
ಬಾಲಿವುಡ್ ಡೀವಾ, ಏಷ್ಯಾ ಸಿರಿವಂತ ನಟಿ, ಹಾಲಿವುಡ್ ಗಾಯಕನ ಕೈ ಹಿಡಿದಿರುವ ಸುಂದರಿ ಪ್ರಿಯಾಂಕಾ ಚೋಪ್ರಾ ಜನವರಿ 22 ರಂದು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡರು. ಮಲತಾಯಿ ಮೂಲಕ ಮಗು ಪಡೆದುಕೊಂಡಿರುವ ನಟಿ ಎಂದು ಬಹಳಷ್ಟು ಟೀಕೆಗಳು ಕೇಳಿ ಬಂದರೂ ಕೂಡ ಯಾವುದಕ್ಕೂ ಕೇರ್ ಮಾಡದೆ ಮದರ್‌ವುಡ್ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಮೊಬೈಲ್‌ನಲ್ಲಿ ಹಾಗೆ ಸುಮ್ಮನೆ ಕ್ಲಿಕ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗದಿಂದ ಬಿಗ್ ಬ್ರೇಕ್ ತೆಗೆದುಕೊಂಡಿರುವ ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಮಗು ಮತ್ತು ಪತಿ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಮೂವರ ಜೊತೆ ಮನೆಯಲ್ಲಿ ಎರಡು ನಾಯಿ ಮರಿಗಳು ಕೂಡ ಇವೆ. ಜೀವನದ ಸಣ್ಣ ಪುಟ್ಟ ವಿಚಾರಗಳನ್ನು ಎಂಜಾಯ್ ಮಾಡುತ್ತಿರುವ ಪ್ರಿಯಾಂಕಾ ತಮ್ಮ ಮನೆಯಲ್ಲಿ ಕ್ಲಿಕ್ ಮಾಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
'ಫೋಟೋ ಡಂಪ್' ಎಂದು ಬರೆದುಕೊಂಡಿರುವ ನಟಿ ಮೊದಲು ಕೆಂಪು ಬಣ್ಣದ ಟೀ-ಶರ್ಟ್ ಧರಿಸಿ ಹಾಡು ಕೇಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಎರಡನೇ ಫೋಟೋದಲ್ಲಿ ಕಾವಿಯಾರ್ ಫ್ರೈಸ್ ಇದೆ. ಮೂರನೇ ಫೋಟೋದಲ್ಲಿ ಪತಿ ನಿಕ್ ಜೊತೆಗೊಂದು ಸೆಲ್ಫಿ, ನಾಲ್ಕನೇ ಫೋಟೋದಲ್ಲಿ ಹಳದಿ ಬಣ್ಣ ಪ್ರಿಂಟ್ ಡ್ರೆಸ್ ಮತ್ತು ಶೇಡ್ಸ್ ಧರಿಸಿರುವ ಪಿಗ್ಗಿ ಸೆಲ್ಫಿ, ಐದನೇ ಫೋಟೋದಲ್ಲಿ ಮಗಳಿಗೆ ಆಟವಾಡಲು ಇಟ್ಟಿರುವ ಗೊಂಬೆಗಳ ಫೋಟೋ, 6ನೇ ಫೋಟೋದಲ್ಲಿ ತಮ್ಮ ಎರಡು ನಾಯಿಗಳ ಫೋಟೋವಿದೆ.
ಈ ಆರೂ ಫೋಟೋಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಗೊಂಬೆಗಳ ಫೋಟೋ ಏಕೆಂದರೆ ಇದರಲ್ಲಿ 5 ವಿಧವಿದವಾದ ಗೊಂಬೆಗಳ ಜೊತೆ ಒಂದು ಕೃಷ್ಣನ ಮೂರ್ತಿ ಕೂಡ ಇದೆ. ಮಡಿಕೆಯಲ್ಲಿನ ಬೆಣ್ಣೆ ಕದಿಯುತ್ತಿರುವ ಪುಟ್ಟ ಕೃಷ್ಣನ ಮೂರ್ತಿ ಇದಾಗಿದ್ದು ಗೋಲ್ಡ್ ಮತ್ತು ಕೆಂಪು ಬಣ್ಣವಿದೆ. 'ನೀವು ವಿದೇಶದಲ್ಲಿದ್ದರೂ ನಮ್ಮ ದೇವರನ್ನು ಮರೆತಿಲ್ಲ , ನಿಮ್ಮ ಮಗಳಿಗೆ ಗೊಂಬೆ ಮಾತ್ರವಲ್ಲ ಕೃಷ್ಣನೂ ಮುಖ್ಯ ಎಂದು ಹೇಳಿಕೊಡುತ್ತಿರುವುದು ಗ್ರೇಟ್' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸದ್ಯ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಆದರೆ ಈ ಮಧ್ಯೆ ತನ್ನ ಜೀವನ ಸಂಗಾತಿಯೊಂದಿಗೆ ಸಮಯ ಕಳೆಯಲು ಹೆಣಗಾಡುತ್ತಾರೆ. ಮದುವೆಯಾಗಿ ಮೂರು ವರ್ಷ ಕಳೆದರೂ ನಿಕ್ ಮತ್ತು ಪ್ರಿಯಾಂಕಾ ನಡುವಿನ ಪ್ರೀತಿ ಹಾಗೆಯೇ ಉಳಿದಿದೆ. ಇಬ್ಬರಿಗೂ ಸಮಯ ಸಿಕ್ಕಾಗಲೆಲ್ಲ ಪರಸ್ಪರ ಒಟ್ಟಾಗಿಯೇ ಸಮಯ ಕಳೆಯಲು ಇಷ್ಟಪಡುತ್ತಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಇದರಲ್ಲಿ ನಿಕ್ ಜೊತೆ ಕಾರಿನಲ್ಲಿ ಕುಳಿತಿದ್ದಾರೆ ಮತ್ತು ಇಬ್ಬರೂ ಪರಸ್ಪರರ ಕೈ ಹಿಡಿದು ಕೊಂಡಿದ್ದಾರೆ. ಆದರೆ, ಈ ಫೋಟೋದಲ್ಲಿ ಪ್ರಿಯಾಂಕಾ ಅಥವಾ ನಿಕ್ ಮುಖವಾಗಲಿ ಕಾಣಿಸುತ್ತಿಲ್ಲ. ಆದರೆ ಈ ಫೋಟೋ ಮೂಲಕ ನಟಿ ಮನದಾಳದ ಮಾತನ್ನು ಹೇಳಿದ್ದಾರೆ. ಅದು ಅವರ ನೆಚ್ಚಿನ ಭಾನುವಾರ' ಎಂದು ಬರೆದಿದ್ದಾರೆ. ಇದರೊಂದಿಗೆ ರೆಡ್ ಹಾರ್ಟ್ ನ ಎಮೋಜಿಯನ್ನೂ ಹಾಕಿದ್ದಾರೆ.
ಫೆಬ್ರವರಿ 10 ರಂದು ನಿಕ್ ಜೋನಾಸ್ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಸಿರು ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಅವನ ಕೈಯಲ್ಲಿ ಕಾಫಿಯ ಮಗ್ ಇದೆ. ವೀಡಿಯೋದಲ್ಲಿ ಮಹಿಳೆಯೊಬ್ಬರು ಬೆಳಿಗ್ಗೆ ಎದ್ದರೆ ಏನನಿಸುತ್ತದೆ ಎಂದು ಕೇಳುತ್ತಾರೆ, ಅದಕ್ಕೆ ನಿಕ್ ಕ್ಯಾಮೆರಾವನ್ನು ನೋಡುತ್ತಾ, 'ಇದೊಂದು ಉತ್ತಮ ದಿನವಾಗಲಿ' ಎಂದು ಹೇಳುತ್ತಾರೆ. ಹಂಚಿಕೊಂಡ ವೀಡಿಯೊಗೆ ನಿಕ್, 'ಮಾರ್ನಿಂಗ್ ಮೂಡ್' ಎಂಬ ಶೀರ್ಷಿಕೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.