Arjun Kapoor-Malaika Arora Breakup: 6 ದಿನಗಳಿಂದ ಮನೆಯಿಂದ ಹೊರಬಂದಿಲ್ಲ ನಟಿ

Published : Jan 12, 2022, 04:30 PM ISTUpdated : Jan 12, 2022, 04:58 PM IST
Arjun Kapoor-Malaika Arora Breakup: 6 ದಿನಗಳಿಂದ ಮನೆಯಿಂದ ಹೊರಬಂದಿಲ್ಲ ನಟಿ

ಸಾರಾಂಶ

ಬಾಲಿವುಡ್‌ನ ಸೂಪರ್ ಜೋಡಿಯ ಮಧ್ಯೆ ಬ್ರೇಕಪ್ ? ಅರ್ಜುನ್ ಕಪೂರ್ - ಮಲೈಕಾ ಅರೋರಾ ದೂರಾಗುತ್ತಿದ್ದಾರಾ ? ಪ್ರತಿದಿನ ಹೊರಗೆ ಕಾಣಿಸ್ಕೊಳ್ಳೋ ನಟಿ ಮನೆಯಿಂದ ಹೊರಬಾರದೆ ಆಗಲೇ 6 ದಿನ ಇಬ್ಬರ ಮಧ್ಯೆ ನಡೆದಿದ್ದೇನು ? 

ಹೆಚ್ಚು ವಯಸ್ಸಿನ ಅಂತರವಿದ್ದರೂ ಮಾದರಿ ಜೋಡಿಯಾಗಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್‌ನ ಚೈಂಯಾ ಚೈಂಯಾ ಚೆಲುವೆ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರ ಅರ್ಜುನ್ ಕಪೂರ್ ಬೇರ್ಪಟ್ಟ ವಿಚಾರ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಬಹುತೇಕ ಪ್ರತಿ ದಿನ ತನ್ನ ಮುದ್ದಿನ ಪೆಟ್ ಡಾಗ್ ಜೊತೆ ವಾಕಿಂಗ್‌ಗಾಗಿ ಹೊರಗೆ ಕಾಣಿಸಿಕೊಳ್ಳುವ ಮಲೈಕಾ ಪಾಪ್ಪರಾಜಿಗೆ ಸ್ಮೈಲ್ ಮಾಡದೆ ಹೋಗುವುದಿಲ್ಲ. ಯೋಗ ಕ್ಲಾಸ್‌ಗಳನ್ನಂತೂ ಮಿಸ್ ಮಾಡೋದೇ ಇಲ್ಲ. ಹೀಗಿದ್ದರೂ ಕಳೆದ 6 ದಿನಗಳಿಂದ ನಟಿ ಹೊರಗಡೆ ಕಾಣಿಸಿಕೊಳ್ಳದಿರುವುದು ಅವರ ಬ್ರೇಕಪ್ ಸುದ್ದಿಗೆ ಹೆಚ್ಚಿನ ಸಾಕ್ಷಿಯಂತಾಗಿದೆ.

ವರದಿಗಳನ್ನು ನಂಬುವುದಾದರೆ, ಬಾಲಿವುಡ್ ಜೋಡಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದವರೆಗೆ ಸಂಬಂಧದಲ್ಲಿದ್ದ ಜೋಡಿಯು ಅದನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದರ ಬಗ್ಗೆ ನಟಿ 'ಅತ್ಯಂತ ದುಃಖಿತರಾಗಿದ್ದಾರೆ' ಎನ್ನಲಾಗುತ್ತಿದೆ. ವಾಸ್ತವವಾಗಿ, ಮಲೈಕಾ ಐಸೋಲೇಶನ್‌ನಲ್ಲಿದ್ದಾರೆ. ಕಳೆದ ಆರು ದಿನಗಳಿಂದ ತನ್ನ ಮನೆಯಿಂದ ಹೊರಬರಲಿಲ್ಲ ಎಂದು ಹೇಳಲಾಗುತ್ತದೆ. ಆದರೂ ಈ ಜೋಡಿ ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಎನೌನ್ಸ್ ಮಾಡಿಲ್ಲ.

ಮಲೈಕಾ-ಅರ್ಜುನ್‌ ಜೋಡಿ ಮಾಲ್ಡೀವ್ಸ್‌‌ನಲ್ಲಿ

ಆರು ದಿನಗಳು ಕಳೆದರೂ ಮಲೈಕಾ ಅರೋರಾ ಮನೆಯಿಂದ ಹೊರಬಂದಿಲ್ಲ. ಅವರು ಸಂಪೂರ್ಣವಾಗಿ ಐಸೋಲೇಶನ್‌ಗೆ ಹೋಗಿದ್ದಾರೆ. ಆಕೆ ತೀವ್ರ ದುಃಖಿತಳಾಗಿದ್ದು, ಸದ್ಯಕ್ಕೆ ಪ್ರಪಂಚದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಅರ್ಜುನ್ ಕಪೂರ್ ಒಮ್ಮೆ ಕೂಡ ಅವರನ್ನು ಭೇಟಿ ಮಾಡಿಲ್ಲ. ವಾಸ್ತವವಾಗಿ, ಅರ್ಜುನ್ ಮೂರು ದಿನಗಳ ಹಿಂದೆ ಸಹೋದರಿ ರಿಯಾ ಕಪೂರ್ ಅವರ ಮನೆಯಲ್ಲಿ ಊಟಕ್ಕೆ ಹೋಗಿದ್ದಾರೆ.

ರಿಯಾಳ ಮನೆ ಮಲೈಕಾ ಮನೆಗೆ ಅತ್ಯಂತ ಸಮೀಪದಲ್ಲಿದೆ. ಆದರೂ ನಟ ರಾತ್ರಿ ಊಟದ ನಂತರ ಮಲೈಕಾ ಅರೋರಾ ಅವರನ್ನು ಭೇಟಿಯಾಗಲಿಲ್ಲ. ಮಲೈಕಾ ಸಾಮಾನ್ಯವಾಗಿ ಈ ಕುಟುಂಬ ಔತಣಕೂಟಗಳಿಗೆ ಅರ್ಜುನ್‌ನೊಂದಿಗೆ ಹಾಜರಾಗುತ್ತಾರೆ. ಆದರೆ ಈ ಬಾರಿ ಅವರು ಅವರೊಂದಿಗೆ ಕಾಣಿಸಿಕೊಂಡಿಲ್ಲ ಎಂದು ಮೂಲವೊಂದು ತಿಳಿಸಿದೆ.

ಈ ವರದಿಗಳಿಗೆ ವ್ಯತಿರಿಕ್ತವಾಗಿ ಬಾಲಿವುಡ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ವರ್ಷದ ಆರಂಭದಲ್ಲಿ ಹೊಸ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ 2022ರ ಶುಭ ಹಾರೈಸಿದ್ದಾರೆ. ಅರ್ಜುನ್ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅರ್ಜುನ್ ಸೆಲ್ಫಿ ಕ್ಲಿಕ್ಕಿಸುತ್ತಿದ್ದಂತೆ ಇಬ್ಬರು ಖುಷಿಯಾಗಿ ಪೋಸ್ ಕೊಟ್ಟಿದ್ದಾರೆ. ಮಲೈಕಾ ಸುಣ್ಣದ ಬಣ್ಣದ ಬಿಕಿನಿಯಲ್ಲಿ ಮಿಂಚಿದರೆ, ನಟ ಶರ್ಟ್‌ಲೆಸ್ ಆಗಿ ತಮ್ಮ ದಪ್ಪ ಮೀಸೆಯಲ್ಲಿ ಶೈನ್ ಮಾಡಿದ್ದಾರೆ.

ಅರ್ಜುನ್ ಮತ್ತು ಮಲೈಕಾ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಇಬ್ಬರು ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಬ್ಬಗಳನ್ನೂ ಜೊತೆಯಾಗಿ ಆಚರಿಸುತ್ತಾರೆ. ಕೆಲಸದ ವಿಚಾರವಾಗಿ ಅರ್ಜುನ್ ಪ್ರಸ್ತುತ ಮೂರು ಸಿನಿಮಾಳನ್ನು ಹೊಂದಿದ್ದು - 'ಏಕ್ ವಿಲನ್ ರಿಟರ್ನ್ಸ್', 'ಕುಟ್ಟೆ' ಮತ್ತು 'ದಿ ಲೇಡಿ ಕಿಲ್ಲರ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?