
ಟಾಲಿವುಡ್ (Tollywood) ಕ್ಯೂಟ್ ಆ್ಯಂಡ್ ಬೆಸ್ಟ್ ಪೇರ್ ಎಂದು ಹೆಸರು ಪಡೆದಿದ್ದ ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ಅಕ್ಟೋಬರ್ 2021ರಂದು ವಿಚ್ಛೇದನ (Divorce) ಪಡೆದುಕೊಂಡಿರುವುದರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಇವರಿಬ್ಬರ ದೂರ ಅಗುತ್ತಿರುವ ವಿಚಾರ ಹರಿದಾಡಲು ಶುರುವಾಗುತ್ತಿದ್ದಂತೆ ,ಇಲ್ಲ ಸಲ್ಲದ ಗಾಳಿ ಸುದ್ದಿಗಳು ಕೇಳಿ ಬರುತ್ತಿದ್ದವು. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ ನಾಗ ಚೈತನ್ಯ ಮೊದಲ ಬಾರಿ ತಾವು ಸಮಂತಾರೊಂದಿಗಿನ ನಾಲ್ಕು ವರ್ಷಗಳನ್ನು ಮುರಿದುಕೊಂಡಿರುವ ಬಗ್ಗೆ ಇದೀಗ ಮೌನ ಮುರಿದ್ದಾರೆ.
ನಾಗ ಚೈತನ್ಯ ಬಹುನಿರೀಕ್ಷಿತ ಸಿನಿಮಾ ಬಂಗಾರರಾಜು (BangaraRaju) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಡಿವೋರ್ಸ್‌ಗೆ ಸ್ಪಷ್ಟ ಕಾರಣವನ್ನು ತಿಳಿಸದೇ ಹೋದರೂ, ತುಸು ಮಾತನಾಡಿದ್ದಾರೆ. ನಿಮ್ಮ ಡಿವೋರ್ಸ್ ಬಗ್ಗೆ ಹೇಳಿ ಎಂದು ಪ್ರಶ್ನೆ ಮಾಡಿದಾಗ 'ಸಪರೇಟ್ (Seperation) ಅಗುವುದು ಓಕೆ. ನಮ್ಮ ವೈಯಕ್ತಿಕ ಸಂತೋಷಕ್ಕೆ ನಾವು ಒಬ್ಬರಿಗೊಬ್ಬರು ತೆಗೆದುಕೊಂಡಿರುವ ನಿರ್ಧಾರವಿದು. ಸಮಂತಾ ಸಂತೋಷವಾಗಿದ್ದಾಳೆ, ಅಂದ್ರೆ ನಾನೂ ಸಂತೋಷವಾಗಿರುವೆ. ಇಂತಹ ಸಂದರ್ಭಗಳಲ್ಲಿ ವಿಚ್ಚೇದನ ಪಡೆದುಕೊಳ್ಳುವುದೇ ಬೆಸ್ಟ್ ನಿರ್ಧಾರ,' ಎಂದು ನಾಗ ಚೈತನ್ಯ ಹೇಳಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ ಅಕ್ಟೋಬರ್ 2017ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟಿದ್ದರು. ವೈಯಕ್ತಿಕ ಕಾರಣಗಳು, ವೈಯಕ್ತಿಕ ಸಂತೋಷಕ್ಕೆ ಇಬ್ಬರೂ ದೂರವಾದರು. ಈ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೆ ಅವರವರ ಜೀವನ ಎಂದುಕೊಂಡು ಸಮ್ಮನಾಗಿದ್ದಾರೆ. 'ತುಂಬಾ ದಿನಗಳ ಮಾತುಕತೆ ನಂತರ ಸಮಂತಾ ಮತ್ತು ನಾನು ನಮ್ಮದೇ ಜೀವನದ ಹಾದಿಯಲ್ಲಿ ನಡೆಯಬೇಕೆಂದು ದೂರ ಆಗುತ್ತಿರುವೆವು. ದಶಕಗಳಿಂದ ನಾವಿಬ್ಬರೂ ಸ್ನೇಹಿತರಾಗಿರುವುದಕ್ಕೆ (Friendship) ಸಂತೋಷವಿದೆ. ನಮ್ಮ ನಡುವೆ ಸ್ಪೆಷಲ್ ಬಾಂಡ್ ಇರುವುದಕ್ಕೆ ಕಾರಣವೇ ಈ ಸ್ನೇಹ. ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಮ್ಮ ಅಭಿಮಾನಿಗಳು, ಸ್ನೇಹಿತರು ಮತ್ತು ಮಾಧ್ಯಮ ಮಿತ್ರರು ಜೊತೆಗೆ ನಿಲ್ಲಬೇಕು ಎಂದು ಕೇಳಿಕೊಳ್ಳುವೆ,' ಎಂದು ನಾಗ ಚೈತನ್ಯ ಹಾಗೂ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ, ತಾವಿಬ್ಬರು ಬೇರ್ಪಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.
2010ರಲ್ಲಿ ಏ ಮಾಯ ಚೇಸವೇ (Yem Maya Chesava) ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಸಮಂತಾ ಎಂಟ್ರಿ ಕೊಟ್ಟರು. ಸಮಂತಾಗೆ ಜೋಡಿಯಾಗಿ ಅಭಿನಯಿಸಿದ್ದ ನಾಗ ಚೈತನ್ಯ ಅವರಿಗೆ ಇದು ಎರಡನೇ ಸಿನಿಮಾ ಆಗಿತ್ತು. ಎಆರ್ ರೆಹೇಮಾನ್ (AR Rahman) ಸಂಗೀತ ಮತ್ತು ಗೌತಮ್ ಮೆನನ್ (Gautham Menon) ನಿರ್ದೇಶದ ಕಾಂಬಿನೇಷನ್ ವರ್ಕೌಟ್ ಆಗಿ, ಸಿನಿಮಾ ಸೂಪರ್ ಹಿಟ್ ಆಗಿತ್ತು. ಸ್ನೇಹಿತೆ ಅಥವಾ ಸೊಸೆಯಾಗಿ ಮಾತ್ರ ಸಮಂತಾ, ಅಕ್ಕಿನೇನಿ ಕುಟುಂಬದೊಂದಿಗೆ ಬೆಸೆದುಕೊಂಡಿರಲಿಲ್ಲ.ಮಾಜಿ ಮಾವ ನಾಗರ್ಜುನ (Nagarjuna) ಮತ್ತು ಗಂಡನ ಜೊತೆಯೂ ಅಭಿನಯಿಸಿ ಬಹುಮುಖ ಪ್ರತಿಭೆ (Multi Talented) ಎಂದು ಸಾಬೀತು ಮಾಡಿದ್ದರು. ಗಂಡ ಮತ್ತು ಮಾವನ ಜೊತೆ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ (Aishwarya Rai) ಹೊರತುಪಡಿಸಿ, ಸಮಂತಾನೇ ನಟಿಸಿರುವುದು.
ಸಿನಿಮಾ ಬ್ಯಾಗ್ರೌಂಡ್ ಇದ್ದ ಚೈತನ್ಯ ಒಂದು ಸಿನಿಮಾ ಮುಗಿಸುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಯಾವುದೆ ಬ್ಯಾಗ್ರೌಂಡ್ ಇಲ್ಲದೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಸಮಂತಾಗೆ ಬೇಗ ಬೇಗ ಸಿನಿಮಾ ಮುಗಿಸಿ, ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಚಿತ್ರರಂಗದಲ್ಲಿ ಚೈತನ್ಯಗಿಂತ ಸಮಂತಾಗೆ ಬೇಡಿಕೆ ಹೆಚ್ಚು. ಸಮಂತಾ 47 ಸಿನಿಮಾ ಮಾಡಿದ್ದರೆ, ಚೈತನ್ಯ 27 ಸಿನಿಮಾಗಳನ್ನು ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.