
ತಮಿಳು ಚಿತ್ರರಂಗದ ಮೂಲಕ ನಟನಾಗಿ ವೃತ್ತಿ ಜೀವನ ಆರಂಭಿಸಿದ ರಾಘವ್ ಲಾರೆನ್ಸ್ ದಕ್ಷಿಣ ಭಾರತದ ಪ್ರಸಿದ್ಧ ನೃತ್ಯ ಕಲಾವಿದ. ತನ್ನದೇ ನೃತ್ಯ ಶಾಲೆಯಲ್ಲಿ ನೂರಾರು ಮಕ್ಕಳಿಗೆ ವಿವಿಧ ಶೈಲಿಯ ನೃತ್ಯ ಹೇಳಿಕೊಡುತ್ತಾರೆ. ತಮಿಳು ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿರುವ ರಾಘವ್ ಕೊರೋನಾ ವೈರಸ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಹಣ ಸಹಾಯ ಮಾಡಿದ್ದಾರೆ.
5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!
ಹೌದು ನಟ ರಾಘವ್ ಲಾರೆನ್ಸ್ 3 ಕೋಟಿ ಹಣವನ್ನು ಪರಿಹಾರ ನಿಧಿಗೆ ನೀಡುತ್ತಿದ್ದಾರೆ. ಈ 3 ಕೋಟಿ ಎಲ್ಲರಿಗೂ ಸಮಾನವಾಗಿ ಸಿಗಬೇಕೆಂದು ತೀರ್ಮಾನಿಸಿ 50 ಲಕ್ಷ ರೂ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ, 50 ಲಕ್ಷ ರೂ. ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ, 50 ಲಕ್ಷ ರೂ ಸಿನಿಮಾ ಕಾರ್ಮಿಕರ ಒಕ್ಕೂಟಕ್ಕೆ, 50 ಲಕ್ಷ ರೂ. ತಮಿಳು ನಾಡು ನೃತ್ಯಗಾರರ ಒಕ್ಕೂಟಕ್ಕೆ, 25 ಲಕ್ಷ ರೂ. ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ ಹಾಗೂ 75 ಲಕ್ಷ ರೂ. ನಿರ್ಗತಿಕರಿಗೆ ಆಹಾರ ಪೂರೈಸಲು ನೀಡುವುದಾಗಿ ಹೇಳಿದ್ದಾರೆ.
ಸಿಎಂ ಪರಿಹಾರ ನಿಧಿಗೆ ಐದು ಲಕ್ಷ ರೂ.ದೇಣಿಗೆ ನೀಡಿದ ಹಿರಿಯ ನಟಿ ಸರೋಜ ದೇವಿ!
'ಹಾಯ್ ಫ್ರೆಂಡ್ಸ್ ಹಾಗೂ ಫ್ಯಾನ್ಸ್. ಒಂದು ಖುಷಿ ಸುದ್ದಿಯನ್ನು ಹಂಚಿಕೊಳ್ಳುತ್ತಿರುವೆ. ನನ್ನ ಮುಂದಿನ ಚಿತ್ರವಾದ ಚಂದ್ರಮುಖಿ-2 ಗೆ ಸಹಿ ಮಾಡಿದ್ದೇನೆ. ಪಿ. ವಾಸು ನಿರ್ದೇಶನದ ಈ ಚಿತ್ರದಲ್ಲಿ ಅಭಿನಯಿಸಿವುದಕ್ಕೆ ನನಗೆ ತುಂಬಾ ಸಂತೋಷವಿದೆ. ಈ ಚಿತ್ರದಿಂದ ಪಡೆಯುತ್ತಿರುವ ಅಡ್ವಾನ್ಸ್ ಹಣವನ್ನು ನಾನು ಕೊರೋನಾ ಪರಿಹಾರವಾಗಿ ನೀಡಬೇಕೆಂದು ನಿರ್ಧಾರ ಮಾಡಿರುವೆ ' ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.