ಹೆಣ್ಣುಬಾಕ-ಮಾದಕ ವ್ಯಸನಿ ರಾಮ, ಸೆಲ್ಫ್‌ಮೇಡ್ ಸ್ಟಾರ್‌ ರಾವಣ, ಇದೆಂತ ಕಲಿಯುಗ? ರಣಬೀರ್ ತೆಗಳಿ ಯಶ್ ಹೊಗಳಿದ ಕಂಗನಾ

Published : Jun 10, 2023, 06:00 PM IST
ಹೆಣ್ಣುಬಾಕ-ಮಾದಕ ವ್ಯಸನಿ ರಾಮ, ಸೆಲ್ಫ್‌ಮೇಡ್ ಸ್ಟಾರ್‌ ರಾವಣ, ಇದೆಂತ ಕಲಿಯುಗ? ರಣಬೀರ್ ತೆಗಳಿ ಯಶ್ ಹೊಗಳಿದ ಕಂಗನಾ

ಸಾರಾಂಶ

ಹೆಣ್ಣುಬಾಕ-ಮಾದಕ ವ್ಯಸನಿಗೆ ರಾಮನ ಪಾತ್ರ, ಸೆಲ್ಫ್‌ಮೇಡ್ ಸ್ಟಾರ್‌‌ಗೆ ರಾವಣ ಪಾತ್ರ, ಇದೆಂತಾ ಕಲಿಯುಗ ಎಂದು ನಟಿ ಕಂಗನಾ ರಣಬೀರ್ ತೆಗಳಿ ಯಶ್ ಹೊಗಳಿದ್ದಾರೆ.  

ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ರಾಮಾಯಣ ಸಿನಿಮಾ ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿದೆ. ಪಾತ್ರಗಳ ಆಯ್ಕೆ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿರುವ ರಾಮಾಯಾಣ ಬಗ್ಗೆ ಚರ್ಚೆಯಾಗುತ್ತಿದೆ. ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ, ಸೀತೆಯಾಗಿ ಅಲಿಯಾ ಭಟ್ ಮಿಂಚುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರು ಕಂಗನಾ, ರಣಬೀರ್ ಕಪೂರ್ ಅವರನ್ನು ಬಿಳಿ ಇಲಿ ಎಂದು ಜರಿದಿದ್ದಾರೆ. ಪಾತ್ರಗಳ ಆಯ್ಕೆಯನ್ನು ಕಂಗನಾ ಟೀಕಿಸಿದ್ದಾರೆ.  

ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿರುವ ನಟಿ, 'ಇತ್ತೀಚೆಗೆ ನಾನು ರಾಮಾಯಣದ ಬಗ್ಗೆ ಸುದ್ದಿಯನ್ನು ಕೇಳುತ್ತಿದ್ದೇನೆ. ಅಲ್ಲಿ ನಟ ಎನಿಸಿಕೊಂಡಿರುವ ಸ್ವಲ್ಪ ಸನ್ ಟ್ಯಾನ್ ಮತ್ತು ಆತ್ಮಸಾಕ್ಷಿಯ ಅಗತ್ಯವಿರುವ ಒಂದು ತೆಳ್ಳಗಿನ ಬಿಳಿ ಇಲಿ ಅವರು ಬಹುತೇಕ ಎಲ್ಲರ ಬಗ್ಗೆ ಅಸಹ್ಯಕರವಾದ PR ಮಾಡುವುದರಲ್ಲಿ ಕುಖ್ಯಾತರಾಗಿದ್ದಾರೆ. ಹೆಣ್ಣುಬಾಕ, ಮಾದಕ ವ್ಯಸನಕ್ಕೆ ಹೆಸರುವಾಸಿಯಾದ ಈತ ಟ್ರೈಲಾಜಿಯಲ್ಲಿ ತನ್ನನ್ನು ತಾನು ಶಿವ ಎಂದು ಸಾಬೀತುಪಡಿಸಲು ಹತಾಶವಾಗಿ (ಯಾರೂ ಬ್ರಹ್ಮಾಸ್ತ್ರ  ವೀಕ್ಷಿಸದ ಅಥವಾ ಹೆಚ್ಚಿನ ಭಾಗಗಳನ್ನು ಮಾಡಲು ಬಯಸುತ್ತಿಲ್ಲ) ಈಗ ಭಗವಾನ್ ರಾಮನಾಗಲು ಬೆಳೆದು ನಿಂತಿದ್ದಾರೆ' ಎಂದು ಹೇಳಿದ್ದಾರೆ. 

'ಸೆಲ್ಫ್ ಮೇಡ್ ಎನಿಸಿಕೊಂಡಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್, ನಿಷ್ಠಾವಂತ ಕುಟುಂಬ ಹಾಗೂ ಸಂಪ್ರದಾಯವಾದಿಯಾಗಿರುವ, ವಾಲ್ಮೀಕಿ ಜಿ ವಿವರಣೆಯ ಪ್ರಕಾರ ಅವರು ತಮ್ಮ ಮೈಬಣ್ಣ, ನಡವಳಿಕೆ ಮತ್ತು ಮುಖದ ವೈಶಿಷ್ಟ್ಯಗಳಲ್ಲಿ ಶ್ರೀರಾಮನಂತೆಯೇ ಕಾಣುತ್ತಾರೆ. ಆದರೆ ಅವರಿಗೆ ರಾವಣನ ಪಾತ್ರವನ್ನು ನೀಡಲಾಗುತ್ತದೆಯಂತೆ. ಇದು ಯಾವ ರೀತಿಯ ಕಲಿಯುಗ? ತೆಳ್ಳಗೆ ಇರುವ, ಮಾದಕವಸ್ತು ಸೋಯಾ ಹುಡುಗನು ಭಗವಾನ್ ರಾಮನ ಪಾತ್ರ ಮಾಡಬಾರದು. ಜೈ ಶ್ರೀ ರಾಮ್' ಎಂದು ಕಂಗನಾ ಹೇಳಿದ್ದಾರೆ. 

ಮತ್ತೊಂದು ಪೋಸ್ಟ್‌ನಲ್ಲಿ ಕಂಗನಾ, 'ನೀನು ಒಮ್ಮೆ ಹೊಡೆದರೆ ಸಾಯುವ ತನಕ ಹೊಡೆಯುತ್ತೇನೆ. ನನ್ನೊಂದಿಗೆ ಗಲಾಟೆ ಮಾಡಬೇಡ ದೂರ ಇರು' ಎಂದು ಎಚ್ಚರಿಕೆ ನೀಡಿದ್ದಾರೆ. 

ಬಾಲಿವುಡ್’ನಲ್ಲಿ ಮತ್ತೊಂದು ರಾಮಾಯಣ: ರಾವಣನಾಗಿ ರಾಕಿಂಗ್ ಸ್ಟಾರ್?

ಯಶ್ ರಾಮನಾಗ್ಲಿ ಎಂದ ಕಂಗನಾ 

ಅಂದಹಾಗೆ ಕಂಗನಾ ರಾಮ ಪಾತ್ರ ಮಾಡಲಿ ಎಂದು ಕೆಜಿಎಫ್ ಸ್ಟಾರ್ ಯಶ್‌ಗೆ ಹೇಳಿದ್ದಾರೆ. ಯಾಕೆಂದರೆ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣ ಪಾತ್ರ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹಾಗಾಗಿ ರಾವಣ ಪಾತ್ರಕ್ಕಿಂತ ರಾಮನ ಪಾತ್ರಕ್ಕೆ ಸೂಟ್ ಆಗ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ಹೆಸರನ್ನು ಎಲ್ಲಿಯೂ ಸೂಚಿಸದೆ ಪರೋಕ್ಷವಾಗಿ ಹೇಳಿದ್ದಾರೆ ಕಂಗನಾ.

 ಯಶ್ ರಾವಣ ಆದ್ರೆ ರಾಮನಾಗ್ತಾರಾ ರಣಬೀರ್? ಬಹುಕೋಟಿ ವೆಚ್ಚದ 'ರಾಮಾಯಣ' ಬಗ್ಗೆ ಮೌನ ಮುರಿದ ಬಾಲಿವುಡ್ ಸ್ಟಾರ್

ವೈರಲ್ ಆಗಿರುವ ರಾಮಾಯಣ ಸ್ಟಾರ್‌ಕಾಸ್ಟ್ 

ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ. ನಿತೀಶ್ ತಿವಾರಿ ನಿರ್ದೇಶನದ ಮದು ಮಂಟೆನಾ ನಿರ್ಮಾಣದ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದಾರೆ. ಈಗಾಗಲೇ ರಣಬೀರ್ ಲುಕ್ ಟೆಸ್ಟ್‌ನಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ರಾವಣನ ಪಾತ್ರಕ್ಕಾಗಿ ಯಶ್ ಶೀಘ್ರದಲ್ಲೇ ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.  ಈ ವರ್ಷದ ದೀಪಾವಳಿಯಂದು ಚಿತ್ರದ ಅಧಿಕೃತ ಘೋಷಣೆ ಬರುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?