ನಾವು ಯಾರನ್ನೂ ತಬ್ಕೊಳಲ್ಲ ಇನ್ನು ಕಿಸ್...; ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್‌ ವರ್ತನೆಗೆ ರಾಮಾಯಣದ ಸೀತೆ ಗರಂ

Published : Jun 10, 2023, 03:56 PM IST
ನಾವು ಯಾರನ್ನೂ ತಬ್ಕೊಳಲ್ಲ ಇನ್ನು ಕಿಸ್...; ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್‌ ವರ್ತನೆಗೆ ರಾಮಾಯಣದ ಸೀತೆ ಗರಂ

ಸಾರಾಂಶ

ನಾವು ಯಾರನ್ನೂ ತಬ್ಕೊಳಲ್ಲ ಇನ್ನು ಕಿಸ್ ಮಾಡುವುದು ದೂರ ಮಾತು ಎಂದು ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್‌ ವರ್ತನೆಗೆ ರಾಮಾಯಣ ಧಾರಾವಾಹಿಯ ಸೀತೆ ದೀಪಿಕಾ ಗರಂ ಆಗಿದ್ದಾರೆ.    

ತಿರುಪತಿ ದೇವಸ್ಥಾನದ ಆವರಣದಲ್ಲಿ ನಟಿ ಕೃತಿ ಸನೊನ್‌ನ ತಬ್ಬಿ ಕಿಸ್ ಮಾಡಿದ ನಿರ್ದೇಶಕ ಓಂ ರಾವುತ್ ವರ್ತನೆಗೆ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಸೀತೆಯ ಪಾತ್ರ ಮಾಡಿದ್ದ ನಟಿ ದೀಪಿಕಾ ಚಿಖ್ಲಿಯಾ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಕಲಾವಿದರನ್ನು ದೇವರಂತೆ ಕಾಣುತ್ತಾರೆ ಹೀಗಿರುವಾಗ ನಾವು ಹಗ್ ಕೂಡ ಮಾಡಲ್ಲ ಇನ್ನೂ ಕಿಸ್ ಮಾಡುವುದು ದೂರ ಮಾತು' ಎಂದು ಹೇಳಿದ್ದಾರೆ. 

ಆಜ್ ತಕ್‌ ವಾಹಿನಿ ಜೊತೆ ಮಾತನಾಡಿದ ನಟಿ ದೀಪಿಕಾ 'ಕೃತಿ ಇಂದಿನ ಪೀಳಿಗೆಯ ನಟಿ ಮತ್ತು ಇಂದಿನ ಕಾಲದಲ್ಲಿ ಕಿಸ್ಸಿಂಗ್ ಮತ್ತು ತಬ್ಬಿಕೊಳ್ಳುವುದನ್ನು ಉತ್ತಮ ವರ್ತನೆಯಂತೆ ನೋಡಲಾಗುತ್ತದೆ. ಅವರು ತನ್ನನ್ನು ಸೀತೆ ಎಂದು ಎಂದಿಗೂ ಭಾವಿಸಲಿಲ್ಲ. ಈ ಪಾತ್ರವನ್ನು ನಿರ್ವಹಿಸುವಾಗ ತಾನು ಸೀತೆಯಾಗಿ ಬದುಕಿದ್ದೆ ಆದರೆ ಇಂದಿನ ನಟರು ಅದನ್ನೊಂದು ಪಾತ್ರ ಎಂದು ಭಾವಿಸುತ್ತಾರೆ. ಚಿತ್ರ ಮುಗಿದ ನಂತರ ಅವರು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ದೀಪಿಕಾ ಹೇಳಿದ್ದಾರೆ. .

1980ರ ದಶಕದಲ್ಲಿ ರಾಮಾಯಣ ಪ್ರಸಾರವಾಗುತ್ತಿದ್ದಾಗ ಯಾರೂ ನಟರನ್ನು ಅವರ ಹೆಸರಿನಿಂದ ಕರೆಯುತ್ತಿರಲಿಲ್ಲ ಎಂದು ದೀಪಿಕಾ ನೆನಪಿಸಿಕೊಂಡರು. 'ಸೆಟ್‌ನಲ್ಲಿ ನಾವು ಪಾತ್ರ ಮಾಡುವಾಗ, ಜನರು ಬಂದು ನಮ್ಮ ಪಾದಗಳನ್ನು ಮುಟ್ಟುತ್ತಿದ್ದರು. ಅದು ಬೇರೆ ಕಾಲವಾಗಿತ್ತು. ಜನರು ನಮ್ಮನ್ನು ನಟರೆಂದು ಭಾವಿಸಲಿಲ್ಲ, ಅವರು ನಮ್ಮನ್ನು ದೇವರಂತೆ ಭಾವಿಸುತ್ತಾರೆ. ನಾವು ಯಾರನ್ನೂ ತಬ್ಬಿಕೊಳ್ಳಲು ಸಾಧ್ಯವಿಲ್ಲ, ಕಿಸ್ ಮಾಡುವುಜ ದೂರದ ಮಾತಾಗಿದೆ. ಆದಿಪುರುಷ ಬಿಡುಗಡೆಯ ನಂತರ, ನಟರು ತಮ್ಮ ಮುಂದಿನ ಯೋಜನೆಯಲ್ಲಿ ನಿರತರಾಗುತ್ತಾರೆ ಮತ್ತು ಅವರ ಪಾತ್ರಗಳನ್ನು ಮರೆತುಬಿಡುತ್ತಾರೆ ಆದರೆ ಇದು ನಮ್ಮೊಂದಿಗೆ ಎಂದಿಗೂ ಸಂಭವಿಸಲಿಲ್ಲ' ಎಂದು ಹೇಳಿದ್ದಾರೆ.  ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸಗಳನ್ನು ನಾವು ಮಾಡಿಲ್ಲ ಎಂದಿದ್ದಾರೆ.  

ತಿರುಪತಿ ದೇವಸ್ಥಾನದಲ್ಲೇ ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್: ಭಕ್ತರ ಕೆಂಗಣ್ಣಿಗೆ ಗುರಿಯಾದ ಇಬ್ಬರ ವರ್ತನೆ

ಇತ್ತೀಚೆಗಷ್ಟೆ ಆದಿಪುರುಷ್ ಸಿನಿಮಾತಂಡ ತಿರುಪತಿಯಲ್ಲಿ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಬಳಿಕ ಚಿತ್ರತಂಡ ತಿಮ್ಮಪ್ಪನ ದರ್ಶನಕ್ಕೆ ತೆರಳಿತ್ತು. ತಿಮ್ಮಪ್ಪನ ದರ್ಶನ ಮುಗಿಸಿ ಹೊರಬರುತ್ತಿದ್ದಂತೆ ನಿರ್ದೇಶಕ ಓಂ ರಾವುತ್ ಕೃತಿ ಸನೊನ್ ತಬ್ಬಿ ಹಗ್ ಮಾಡಿ ಕೆನ್ನೆಗ ಮುತ್ತಿಟ್ಟರು. ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟು ಶುಭ ಹಾರೈಸಿದರು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಕೂಡ ನಡೆಯುತ್ತಿದೆ. 

ಶಂಕರ್ ನಾಗ್ ಜೊತೆ ಡುಯೆಟ್ ಹಾಡಿದ ನಟಿ…. ರಾಮಾಯಣದ ಸೀತೆ ಈವಾಗ ಏನು ಮಾಡ್ತಿದ್ದಾರೆ?

ಆದಿಪುರುಷ್ ಬಗ್ಗೆ

ಆದಿಪುರುಷ್ ವಿಶ್ವದಾದ್ಯಂತ 3ಡಿಯಲ್ಲಿ ರಿಲೀಸ್ ಆಗುತ್ತಿದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿರುವ ಆದಿಪುರುಷ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?