32 ವರ್ಷಗಳ ಬಳಿಕ ರಜನಿ, ಅಮಿತಾಭ್‌ ಒಟ್ಟಿಗೆ ನಟನೆ

By Kannadaprabha NewsFirst Published Jun 11, 2023, 11:00 AM IST
Highlights

ಭಾರತೀಯ ಚಿತ್ರರಂಗದಲ್ಲಿಯೇ ಅತ್ಯುತ್ತಮ ನಟರೆಂದು ಗುರುತಿಸಲ್ಪಡುವ ಎರಡು ಅದ್ಭುತ ದಂತಕಥೆಗಳಾದ ಅಮಿತಾಭ್ ಬಚ್ಚನ್ ಹಾಗೂ ರಜನೀಕಾಂತ್ ಒಟ್ಟಾಗಿ ಚಿತ್ರವೊಂದರಲ್ಲಿ ನಟೆಸುತ್ತಿದ್ದಾರಂತೆ. 

ನವದೆಹಲಿ (ಜೂ.10): ಭಾರತೀಯ ಚಿತ್ರರಂಗದ ಇಬ್ಬರು ಸೂಪರ್‌ ಸ್ಟಾರ್‌ಗಳು ಸುಮಾರು 32 ವರ್ಷಗಳ ಬಳಿಕ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್‌ ಹಾಗೂ ಅಮಿತಾಭ್‌ ಬಚ್ಚನ್‌ ‘ತಲೈವರ್‌ 170’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಜೈಲರ್‌ ಸಿನಿಮಾದ ಶೂಟಿಂಗ್‌ ಮುಗಿಸಿರುವ ರಜನಿಕಾಂತ್‌, ‘ಜೈಭೀಮ್‌’ ಸಿನಿಮಾ ಖ್ಯಾತಿಯ ಟಿ.ಜೆ.ಜ್ಞಾನವೇಲ್‌ ಅವರ ನಿರ್ದೇಶನದ ತಲೈವರ್‌ 170 ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್‌ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

32 ವರ್ಷಗಳ ಮೊದಲು ಈ ಇಬ್ಬರು ನಟರು ‘ಹಮ್‌’, ‘ಅಂದಾ ಕಾನೂನ್‌’ ಮತ್ತು ‘ಗೆರಾಫ್ತಾರ್‌’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಸುಮಾರು 72 ವರ್ಷದ ರಜನೀಕಾಂತ್ ಮೂಲತಃ ಕರ್ನಾಟಕದವರಾದರೂ ತಮ್ಮ ಛಾಪು ಮೂಡಿಸಿದ್ದು ತಮಿಳು ಸಿನಿಮಾದಲ್ಲಿ. ಅಭಿಮಾನಗಳ ಲೋಕವನ್ನು ಸೃಷ್ಟಿಸಿಕೊಂಡಿರುವ ರಜನೀಕಾಂತ್ ಚಿತ್ರಗಳೆಂದರೆ ಜನರಿಗೆ ಎಲ್ಲಿಲ್ಲದ ಕ್ರೇಜ್. ದಕ್ಷಿಣ ಭಾರತೀಯ ಅತ್ಯುತ್ತಮ ಫ್ಯಾನ್ ಫಾಲೋಯರ್ಸ್ ಹೊಂದಿರುವ ನಟರಲ್ಲಿ ಒಬ್ಬರಾಗಿರುವ ರಜನೀಕಾಂತ್‌ ತಮ್ಮದೇ ವಿಶಿಷ್ಟ ಸ್ಟೈಲ್‌ಗಳಿಂದಲೇ ಮನೆ ಮಾತಾದವರು. ಈಗಾಗಲೇ 80 ವರ್ಷಗಳನ್ನು ಪೂರೈಸಿರುವ ಬಾಲಿವುಡ್ ಬಿಗ್ ಅಮಿತಾಭ್ ಬಚ್ಚನ್ ಬಗ್ಗೆ ಹೇಳುವುದು ಬೇಡ. ಭಾರತೀಯ ಸಿನಿ ಲೋಕದಲ್ಲಿ ಹೆಚ್ಚು ವರ್ಷಗಳ ಕಾಲ ಸೂಪರ್ ಸ್ಟಾರ್ಸ್ ಆಗಿಯೇ ಮೆರೆದವರು. ಘಂಟೆಯಂತೆ ಶಾರೀರ, ಶರೀರ ಹಾಗೂ ಅಭಿನಯದಿಂದ ಚಿತ್ರ ರಸಿಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. 

ರಜನಿಕಾಂತ್‌ ಬದುಕಿನಲ್ಲಿ ನಡೆದ ಪವಾಡ ಎಂಥದ್ದು: ತಾಯಿ ಭೈರವಿ ಬಗ್ಗೆ ಸತ್ಯ ಬಾಯ್ಬಿಟ್ಟ ತಲೈವಾ !

ಹಮ್ ಚಿತ್ರದಲ್ಲಿ ನಟಿಸಿದ್ದ ದಿಗ್ಗಜರು:
1991ರಲ್ಲಿ ಬಿಡುಗಡೆಯಾದ ಆ್ಯಕ್ಷನ್ ಕ್ರೈಮ್ ಚಿತ್ರ ಹಮ್ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಅಮಿತಾಭ್ ಬಚ್ಚನ್, ರಜನೀಕಾಂತ್ ಜೊತೆ ಗೋವಿಂದ, ಕಿಮಿ ಕಟ್ಕರ್, ದೀಪಾ ಸಾಹಿ, ಶಿಲ್ಪಾ ಶೋರೋಡ್ಕರ್, ಅನುಪಮ್ ಖೇರ್ ಸಹ ನಟಿಸಿದ್ದರು. ಈ ಚಿತ್ರದ ನಂತರ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಐದು ವರ್ಷಗಳ ಬ್ರೇಕ್ ತೆಗೆದೊಕೊಂಡಿದ್ದರು. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಮುಂಚೂಣಿಯಲ್ಲಿದ್ದ ಈ ಚಿತ್ರಕ್ಕೆ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳು ಸಂದಿದ್ದವು. ಅಮಿತಾಭ್ ಬಚ್ಚನ್‌ಗೆ ಅತ್ಯುತ್ತಮ ನಟ ಪ್ರಶಸ್ತಿಯೂ ಮುಡಿಗೇರಿತ್ತು. ಕನ್ನಡದಲ್ಲಿ ಬಂದ ಕೋಟಿಗೊಬ್ಬ ಚಿತ್ರದ ರೀಮೇಕ್ ಈ ಹಮ್ ಚಿತ್ರವಾಗಿದ್ದು, ಮೂಲತಃ ತಮಿಳಿನ ಭಾಷಾ ಚಿತ್ರದ ಅವತರಿಣಿಕೆ. 

ಅಂದಾ ಕಾನೂನು: 
ಟಿ.ರಾಮ ರಾವ್ ನಿರ್ದೇಶನದ ಈ ಚಿತ್ರದ ಮುಖ್ಯ ಪಾತ್ರದಲ್ಲಿ ರಜನೀಕಾಂತ್, ಹೇಮ ಮಾಲಿನಿ, ರೀನಾ ರಾಯ್ ನಟಿಸಿದ್ದರು. ಅತಿಥಿ ಪಾತ್ರದಲ್ಲಿ ಪ್ರೇಮ್ ಚೋಪ್ರಾ, ಡ್ಯಾನಿ ಡೆಂಡೋಗ್ಪಾ, ಪ್ರಾಣ್, ಮದನ್ ಪುರಿ ಹಾಗೂ ಅಮರೀಷ್ ಪುರಿ ಮತ್ತು ಅಮಿತಾಭ್ ಬಚ್ಚನ್ ಈ ಚಿತ್ರದಲ್ಲಿ ನಟಿಸಿದ್ದರು. ಮಾಧವಿ ಹಾಗೂ ಧರ್ಮೇದ್ರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಸತ್ತಮ್ ಉರು ಇರುತ್ತರೈ ಎಂಬ ತಮಿಳು ಚಿತ್ರದ ರೀಮೇಕ್ ಆದ ಈ ಚಿತ್ರ 1983ರಲ್ಲಿ ತರೆ ಕಂಡಿತ್ತು. ಕೊಲೆ, ಕಾನೂನು, ಸೇಡಿನ ಸುತ್ತ ಸುತ್ತುವ ಈ ಚಿತ್ರ ಕಾನೂನಿನ ವಿವಿಧ ಮಜಲುಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿತ್ತು. 

ಸೌಂದರ್ಯದ ಘನಿ ಸಿಲ್ಕ್​ ಸ್ಮಿತಾರನ್ನು ಮೋಹಿಸಿದ್ರಂತೆ ಸೂಪರ್​ಸ್ಟಾರ್​ ರಜನೀಕಾಂತ್!​

ಗೆರಫ್ತಾರ್: 
1985ರಲ್ಲಿ ತೆರೆ ಕಂಡ ಆ್ಯಕ್ಷನ್, ಡ್ರಾಮಾ ಗೆರಫ್ತಾರ್ ಚಿತ್ರವನ್ನು ಪ್ರಯಾಗ್ ರಾಜ್ ಅವರು ನಿರ್ದೇಶಿಸಿದ್ದರು. ಎಸ್.ರಾಮನಾಥನ್ ನಿರ್ಮೀಶಿದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಮಾಧವಿ, ಪೂನಮ್ ದಿಲ್ಲೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಮಿತಾಭ್ ಸ್ನೇಹಿತನಾಗಿ ರಜನೀಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿದೇಶದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕ ಚಿತ್ರಗಳಲ್ಲೊಂದು. 

Latest Videos

click me!