
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ರೀಲ್ ಲೈಫ್‌ನಲ್ಲೂ ಹೀರೋನೇ. ರಿಯಲ್ ಲೈಫ್‌ನಲ್ಲೂ ಹೀರೋನೇ ಅಂತ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಇರುವ ನಮ್ರತಾ ಮಹೇಶ್ ಸಮಾಜಮುಖಿ ಕಾರ್ಯಗಳ ಬಗ್ಗೆ ಹಂಚಿಕೊಳ್ಳುತ್ತಾರೆ.
ಬಾಲಿವುಡ್ ನಟಿ ಮದುವೆಯಾಗುವ ಮುಂಚೆ ಈ ಕಂಡೀಷನ್ ಹಾಕಿದ್ದರು ಮಹೇಶ್‌ಬಾಬು!
ಮಹೇಶ್ ಸಹಾಯ:
'ಮನಸ್ಸಿಗೆ ಮುಟ್ಟುವಂಥ ಘಟನೆ ಇದು. ಒಂದು ತಿಂಗಳ ಕಂದಮ್ಮ ಅಂಕಿತಾ ಭಾರ್ಗವ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಗು. ಈಗ ಆರೋಗ್ಯವಾಗಿದ್ದಾಳೆ. ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಮಗುವಿನ ಬಗ್ಗೆ ನಮ್ಮಷ್ಟೇ ಕಾಳಜಿ ವಹಿಸಿದ ವೈದ್ಯರಿಗೂ ಧನ್ಯವಾದಗಳು,' ಎಂದು ನಮ್ರತಾ ಬರೆದುಕೊಂಡಿದ್ದಾರೆ.
ಮಹೇಶ್ ಬಾಬು ಪತ್ನಿ ನಮ್ರತಾಗೆ 'ಮೀನ್' ಎಂದ ಮಲೈಕಾ!
ವಿಜಯವಾಡ ಗೋದಾವರಿ ಜಿಲ್ಲೆ ನಿವಾಸಿ ಆಗಿರುವ ಭಾರ್ಗವ್ ಮಗುವಿನ ಆರೋಗ್ಯದ ಬಗ್ಗೆ ಮಹೇಶ್ ಬಾಬು ತಂಡ ಸಂಪರ್ಕಿಸಿ, ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಮಗುವಿನ ಸಂಪೂರ್ಣ ಆಸ್ಪತ್ರೆ ಹಾಗೂ ಚಿಕಿತ್ಸೆ ಖರ್ಚನ್ನು ಮಹೇಶ್ ಬಾಬು ಅವರೇ ನೋಡಿಕೊಂಡಿದ್ದಾರೆ. ಮಹೇಶ್ ಈ ರೀತಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.