್ನು ಸಮಂತಾ ಅವರು ‘ಕಾಫಿ ವಿಥ್‌ ಕರಣ್’‌ ಶೋನಲ್ಲಿ ಭಾಗಿಯಾಗಿದ್ದು, “ನನ್ನ ಹೃದಯ ಕ್ಲೋಸ್‌ ಆಗಿದೆ, ನನ್ನ ಮೇಲೆ ಲವ್‌ ಆಗಿದ್ದೋರು ದಯವಿಟ್ಟು ಯೂಟರ್ನ್‌ ತಗೊಳ್ಳಿ” ಎಂದು ಹೇಳಿದ್ದರು. “ನನ್ನ ಮಾಜಿ ಗಂಡನಿಗೆ ದುಬಾರಿ ಉಡುಗೊರೆ ಕೊಟ್ಟು ಹಣ ವ್ಯರ್ಥ ಮಾಡಿದೆ” ಎಂದು ಕೂಡ ಸಮಂತಾ ಅವರು ಮುಕ್ತವಾಗಿ ಹೇಳಿಕೊಂಡಿದ್ದರು. 

ಸ್ಪಷ್ಟನೆ ಕೊಟ್ಟಿದ್ದ ನಾಗಚೈತನ್ಯ! 
ನಾಗಚೈತನ್ಯ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, “ನನ್ನನ್ನು ಎಲ್ಲರೂ ಅಪರಾಧಿ ಮಾಡಿದ್ರು. ನಮ್ಮ ಮನೆಯಲ್ಲಿ ಈಗಾಗಲೇ ತಂದೆ ಡಿವೋರ್ಸ್‌ ಆಗಿ ಮತ್ತೆ ಮದುವೆ ಆಗಿದೆ. ನಮಗೆ ಇದರ ಎಫೆಕ್ಟ್‌ ಗೊತ್ತಿದೆ. ನಾನು ಮೂವ್‌ ಆನ್‌ ಆಗಿದ್ದೇನೆ, ಸಮಂತಾ ಕೂಡ ಆಗಿದ್ದಾರೆ. ಇನ್ನು ಇದಕ್ಕೂ ಶೋಭಿತಾಗೂ ಸಂಬಂಧವೇ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!