
ವಿಜಯ್ ಗಲಾನಿ ಅವರ ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಆಘಾತವನ್ನುಂಟು ಮಾಡಿದೆ. ಸಲ್ಮಾನ್ ಖಾನ್ ಅಭಿನಯದ 2010 ರ ವೀರ್ ಸಿನಿಮಾವನ್ನು ನಿರ್ಮಿಸಿದ್ದ ಗಲಾನಿ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಡಿಸೆಂಬರ್ 29 ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಗಿಲಾನಿ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಕೆಲವು ತಿಂಗಳ ಹಿಂದೆ ಅವರು ಕುಟುಂಬ ಸಮೇತರಾಗಿ ಲಂಡನ್‌ಗೆ ತೆರಳಿದ್ದರು. ಟ್ವಿಟರ್‌ನಲ್ಲಿ, ಚಲನಚಿತ್ರ ವ್ಯಾಪಾರ ವಿಶ್ಲೇಷಕ ಅತುಲ್ ಮೋಹನ್ ಸಂತಾಪ ವ್ಯಕ್ತಪಡಿಸಿ, ಪದಗಳಿಗೆ ಮೀರಿದ ಆಘಾತವಾಗಿದೆ... ವಿಜಯ್ ಜಿ, ನಿಮ್ಮನ್ನು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇವೆ. #VijayGalani ಎಂದು ಬರೆದಿದ್ದಾರೆ.
ವಿಜಯ್ ನಿರ್ದೇಶಕರಾಗಿದ್ದ ಭಾರತೀಯ ಚಲನಚಿತ್ರ ಟಿವಿ ನಿರ್ಮಾಪಕರ ಮಂಡಳಿ ಅವರ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದೆ. ನಮ್ಮ ಪ್ರೀತಿಯ ಐಎಫ್‌ಟಿಪಿಸಿ ನಿರ್ದೇಶಕ ಮತ್ತು ಭಾರತೀಯ ಚಲನಚಿತ್ರ ನಿರ್ಮಾಪಕ ವಿಜಯ್ ಗಲಾನಿ ನಿಧನದ ದುಃಖದ ಸುದ್ದಿ. ನೀವು ಯಾವಾಗಲೂ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತಿದ್ದೀರಿ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ, RIP. ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಎಂದು ಬರೆಯಲಾಗಿದೆ.
ರಾಜಮೌಳಿ ಸಿನಿಮಾದ 1 ದಿನದ ಶೂಟ್ ಖರ್ಚು 75 ಲಕ್ಷ
ಹಲವಾರು ವರದಿಗಳ ಪ್ರಕಾರ, 50 ರ ಹರೆಯದ ವಿಜಯ್ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಯುಕೆಗೆ ತೆರಳಿದ್ದರು ಎಂದು ವರದಿಯಾಗಿದೆ. ಅವರ ಸಾವಿನ ಸುದ್ದಿ ಅವರ ಕುಟುಂಬದವರು ಮತ್ತು ಆತ್ಮೀಯರಿಗೆ ಆಘಾತ ಉಂಟುಮಾಡಿದೆ, ವಿಜಯ್ ಅವರ ಕೊನೆಯ ನಿರ್ಮಾಣ ಮಹೇಶ್ ಮಂಜ್ರೇಕರ್ ನಿರ್ದೇಶನದ ದಿ ಪವರ್. ಇದರಲ್ಲಿ ವಿದ್ಯುತ್ ಕಮ್ವಾಲ್ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.