48 ವರ್ಷದ ನಟಿ ಕೇಟ್ ವಿನ್ಸ್‌ಲೆಟ್ ತನ್ನ ಕಾಮಾಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಚಿಕಿತ್ಸೆಯು ಹಾರ್ಮೋನ್ ಅಸಮತೋಲನ ಸರಿಪಡಿಸಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಟೈಟಾನಿಕ್ ಎಂದ ಕೂಡಲೇ, ಟೈಟಾನಿಕ್ ಫಿಲಂ ನೆನಪಾಗುತ್ತದೆ. ಜೊತೆಗೆ ಹಡಗಿನೊಳಗಿನ ಬಂಡಿಯಲ್ಲಿ ಹೀರೋ ಜೊತೆಗೆ ಕಾಮೋತ್ಕರ್ಷದ ಸುಖ ಹಂಚಿಕೊಳ್ಳುವ ಚೆಲುವೆ ಹೀರೋಯಿನ್. ಈ ಸಿನಿಮಾ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಹೀರೋಯಿನ್ ಕೇಟ್ ವಿನ್ಸ್‌ಲೆಟ್ ಹಾಲಿವುಡ್‌ನ ಬಲು ಬೇಡಿಕೆಯ ತಾರೆಯಾಗಿಬಿಟ್ಟಳು. ಅದಿರಲಿ. ಆ ಸುಂದರಿ ಕೇಟ್ ವಿನ್ಸ್‌ಲೆಟ್‌ಗೆ ಈಗ 48ರ ಹರೆಯ. ಈಗಲೂ ಲೈಂಗಿಕವಾಗಿ ಸಕ್ರಿಯವಾಗಿದ್ದೇನೆ ಎಂಬುದು ಆಕೆಯ ಮಾತು. ಜೊತೆಗೆ, ಈ ವಯಸ್ಸಿನಲ್ಲಿ ತನ್ನ 'ಸೆಕ್ಸ್ ಡ್ರೈವ್' ಅನ್ನು ಸುಧಾರಿಸಲು ಟೆಸ್ಟೋಸ್ಟೆರಾನ್ ಥೆರಪಿಗೆ ಕೂಡ ಒಳಗಾಗುತ್ತಿರುವೆ ಎಂಬುದನ್ನು ಹಂಚಿಕೊಳ್ಳುತ್ತಾಳೆ.
ಕಾಮಕ್ಕೆ ಸಂಬಂಧಿಸಿ ಪ್ರತಿಯೊಬ್ಬರೂ ತಮ್ಮದೇ ಆದ ಬಯಕೆಗಳನ್ನು ಹೊಂದಿರುವುದು ನಿಜ. ಅದನ್ನು ಪಡೆಯಲು ತಮ್ಮದೇ ಆದ ಮಾರ್ಗಗಳನ್ನೂ ಹೊಂದಿದ್ದಾರೆ. ಇತ್ತೀಚೆಗೆ ಆಸ್ಕರ್ ವಿಜೇತ ನಟಿ ಕೇಟ್ ವಿನ್ಸ್‌ಲೆಟ್ ತನ್ನ ಕಾಮಾಸಕ್ತಿ ಸುಧಾರಿಸಲು ಕೈಗೊಂಡ ಚಿಕಿತ್ಸೆಯ ಬಗ್ಗೆ ನುಡಿದದ್ದು ಎಲ್ಲೆಡೆ ಸುದ್ದಿ ಮಾಡುತ್ತಿದೆ. ಇಂಗ್ಲೆಂಡ್ ಮೂಲದ 'ಹೌ ಟು ಫೇಲ್ ವಿತ್ ಎಲಿಜಬೆತ್ ಡೇ' ಪಾಡ್‌ಕ್ಯಾಸ್ಟ್‌ನಲ್ಲಿ ನಟಿ ಈ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ಬಗ್ಗೆ ಕೇಳುಗರ ಪ್ರಶ್ನೆಗೆ ಉತ್ತರಿಸಿದಳು.
undefined
ಹಾರ್ಮೋನ್ ಅಸಮತೋಲನದಿಂದ ಕಾಮಾಸಕ್ತಿಯಲ್ಲಿ ಇಳಿಕೆ ಉಂಟಾಗುತ್ತದೆ. "ಕೆಲವೊಮ್ಮೆ ಮಹಿಳೆಯರು ಕಾಮಾಸಕ್ತಿಯಲ್ಲಿ ನಿಜವಾದ ಅನಾಸಕ್ತಿ ಹೊಂದಿರುತ್ತಾರೆ. ಏಕೆಂದರೆ ಅವರ ಥೈರಾಯ್ಡ್‌ನಲ್ಲಿ ಏನಾದರೂ ಸಮಸ್ಯೆ ಇರುತ್ತದೆ. ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟ ಸರಿಯಾಗಿದ್ದರೆ ಸೆಕ್ಸ್ ಕೂಡ ಸರಿಯಾಗಿರುತ್ತದೆ. ಬಹಳಷ್ಟು ಜನರಿಗೆ ಇದು ತಿಳಿದಿಲ್ಲ. ಆದರೆ ಮಹಿಳೆಯರ ದೇಹದಲ್ಲಿಯೂ ಟೆಸ್ಟೋಸ್ಟೆರಾನ್ ಇದೆ. ಅದು ಖಾಲಿಯಾದಾಗ - ಮೊಟ್ಟೆಗಳಂತೆ - ಆಸಕ್ತಿ ಹೋಗುತ್ತದೆ. ಒಮ್ಮೆ ಅದು ಇಳಿದರೆ ಹಾರ್ಮೋನನ್ನು ಬದಲಾಯಿಸಬೇಕಾಗುತ್ತದೆ. ಅದೇನೂ ಕಷ್ಟವಲ್ಲ. ಅದರಿಂದ ನೀವು ಮತ್ತೆ ಲೈಂಗಿಕತೆಯನ್ನು ಅನುಭವಿಸುವಿರಿ. ನನಗೆ ಗೊತ್ತು" ಎನ್ನುತ್ತಾಳೆ ಕೇಟ್.
ಕೇಟ್ ಈಗಾಗಲೇ ಇಬ್ಬರು ಪುರುಷರನ್ನು ಮದುವೆಯಾಗಿ ಇಬ್ಬರಿಂದಲೂ ಡೈವೋರ್ಸ್ ಪಡೆದಿದ್ದಾಳೆ. ನಡುನಡುವೆ ಅನೇಕ ಡೇಟಿಂಗ್ ಗೆಳೆಯರು ಬಂದುಹೋಗಿದ್ದಾರೆ. ಅಂತೂ ಆಕೆಯ ಪ್ರಣಯಜೀವನ ಚೆನ್ನಾಗಿಯೇ ಇದೆ.
ಟೆಸ್ಟೋಸ್ಟೆರಾನ್ ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಟೆಸ್ಟೋಸ್ಟೆರಾನ್ ಲೈಂಗಿಕ ಹಾರ್ಮೋನ್. ಇದು ಪ್ರತಿಯೊಬ್ಬರಲ್ಲೂ ಕಂಡುಬರುತ್ತದೆ. ಆದಾಗ್ಯೂ, ಪುರುಷರಲ್ಲಿ ಇದರ ಪ್ರಮಾಣ ಹೆಚ್ಚು. ಮಹಿಳೆಯರಲ್ಲಿ ಆಂಡ್ರೊಜೆನ್ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕ ಆಸಕ್ತಿ ಮತ್ತು ಫಲವತ್ತತೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಹೊಸ ರಕ್ತ ಕಣಗಳನ್ನು ತಯಾರಿಸುತ್ತದೆ. ಅರಿವಿನ ಆರೋಗ್ಯ ಮತ್ತು ಕಾರ್ಯವನ್ನು ಬೆಂಬಲಿಸುತ್ತದೆ. ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಆದರೆ, ವಯಸ್ಸಾದಂತೆ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುತ್ತದೆ. ಇದನ್ನು ಹೆಚ್ಚಾಗಿ ಮಹಿಳೆಯರಲ್ಲಿ ಕಡೆಗಣಿಸಲಾಗುತ್ತದೆ. ಇದರಿಂದ ಮೂಳೆ ಸಾಂದ್ರತೆ ಕುಸಿತ, ಹಾರ್ಮೋನ್ ಅಸಮತೋಲನ, ಮೂಡ್‌ಸ್ವಿಂಗ್ ಆಗುತ್ತದೆ. ಕಡಿಮೆಯಾದ ಲೈಂಗಿಕ ಬಯಕೆ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವವನ್ನು ಉಂಟುಮಾಡಬಹುದು.
ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ಎಂದರೇನು?
ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ (ಟಿಆರ್‌ಟಿ) ಎನ್ನುವುದು ಕಡಿಮೆ ಟೆಸ್ಟೋಸ್ಟೆರಾನ್ ಹೊಂದಿರುವ ವ್ಯಕ್ತಿಗಳಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ವೈದ್ಯಕೀಯ ಚಿಕಿತ್ಸೆ. ಇದರಿಂದ ಆಗುವ ಪ್ರಯೋಜನ ಹೀಗಿದೆ:
ಹೆಚ್ಚಿದ ಕಾಮಾಸಕ್ತಿ: ಮಹಿಳೆಯರಿಗೆ TRTಯ ಸಾಮಾನ್ಯ ಪ್ರಯೋಜನಗಳಲ್ಲಿ ಒಂದು ಲೈಂಗಿಕ ಬಯಕೆ ಮತ್ತು ಪ್ರಚೋದನೆಯಲ್ಲಿ ಸುಧಾರಣೆ.
ಸುಧಾರಿತ ಮೂಡ್: ಕೆಲವು ಮಹಿಳೆಯರು TRT ಅನ್ನು ಪ್ರಾರಂಭಿಸಿದ ನಂತರ ಆನಂದದ ಮನಸ್ಥಿತಿ, ಖಿನ್ನತೆಯ ನಿವಾರಣೆ, ಆತಂಕವನ್ನು ಕಡಿಮೆ ಮಾಡಿಕೊಂಡಿರುವುದು ಕಂಡುಬಂದಿದೆ.
ಹೆಚ್ಚಿದ ಎನರ್ಜಿ: TRT ಒಟ್ಟಾರೆ ದೈಹಿಕ- ಲೈಂಗಿಕ ಶಕ್ತಿಯನ್ನು ಸುಧಾರಿಸಲು ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉತ್ತಮ ಗುಣಮಟ್ಟದ ಬೆಡ್‌ರೂಂ ಜೀವನಕ್ಕೆ ಕಾರಣವಾಗುತ್ತದೆ.
ವರ್ಧಿತ ಸ್ನಾಯುವಿನ ಶಕ್ತಿ: ಟೆಸ್ಟೋಸ್ಟೆರಾನ್ ಸ್ನಾಯುವಿನ ದ್ರವ್ಯರಾಶಿಯಲ್ಲಿ ಪಾತ್ರವನ್ನು ವಹಿಸುತ್ತದೆ; ಹೀಗಾಗಿ, TRT ಮಹಿಳೆಯರಿಗೆ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೇರೊಬ್ಬ ನಟಿಯ ಜೊತೆಗೆ ಅಭಿಷೇಕ್ ಬಚ್ಚನ್ ಎಂಗೇಜ್‌ಮೆಂಟ್ ವಿಡಿಯೋ ವೈರಲ್!
ಮೂಳೆ ಸಾಂದ್ರತೆ: ಟೆಸ್ಟೋಸ್ಟೆರಾನ್ ಮೂಳೆಯ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. TRT ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ನಷ್ಟದಿಂದ ರಕ್ಷಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಋತುಬಂಧದ ನಂತರ.
ಆದರೆ ಇದರ ಕೆಲವು ಅಪಾಯಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ತಿಳಿದಿರಬೇಕು. ಇದು ಋತುಚಕ್ರ, ಮೂಡ್ ಸ್ವಿಂಗ್ ಮತ್ತು ಇತರ ದೈಹಿಕ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು. ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿಯು ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಪ್ರಯೋಜನಕಾರಿ. ಆದರೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಇದನ್ನು ಎಚ್ಚರಿಕೆಯಿಂದ ಮಾಡಬೇಕು.
ನನಗೆ ಓದಲು ಹಾಗೂ ಬರೆಯಲು ಬರುವ ಏಕೈಕ ಭಾಷೆ ಕನ್ನಡ; ನಿಜ ಹೇಳಿದ್ಯಾಕೆ ನಿತ್ಯಾ ಮೆನನ್?