
ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ ಬೀಮ್ಲಾ ನಾಯಕ ಚಿತ್ರ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ರಾಣಾ ದಗ್ಗುಬಾಟಿ ಕೂಡ ನಟಿಸಿದ್ದು, ಹೈಲೈಟ್ ಪೂರ್ತಿ ಪವನ್ ಮೇಲಿದೆ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಒಂದು ಮಟ್ಟಕ್ಕೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾಗೆ ಆಂಧ್ರ ಸರ್ಕಾರ ತೊಂದರೆ ಕೊಡುತ್ತಿದೆ ಎನ್ನಲಾಗಿದೆ.
ಹೌದು! ಆಂಧ್ರದಲ್ಲಿ ಎಲ್ಲೆಡೆ ಪವನ್ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರದ ಮೇಲೆ ಸರ್ಕಾರಿ ಅಧಿಕಾರಿಗಳು ದಾಳಿ ಮಾಡಿ ಪ್ರದರ್ಶನ ರದ್ದು ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಮುಖ್ಯಮಂತ್ರಿ ಜಗನ್ ಎನ್ನುವ ಆರೋಪ ಕೇಳಿ ಬರುತ್ತಿದೆ.
ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನಡುವೆ ಇರುವ ವೈ ಮನಸ್ಸು ಎಲ್ಲರಿಗೂ ಗೊತ್ತಿದೆ. ಕ್ಯಾಮೆರಾ ಮುಂದೆ ಒಬ್ಬರಿಗೊಬ್ಬರು ಬೈಕೊಂಡು ಓಡಾಡುತ್ತಾರೆ. ಆದರೆ ಅಷ್ಟೇ ಕ್ರಿಮಿನಲ್ ಆಗಿಯೂ ಪರೋಕ್ಷವಾಗಿ ತಮ್ಮ ಚೇಲಾಗಳಿಂದ ಕೆಲಸ ಮಾಡುತ್ತಿಸುತ್ತಿದ್ದಾರೆ ಎನ್ನುವುದು ಕಹಿ ಸತ್ಯ. ಹೀಗಾಗಿ ಪವನ್ ತುಂಬಾ ಪ್ರೀತಿಯಿಂದ ಮಾಡಿದ ಸಿನಿಮಾಗೆ ಈಗ ಜಗನ್ ಕಡೆಯವರು ತೊಂದರೆ ಕೊಡುವುದಕ್ಕೆ ಶುರು ಮಾಡಿದ್ದಾರೆ.
ಆಂಧ್ರದಲ್ಲಿ ಪ್ರದರ್ಶನ ಕಾಣುತ್ತಿರುವ ಭೀಮ್ಲಾ ನಾಯಕ್ ಸಿನಿಮಾಗೆ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಕೊಡುತ್ತಿದ್ದಾರೆ. ಆದರೆ ತೆಲಂಗಾಣದಲ್ಲಿ ಟಿಆರ್‌ಎಸ್ ಸಂಪೂಣ ಬೆಂಬಲ ನೀಡುತ್ತಿದೆ. ಇದು ಪವನ್‌ಗೆ ಸಿಕ್ಕಿರುವ ದೊಡ್ಡ advantage ಎನ್ನಬಹುದು. ಇದು ರಾಜಕೀಯ ಷಡ್ಯಂತ್ರ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.
ಕೆಸಿಆರ್ ಮತ್ತು ಅವರ ಪುತ್ರ ಕೆಟಿಆರ್ ಇಬ್ಬರೂ ಪವನ್ ಕಲ್ಯಾಣ್ ಜೊತೆ ಹಲವು ವರ್ಷಗಳಿಂದ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ತೆಲಂಗಾಣಕ್ಕೆ ಪವನ್ ಎಂಟ್ರಿ ಕೊಟ್ಟರೆ, ತಪ್ಪದೇ ಕೆಸಿಆರ್ ನಿವಾಸಕ್ಕೆ ಭೇಟಿ ನೀಡುತ್ತಾರೆ. ಈ ಆತ್ಮೀಯತೆಯಿಂದ ತೆಲಂಗಾಣದಲ್ಲಿ ಭೀಮ್ಲಾ ನಾಯಕ್ ಸಿನಿಮಾ ದಿನಕ್ಕೆ 5 ಪ್ರದರ್ಶನ ಕಾಣಲು ಅವಕಾಶ ನೀಡಿದ್ದಾರೆ. ಟಿಕೆಟ್ ದರವೂ ವೀಕ್ಷಕರಿಗೆ ಮೆಚ್ಚುವಂತಿದೆ ಎನ್ನಲಾಗಿದೆ.
ಭೀಮ್ಲಾ ನಾಯಕ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ (Pre-Release Programme) ಕೆಟಿಆರ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಟ್ರೈಲರ್ (Trailer) ಮತ್ತು ಹಾಡುಗಳನ್ನು ನೋಡಿ ಪವನ್ ನಟನಾ ಸಾಮರ್ಥ್ಯವನ್ನು ಹೊಗಳಿದ್ದರು. ರಾಜಕೀಯವಾಗಿ ನೋಡಿoರೆ ಪವನ್‌ಗೆ ತೆಲಂಗಾಣದ ಬಗ್ಗೆ ಆಸಕ್ತಿ ಇಲ್ಲ. ಆದರೆ ಇವರ ಆತ್ಮೀಯತೆನೇ ಆಗಾಗ ಜಗನ್ ಜೊತೆ ಕಿತ್ತಾಡುವಂತೆ ಮಾಡುತ್ತಿದೆ, ಎನ್ನಲಾಗಿದೆ.
ಈ ಹಿಂದೆ ಪವನ್ ನಟಿಸಿದ್ದ ವಕೀಲd ಸಾಬ್ ಚಿತ್ರ ಬಿಡುಗಡೆ ಸಮಯದಲ್ಲಿಯೂ ಹೀಗೆ ಆಗಿತ್ತು. ಆಗ ರಾಜಕೀಯ ಮಾತ್ರವಲ್ಲ ಚಿತ್ರರಂಗದಿಂದ ಅನೇಕರು ಸಾಥ್ ಕೊಟ್ಟಿದ್ದರು, ಎಂದೂ ಜಗನ್ ಟೀಕಿಸಿದ್ದರು.
ಭೀಮ್ಲಾ ನಾಯಕ್ ಚಿತ್ರ ತಂಡಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರಣೆ ಟ್ವೀಟ್ ಮಾಡಿದ್ದಾರೆ. 'ರಾಜ್ಯದಲ್ಲಿ ಯಾವ ಸಂಸ್ಥೆಯನ್ನೂ, ರಂಗವನ್ನೂ ಉಳಿಯಲು ಬಿಡುವಂತೆ ಕಾಣುತ್ತಿಲ್ಲ ಸಿಎಂ ಜಗನ್ ಮೋಹನ್ ರೆಡ್ಡಿ. ಸಿನಿಮಾ ರಂಗವನ್ನು ತೀವ್ರವಾಗಿ ಬಾಧಿಸುತ್ತಿದ್ದಾರೆ. ಭೀಮ್ಲಾ ನಾಯಕ್ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಜಗನ್ ನಡೆದುಕೊಳ್ಳುತ್ತಿರುವ ರೀತಿಯ ಉಗ್ರವಾದಿತನ ತೋರುತ್ತದೆ. ವ್ಯಕ್ತಿಗಳ ಮೇಲಿನ ಖಾಸಗಿ ದ್ವೇಷದಿಂದ ಒಂದು ವ್ಯವಸ್ಥೆಯನ್ನೇ ನಾಶ ಮಾಡಲು ಮಾಡುತ್ತಿರುವ ಈ ಪ್ರಯತ್ನವನ್ನು ನಾನು ಖಂಡಿಸುತ್ತೇನೆ. ತೆಲುಗು ರಂಗ ವಿಶ್ವಾದಾದ್ಯಂತ ಹೆಸರು ಮಾಡಿದೆ. ಅದನ್ನು ತುಳಿಯಲು ಮೂರ್ಖ ಪ್ರಯತ್ನ ಜಗನ್ ಕೈ ಬಿಡಬೇಕು' ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.