ಗೋವಾದಲ್ಲಿ ಫಿಲ್ಮಿ ಸ್ಟೈಲ್‌ ಪ್ರಪೋಸ್‌; ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ಡೇಟ್‌ ಫಿಕ್ಸ್‌!

Suvarna News   | Asianet News
Published : Feb 05, 2020, 12:40 PM IST
ಗೋವಾದಲ್ಲಿ ಫಿಲ್ಮಿ ಸ್ಟೈಲ್‌ ಪ್ರಪೋಸ್‌; ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ಡೇಟ್‌ ಫಿಕ್ಸ್‌!

ಸಾರಾಂಶ

ಸ್ಯಾಂಡಲ್‌ವುಡ್ ನಟ ಹಾಗೂ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ನಿಶ್ಚಿತಾರ್ಥ ಫೆ.10ರಂದು ಅದ್ಧೂರಿಯಾಗಿ ನೆರೆವೇರಲಿದೆ. ಅಂದ್ಮೇಲೆ ಇದ್ಯಾವ ನಿಖಿಲ್‌ ಕಥೆ ಎಂದು ಕನ್ಫ್ಯೂಸ್‌ ಆಗುತ್ತಿದ್ದೀರಾ? ಇಲ್ಲಿದೆ ಓದಿ...  

'ಅರ್ಜುನ್‌ ಸುರವರಂ' ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟ ನಿಖಿಲ್‌ ಸಿದ್ದಾರ್ಥ ತಮ್ಮ ಬಹು ದಿನದ ಗೆಳತಿ ಪಲ್ಲವಿ ವರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

ಕಾಮನ್‌ ಫ್ರೆಂಡ್ಸ್ ಮೂಲಕ ಪರಿಚಯವಾದ ನಿಖಿಲ್‌ ಆ್ಯಂಡ್ ಪಲ್ಲವಿ ಕೆಲವು ದಿನಗಳ ಕಾಲ ಕದ್ದುಮುಚ್ಚಿ ಡೇಟಿಂಗ್‌ ಮಾಡಿದ್ದಾರೆ. ಆ ನಂತರ ಇಬ್ಬರ ಸ್ನೇಹಿತರೊಂದಿಗೆ ಗೋವಾ ಟ್ರಿಪ್‌ ತೆರಳಿದಾಗ, ಫಿಲ್ಮಿ ಸ್ಟೈಲ್‌ನಲ್ಲಿ ನಿಖಿಲ್‌ ಪ್ರಪೋಸ್‌ ಮಾಡಿದ್ದಾರೆ. ಇವರಿಬ್ಬರ ಪ್ರೀತಿಗೆ ಪೋಷಕರೂ ಸಾಥ್ ನೀಡಿದ್ದಾರೆ. 

ನಿಖಿಲ್ ಮದುವೆಯಾಗೋ ಹುಡುಗಿ ರೇವತಿ ಏನ್ ಓದಿದ್ದಾರೆ? ಏನ್ ಮಾಡ್ತಿದ್ದಾರೆ?

ಗುರು- ಹಿರಿಯರ ಸಮ್ಮುಖದಲ್ಲಿ ಫೆಬ್ರವರಿ 1ರಂದು ಹೈದರಾಬಾದ್‌ ಖಾಸಗಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಮದುವೆ ದಿನಾಂಕ ನಿಗದಿಯಾಗಿದ್ದು, ಏಪ್ರಿಲ್‌ 16ರಂದು ಈ ಕ್ಯೂಟ್ ಜೋಡಿ ಸಪ್ತಪದಿ ತುಳಿಯಲಿದೆ.

ತೆಲಗು ಚಿತ್ರರಂಗದಲ್ಲಿ ಸಾಕಷ್ಟು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ನಿಖಿಲ್‌, 'ಅರ್ಜುನ್‌ ಸುರವರಂ' ಮೂಲಕ ಹೀರೋ ಆಗಿ ಕಾಣಿಸಿಕೊಂಡವರು. ಇದೀಗ ಇವರ ಕೈಯಲ್ಲಿ ಸಾಕಷ್ಟು ಆಫರ್‌ಗಳಿವೆ. ಯುವತಾ, ಅಲಸ್ಯಂ ಅಮೃತಂ, ವೀಡು ಥೆಡಾ, ಸ್ವಾಮಿ ರಾ ರಾ, ಕಾರ್ತಿಕೇಯ...ಮುಂತಾದ ಚಿತ್ರಗಳಲ್ಲಿ ನಿಖಿಲ್ ಅಭಿನಯಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿ ಕಾಲಿವುಡ್‌ ಪ್ರವೇಶಿಸಿದ ಈ ನಟ, ನಂತರ ನಟನಾಗಿ ಗುರುತಿಸಿಕೊಂಡವರು. ಪಲ್ಲವಿ ವೃತ್ತಿಯಲ್ಲಿ ವೈದ್ಯೆ. 

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ ನಿಶ್ಚಿತಾರ್ಥ ಡೇಟ್‌ ಫಿಕ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?