ಕೊರೋನಾ ಪೀಡಿತರಿಗೆ ಸಹಾಯ ಮಾಡಲು ದಕ್ಷಿಣ ಭಾರತದ ಖ್ಯಾತ ವಿಲನ್ ಸೋನು ಸೂದ್ ಸಹಾಯ ಮಾಡಲು ಮುಂದಾಗಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ಮಾಡುತ್ತಿರುವ ಹುಚ್ಚಾಟಕ್ಕೆ ಸಾವಿರಾರು ಜೀವಗಳು ಸಂಕಷ್ಟದಲ್ಲಿದೆ. ಪೀಡಿತರಿಗೆ ಹಾಗೂ ನಿರ್ಗತಿಕರಿಗೆ ಸಹಾಯ ಮಾಡಲು ಚಿತ್ರರಂಗದ ಅನೇಕ ತಾರೆಯರು ಮುಂದಾಗುತ್ತಿದ್ದಾರೆ. ಕೆಲವರು ಧನ ಸಹಾಯ ಮಾಡುತ್ತಿದ್ದರೆ ಕೆಲವರು ಆಹಾರ ವಿತರಣೆ ಮಾಡುತ್ತಿದ್ದಾರೆ ಇನ್ನೂ ಕೆಲವರು ತಮ್ಮ ವಸತಿಗಳನ್ನು ಪೀಡಿತರ ಚಿಕಿತ್ಸೆಗೆಂದು ನೀಡುತ್ತಿದ್ದಾರೆ.
3 ಕೋಟಿ ಹಣವನ್ನು ಸಮಾನವಾಗಿ ಹಂಚಿದ ನಟ ರಾಘವ್ ಲಾರೆನ್ಸ್; ಯಾರ್ಯಾರಿಗೆ?
ಸೋನು ಸೂದ್ ತಮ್ಮ ಆರು ಅಂತಸ್ತಿನ ಐಷಾರಾಮಿ ಹೋಟೆಲನ್ನು ಕೊರೋನಾ ಪೀಡಿತರ ಚಿಕಿತ್ಸೆಗೆಂದು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ವಾಸವಿರಲು ಬಿಟ್ಟುಕೊಡುವುದಾಗಿ ಹೇಳಿದ್ದಾರೆ . 'ಡಾಕ್ಟರ್, ನರ್ಸ್ ಹಾಗೂ ಪ್ಯಾರ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ನಮ್ಮ ದೇಶವನ್ನು ರಕ್ಷಿಸಲು ಸಮಯವನ್ನು ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ. ನನ್ನ ಹೋಟೆಲ್ ಈ ರಿಯಲ್ ಹೀರೋಗಳಿಗೆ ನೀಡುತ್ತಿರುವುದಕ್ಕೆ ನಾನು ಹ್ಯಾಪಿ' ಎಂದು ಮಾತನಾಡಿದ್ದಾರೆ.
ಮಂಗಳಮುಖಿಯರಿಗೆ ಆಹಾರ ಸಾಮಾಗ್ರಿ, ಕೊರೋನಾ ಸಮರದಲ್ಲಿ ಕೈಜೋಡಿಸಿದ ರಾಧಿಕ ಕುಮಾರಸ್ವಾಮಿ
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಗೌರಿ ಕೂಡ ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಐಷಾರಾಮಿ 4 ಅಂತಸ್ತಿನ ಪರ್ಸನಲ್ ಆಫೀಸನ್ನು ಮುಂಬೈ ಮಹಾನಗರ ಪಾಲಿಕೆಗೆ ಕೊರೋನಾ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ನೀಡುತ್ತಿದ್ದಾರೆ.