ಸಮಂತಾಳನ್ನು ಇನ್ನು ಹೆಚ್ಚು ಸ್ಟ್ರಾಂಗ್ ಆಗಿ ನೋಡಬೇಕು ಎಂದು ಆಸೆ ಪಟ್ಟ ರಾಮ್ ಚರಣ್. ನಾಗ ಚೈತನ್ಯ ಫ್ಯಾನ್ಸ್‌ನಿಂದ ಟೀಕೆಗೆ ಗುರಿಯಾಗಿರುವ ಸಮಂತಾ ಬೆನ್ನಿಗೆ ತೆಲಗು ನಟರಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಿಂತಿದ್ದಾರೆ. ನಟಿಯ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತಿದ್ದಾರೆ.
ಇಡೀ ಭಾರತೀಯ ಚಿತ್ರರಂಗವೇ ಆರ್‌ಆರ್‌ಆರ್ (RRR) ಸಿನಿಮಾ ವೀಕ್ಷಿಸಲು ತುದಿಗಾಲಲ್ಲಿ ನಿಂತಿದೆ. ಜನವರಿ 7ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಇಡೀ ತಂಡವೇ ಬ್ಯುಸಿಯಾಗಿದೆ. ಈ ವೇಳೆ ಖಾಸಗಿ ಸಂದರ್ಶನವೊಂದರಲ್ಲಿ ಸಮಂತಾರ ಬಗ್ಗೆ ರಾಮ್ ಚರಣ್‌ಗೆ (Ram Charan) ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಏನದು ಪ್ರಶ್ನೆ? ರಾಮ್ ಏನು ಉತ್ತರ ಕೊಟ್ಟರು ಅದಕ್ಕೆ ಹೇಗೆ ರಿಯಾಕ್ಟ್ ಮಾಡಿದ್ದರು ಗೊತ್ತಾ?
ಆರ್‌ಆರ್‌ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ (Jr NTR) ಅಭಿನಯಿಸಿದ್ದಾರೆ. ಎಸ್‌ಎಸ್ ರಾಜಮೌಳಿ (SS Rajamouli) ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಪೋಸ್ಟರ್, ಟ್ರೈಲರ್ ಮತ್ತು ಹಾಡುಗಳು ಸಖತ್ ವೈರಲ್ ಆಗಿವೆ. ಹೀಗಾಗಿ ಸದ್ಯಕ್ಕೆ ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ನಟ ಅಂದ್ರೆ ಇವರೇ. ಅದರಲ್ಲೂ ಆಲಿಯಾ ಭಟ್ (Alia Bhatt) ನಟಿಸಿರುವುದರಿಂದ ಚಿತ್ರಕ್ಕಿರುವ ಹವಾನೇ ಬೇರೆ.
Samantha Gym Look: ಸಮೋಸ ತಿನ್ನೋ ಆಸೆಗೆ ಭಾರ ಎತ್ತುತ್ತಾರೆ ಸಮಂತಾundefined
ಈ ವೇಳೆ ಬಾಲಿವುಡ್ ಖಾಸಗಿ ಸಂದರ್ಶನಲ್ಲಿ ರಾಮ್ ಚರಣ್ ಜೊತೆ Rapid Fire ಗೇಮ್ ಆಟವಾಡಿಸಿದ್ದಾರೆ ನಿರೂಪಕರೊಬ್ಬರು. ಈ ಗೇಮ್‌ನಲ್ಲಿ ನಟಿಯರ ಹೆಸರು ಹೇಳುತ್ತಾರೆ. ಆಗ ಅವರಿಗೆ ಒಂದು ಸಲಹೆ ಅಥವಾ ಕಾಂಪ್ಲಿಮೆಂಟ್ ನೀಡಬೇಕು. ಸಮಂತಾ ಹೆಸರು ಹೇಳಿದ್ದಾರೆ. 'ನೀವು ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಬೇಕು,' ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಮರು ಹಂಚಿಕೊಂಡ ಸಮಂತಾ ಮೂರು ಹೃದಯಗಳ ಎಮೋಜಿ ಹಾಕಿ, ಪರೋಕ್ಷವಾಗಿ ಥ್ಯಾಂಕ್ಸ್ ಎಂದಿದ್ದಾರೆ.
ನಾಗ ಚೈತನ್ಯ (Naga Chaitanya) ಜೊತೆ ವಿಚ್ಛೇದನ ಪಡೆದುಕೊಂಡ ನಂತರ ಸಮಂತಾಳನ್ನು ಜನರು ನೀಡುವ ರೀತಿಯೇ ಬದಲಾಗಿದೆ. ಒಂಟಿ ಮಹಿಳೆ ಎಂದು ಕೆಲವರಿಗೆ ಕನಿಕರ ಇದೆ. ಹಣ ಇದೆ ಎಲ್ಲಾ ಇದೆ ,ಯಾಕೆ ಭಯ ಎನ್ನೋದು ಇನ್ನು ಕೆಲವರ ಅಭಿಪ್ರಾಯ. ಕೆಲವು ದಿನಗಳ ಹಿಂದೆ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರದಲ್ಲಿ ಊ ಅಂಟಾವ ಮಾವ ಊಹು ಅಂಟಾವ ಹಾಡಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಸಮಂತಾ. ಈ ಹಾಡಿನ ಚಿತ್ರೀಕರಣ ನಡೆದದ್ದು ಸಮಂತಾ ಡಿಪೋರ್ಸ್ ಕೇಸ್ (Divorce Case) ನಡೆಯುತ್ತಿದ್ದ ಸಮಯದಲ್ಲಿಯೇ ಎಂದು ಕೆಲವರು ಹೇಳುತ್ತಾರೆ.
Allu Arjun Thanks Samantha: ಸಮಂತಾ ನಂಬಿಕೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಅಲ್ಲುಹಾಡು ವೈರಲ್ ಆಗಿ ಸಮಂತಾ ಜನಪ್ರಿಯತೆ ಗಳಿಸುತ್ತಿದ್ದಂತೆ, ನಾಗ ಚೈತನ್ಯ ಅಭಿಮಾನಿಗಳು ಸಣ್ಣ ಪುಟ್ಟ ಕಾರಣಗಳನ್ನು ಹುಡುಕಿಕೊಂಡು ಟ್ರೋಲ್ (Troll) ಮಾಡಲು ಶುರು ಮಾಡಿದ್ದಾರೆ. ಸುಖಾ ಸುಮ್ಮನೆ ಸಮಂತಾ ಕಾಲು ಎಳೆಯುತ್ತಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ಯಾಮ್ ವರ್ಕೌಟ್ ಮತ್ತು ಫ್ಯಾಮಿಲಿ ಎಂದು ಬ್ಯುಸಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಎರಡು ಮುದ್ದು ನಾಯಿಗಳ ಜೊತೆ ಫೋಟೋ ಹಂಚಿಕೊಂಡು, ಇದುವರೆಗೂ ಪ್ರಯತ್ನ ಪಡದ ವರ್ಕೌಟ್‌ಗಳನ್ನು ಕಲಿಯುತ್ತಿದ್ದಾರೆ. ಬಂದ ಕಷ್ಟಗಳನ್ನು ಎದುರಿಸಲು ನಾನು ರೆಡಿ ಎಂದು ನಿಂತಿರುವ ಸ್ಯಾಮ್ ನಿಜಕ್ಕೂ ಗಟ್ಟಿಗಿತ್ತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವಿಚ್ಛೇದನ ಮುನ್ನವೂ ಸಮಂತಾ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೀಗ ಅವರ ರಕ್ಷಣೆಗೆ ಇನ್ನೂ ಹಲವರು ಮುಂದಾಗಿದ್ದಾರೆ. ಬಂಧ ಗಟ್ಟಿಯಾಗಿದೆ ಎಂದರೆ ತಪ್ಪಾಗದು. 'ಪುಷ್ಪ ಚಿತ್ರದ ಹಾಟ್ ಸಾಂಗ್‌ನಲ್ಲಿ ನಟಿಸುವುದಕ್ಕೆ ಸಮಂತಾಗೆ ತುಂಬಾ ಗೊಂದಲ ಇತ್ತು, ಹೇಗಪ್ಪಾ ಎಂದು ಚಿಂತಿಸುತ್ತಿದ್ದರು. ಆದರೆ ಸಿನಿಮಾ ತಂಡದ ಮೇಲೆ ನಂಬಿಕೆ ಇಟ್ಟು ಒಪ್ಪಿಕೊಂಡ,ರು' ಎಂದು ಅಲ್ಲು ಅರ್ಜುನ್ ಹೇಳಿದ್ದರು. ಈ ವಿಡಿಯೋ ಹಂಚಿಕೊಂಡ ಸ್ಯಾಮ್ ಇನ್ನು ಮುಂದೆ ನಿಮ್ಮನ್ನು ನಾನು ನಂಬುತ್ತೇನೆ ಎಂದು ಬರೆದುಕೊಂಡಿದ್ದರು.
anna about Sam ❤🙂pic.twitter.com/yvJKcOllT1
— A RRR C (@arc_charan)