ಪೋರ್ನ್‌ ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟಿ ಬಿಚ್ಚಿಟ್ಟ ರಿಯಲ್‌ ಸ್ಟೋರಿಗೆ ಫ್ಯಾನ್ಸ್‌ ಶಾಕ್‌!

By Suvarna News  |  First Published Feb 4, 2020, 2:04 PM IST

ಸೆಕ್ಸ್ ಅಂದ ಕೂಡಲೇ ಅಸಹ್ಯದಿಂದ ಮುಖ ಸಿಂಡರಿಸಿಕೊಳ್ಳುವವರು ಹಲವು ಜನ. ಕೆಲವರು ತೋರಿಕೆಗೆ ಅಸಹ್ಯ ಪ್ರಕಟಿಸಿದರೂ ಒಳಗಿಂದೊಳಗೇ ಆ ಬಗ್ಗೆ ತಿಳಿದುಕೊಳ್ಳಲು ಕುತೂಹಲ ತೋರುತ್ತಾರೆ. ಪೋರ್ನ್ ಸ್ಟಾರ್ ಒಬ್ಬಳು ಅನುಭವ ಹಂಚಿಕೊಂಡಿದ್ದಾಳೆ.


ಸೆಕ್ಸ್ ಅಂದ ಕೂಡಲೇ ಅಸಹ್ಯದಿಂದ ಮುಖ ಸಿಂಡರಿಸಿಕೊಳ್ಳುವವರು ಹಲವು ಜನ. ಕೆಲವರು ತೋರಿಕೆಗೆ ಅಸಹ್ಯ ಪ್ರಕಟಿಸಿದರೂ ಒಳಗಿಂದೊಳಗೇ ಆ ಬಗ್ಗೆ ತಿಳಿದುಕೊಳ್ಳಲು ಕುತೂಹಲ ತೋರುತ್ತಾರೆ. 'ಸೆಕ್ಸ್ ಅಂದರೆ ವಲ್ಗರ್ ಅಲ್ಲ, ಅದು ಬದುಕಿನ ಒಂದು ಭಾಗ ಅಷ್ಟೇ. ಊಟ, ನಿದ್ದೆಯಷ್ಟೇ ಸಹಜ. ಆದರೆ ಅದನ್ನು ಕೆಟ್ಟದಾಗಿ ನೋಡುವವರ ಮನಸ್ಸು ಕೆಟ್ಟದಾಗಿರುತ್ತೆ ಅಷ್ಟೇ..'ಅನ್ನುವುದು ಪೋರ್ನ್ ಸ್ಟಾರ್ ಜಸ್ಟಿನ್ ಮಾತು. ಈಕೆ ಕಳೆದ ಕೆಲವು ವರ್ಷಗಳಿಂದ ಸೆಕ್ಸ್ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿದ್ದಾಳೆ. ಅವಳು ಸ್ವಂತ ಆಸಕ್ತಿಯಿಂದ ಪೋರ್ನ್ ಉದ್ಯಮವನ್ನು ಆರಿಸಿಕೊಂಡವಳು. ಆದರೆ ಹೊರ ಜಗತ್ತು ಈ ಪೋರ್ನ್ ವೀಡಿಯೋಗಳಷ್ಟನ್ನೂ ನೋಡಿ, ಗುಟ್ಟಾಗಿ ಹಂಚಿ, ಆಮೇಲೆ ಅದರ ಬಗ್ಗೆ ಕೆಟ್ಟದಾಗಿ ಮಾತಾಡೋದು ಕಂಡರೆ ಇವಳಿಗೆ ಸಿಕ್ಕಾಪಟ್ಟೆ ಸಿಟ್ಟು. 'ನಿಮಗೆ ಇದರ ಬಗ್ಗೆ ಆಸಕ್ತಿ ಇಲ್ಲ ಅಂದರೆ ಬಾಯಿ ಮುಚ್ಚಿಕೊಂಡಿರಿ. ಅದು ಬಿಟ್ಟು ಕೆಟ್ಟ ಮಾತುಗಳನ್ನು ಆಡುತ್ತಾ ಒಳಗೊಳಗೇ ಈ ವಿಷಯವನ್ನು ಸುಖಿಸುವವರನ್ನು ಕಂಡರೆ ನನಗೆ ಕೆಟ್ಟ ಅಸಹ್ಯ' ಎಂದು ಕಿಡಿ ಕಾರುತ್ತಾಳೆ. ಅವಳ ಅನುಭವದ ನುಡಿಗಳು ಇಲ್ಲಿವೆ.

ನೀವು ಪೋರ್ನ್ ಅಡಿಕ್ಟಾ? ಚೆಕ್ ಮಾಡ್ಕೊಳ್ಳಿ

Tap to resize

Latest Videos

- ಅದು ನನ್ನ ಮೊದಲ ಪೋರ್ನ್ ವೀಡಿಯೋ ಶೂಟಿಂಗ್. ಆ ಹೊತ್ತಿಗೆ ನನಗೆ ಬಾಯ್ ಫ್ರೆಂಡ್ ಇದ್ದ. ಹೈಸ್ಕೂಲ್ ನಲ್ಲೇ ನಾನು ಕನ್ಯತ್ವ ಕಳೆದುಕೊಂಡಿದ್ದೆ. ಅನೇಕ ಸಲ ಸೆಕ್ಸ್ನಲ್ಲಿ ಪಾಲ್ಗೊಂಡಿದ್ದೆ. ಪೋರ್ನ್ ಸ್ಟಾರ್ ಆಗಬೇಕು ಅನ್ನೋ ವಿಕ್ಷಿಪ್ತ ಕನಸು ನನಗಿತ್ತು. ಆ ಕನಸಿನಲ್ಲೇ ಸ್ಟುಡಿಯೋಗೆ ಹೋದೆ. ಆದರೆ ಯಾಕೋ ಒಳಗೊಳಗೇ ಭಯ, ಆತಂಕ ಇತ್ತು. ಮುಚ್ಚಿದ ಬಾಗಿಲಿನ ರೂಂ ಒಳಗೆ ಸೆಕ್ಸ್ ಮಾಡೋದಕ್ಕೂ ಇಲ್ಲಿ ಕ್ಯಾಮರಾ ಮುಂದೆ ಜನರ ಮುಂದೆ ಸೆಕ್ಸ್ ಮಾಡೋದಕ್ಕೂ ವ್ಯತ್ಯಾಸ ಇದ್ದೇ ಇರುತ್ತಲ್ಲಾ.. ಆದರೆ ಅಲ್ಲಿದ್ದವರು ಬಹಳ ಪ್ರೊಫೆಸನಲ್. ನನಗೆ ಯಾವ ಮುಜುಗರವೂ ಆಗದ ಹಾಗೆ ಆಪ್ತವಾಗಿ ಮಾತನಾಡಿಸಿದರು. ನಾನೇನು ಮಾಡಬೇಕು, ಸನ್ನಿವೇಶ ಹೇಗಿರುತ್ತೆ ಅನ್ನೋದನ್ನು ಹೇಳಿದರು. ಮೇಲ್ನೋಟಕ್ಕೆ ಅದು ಸಿನಿಮಾ ಶೂಟಿಂಗ್ ಥರ ಇತ್ತು. ಆದರೆ ಅವರಿಗೆ ಸೀನ್ ತುಂಬ ಪರಿಣಾಮಕಾರಿಯಾಗಿ ಬರಬೇಕು ಅನ್ನೋದಷ್ಟೇ ಮನಸ್ಸಲ್ಲಿದ್ದ ಹಾಗೆ ಕಂಡಿತು. ಇದು ಜಸ್ಟ್ ಒಂದು ಪರ್ಫಾರ್ಮೆನ್ಸ್ ಅಷ್ಟೇ. ಇದಲ್ಲಿ ಯಾವುದೂ ಪರ್ಸನಲ್ ಅಲ್ಲ ಅನ್ನೋದನ್ನು ವಿವರಿಸಿದರು. ಸಣ್ಣ ಅಳುಕಿನಲ್ಲೇ ಕ್ಯಾಮೆರಾ ಮುಂದೆ ಬೆತ್ತಲಾದೆ. ಆವರೆಗೆ ನೋಡಿರದ ಪಾರ್ಟನರ್, ಮೇಕಪ್ ಎಲ್ಲ ಸ್ವಲ್ಪ ಕಿರಿಕಿರಿಯಾದರೂ ಅವರು ಧೈರ್ಯ ತುಂಬಿದ ಕಾರಣ ನಿಸ್ಸಂಕೋಚವಾಗಿ ಕ್ಯಾಮೆರಾ ಮುಂದೆ ಒಬ್ಬ ಆರ್ಟಿಸ್ಟ್ ಥರ ಪರ್ಫಾಮ್ ಮಾಡಿದೆ. ಬಹಳ ಸುಸ್ತಾಯ್ತು, ಕಟ್ ಅಂದಾಕ್ಷಣ ನಮ್ಮ ಕ್ರಿಯೆ ಸ್ಟಾಪ್ ಮಾಡಬೇಕಿತ್ತು. ಮತ್ತೆ ಹಿಂದಿನ ಮನಸ್ಥಿತಿಗೆ ಹೊರಳಿ ಕ್ರಿಯೆ ಶುರು ಮಾಡಬೇಕಿತ್ತು. ಅಲ್ಲಿರುವ ಜನರೂ ಪ್ರೊಫೆಶನಲ್ಸ್ ಆದ ಕಾರಣ ಟೆಕ್ನಿಕಲ್ ಆಗಿ ಅಷ್ಟೇ ಗೈಡ್ ಮಾಡುತ್ತಿದ್ದರು. ಅಲ್ಲಿ ಮನಸ್ಸಿಗೆ ಅಸಹ್ಯವಾಗುವಂಥಾದ್ದು, ಹರ್ಟ್ ಆಗುವಂಥಾದ್ದು ಏನೂ ಇರಲಿಲ್ಲ.

 

ಆಫೀಸ್‌ನಲ್ಲಿ ಲವ್ ಮಾಡೋದ್ರಿಂದ ಆಗೋ ಅನೇಕ ಪ್ರಯೋಜನಗಳು!

 

- ಕ್ರಮೇಣ ಇದು ನನಗೆ ಅಭ್ಯಾಸ ಆಯ್ತು. ಒಂದು ಪ್ರೊಫೆಶನಲ್ ಜಾಬ್ ನಲ್ಲಿ ತೊಡಗುವಷ್ಟೇ ಸಲೀಸಾಗಿ ಇದರಲ್ಲೂ ತೊಡಗಿಕೊಳ್ಳುತ್ತಿದ್ದೆ. ಇದರಲ್ಲಿ ಮನಸ್ಸೂ ಪ್ರಫುಲ್ಲವಾಗಿಲ್ಲದಿದ್ದರೆ ಉತ್ತಮ ಪರ್ಫಾಮೆನ್ಸ್ ಕೊಡೋದು ಸಾಧ್ಯ ಇಲ್ಲ. ಹಾಗಾಗಿ ಮನಸ್ಸನ್ನು ಸದಾ ಪಾಸಿಟಿವ್ ಆಗಿ ಇಟ್ಟುಕೊಳ್ಳುತ್ತಿದ್ದೆ.

- ಈ ನಡುವೆ ಕೆಲವೊಂದು ಜಿಗುಪ್ಸೆ ತರುವ ಅನುಭವಗಳೂ ಆದವು. ನಮ್ಮ ಜೊತೆಗೆ ಪರ್ಫಾಮ್ ಮಾಡುವವರು ಕ್ಲೀನ್ ಆಗಿಲ್ಲದಿದ್ದರೆ ಅವರ ಜೊತೆಗೆ ಆಪ್ತವಾಗಿ ದೇಹ ಹಂಚಿಕೊಳ್ಳೋದು ಅಸಾಧ್ಯವೇ ಆಗುತ್ತಿತ್ತು. ಅಂಥಾ ಸಮಯದಲ್ಲಿ ಸೀನ್ ಅರ್ಧಕ್ಕೇ ನಿಲ್ಲಿಸಿ ಮತ್ತೊಮ್ಮೆ ಬಾತ್ ರೂಂ ಗೆ ಹೋಗಿ ವಾಶ್ ಮಾಡಿಕೊಂಡು ಬರುವಂತೆ ಹೇಳುತ್ತಿದ್ದೆ. ಅದು ಅವರಿಗೆ ಮುಜುಗರ ತರಿಸಿರಬಹುದು, ಆದರೆ ಈ ವಿಷಯದಲ್ಲಿ ನಾನು ಹೆಲ್ಪ್‌ಲೆಸ್.

- ಒಮ್ಮೆ ಒಬ್ಬ ಆಕರ್ಷಕ ತರುಣ ಪಾರ್ಟನರ್ ಆಗಿದ್ದ. ಹಾಗಾಗಿ ಉತ್ತಮ ಎಕ್ಸ್ ಪೀರಿಯನ್ಸ್ ಆಗುತ್ತೆ ಅನ್ನುವ ನಿರೀಕ್ಷೆಯಲ್ಲಿದ್ದೆ. ಆದರೆ ಅವನು ಬಹಳ ಕ್ರೂರಿಯಾಗಿದ್ದ. ಅವನ ವರ್ತನೆ ನನಗೆ ಬಹಳ ಹರ್ಟ್ ಮಾಡಿತು. ಆಮೇಲಿಂದ ವ್ಯಕ್ತಿಯ ಹೊರ ಚಹರೆ ನೋಡಿ ಇವನು ಹೀಗೆ ಅಂತ ಜಡ್ಜ್ ಮಾಡೋದನ್ನು ಬಿಟ್ಟೆ.

 

ಮಗಳು ಹಸ್ತಮೈಥುನ ಮಾಡಿಕೊಳ್ಳೋದನ್ನ ನೋಡಿದೆ, ಏಕೋ ಮನಸ್ಸಿಗೆ ಕಸಿವಿಸಿ..

 

- ನನ್ನ ಫ್ರೆಂಡ್ಸ್ ಜೊತೆಗೆ ಪರಿಚಿತರ ಜೊತೆಗೆ ನನ್ನ ಕೆಲಸದ ಬಗ್ಗೆ ಮುಚ್ಚುಮರೆಯಿಲ್ಲದೇ ಹೇಳುತ್ತೇನೆ. ಆದರೆ ಅಪರಿಚಿತರ ವರ್ತನೆ ನನಗೆ ಅಚ್ಚರಿ ಉಂಟು ಮಾಡುತ್ತೆ. ಅವರು ಆರಂಭದಲ್ಲಿ ಇದನ್ನೊಂದು ಜೋಕ್ ಥರ ನೋಡುತ್ತಾರೆ. ಆಮೇಲೆ ನಮ್ಮನ್ನು ಲಘುವಾಗಿ ಟ್ರೀಟ್ ಮಾಡಲು ಶುರು ಮಾಡುತ್ತಾರೆ. ಇಂಥಾ ವ್ಯಕ್ತಿಗಳಿಂದ ದೂರವೇ ಇರುತ್ತೇನೆ. ಹಿಪೋಕ್ರೆಸಿ ಇರುವ ವ್ಯಕ್ತಿಗಳನ್ನು ಕಂಡರೆ ಕೆಟ್ಟ ಅಸಹ್ಯವಾಗುತ್ತೆ.

click me!