ಅರ್ಜುನ್ ಕಪೂರ್ ಬ್ರೇಕಪ್ ಖಚಿತಪಡಿಸಿದ ನಂತರ, ಮಲೈಕಾ ಅರೋರಾ 'ಹೃದಯ ಮತ್ತು ಆತ್ಮ'ದ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ. ಅರ್ಜುನ್ ಕಪೂರ್ ದೀಪಾವಳಿ ಪಾರ್ಟಿಯಲ್ಲಿ ತಾನು ಸಿಂಗಲ್ ಎಂದು ಹೇಳಿದ್ದಾರೆ.
ನಟ ಅರ್ಜುನ್ ಕಪೂರ್ ಅವರು ಮಲೈಕಾ ಅರೋರಾ ಅವರೊಂದಿಗಿನ ಬ್ರೇಕಪ್ ಖಚಿತಪಡಿಸಿದ ಒಂದು ದಿನದ ನಂತರ, ನಟಿ ಮಲೈಕಾ 'ಶುಭೋದಯ' ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 'ಹೃದಯ ಮತ್ತು ಆತ್ಮದ' ಕುರಿತು ಉಲ್ಲೇಖ ಮಾಡಿದ್ದಾರೆ. ಹೃದಯವನ್ನು ಒಂದು ಸೆಕೆಂಡ್ ಸ್ಪರ್ಶಿಸಿದರೆ ಜೀವಮಾನದವರೆಗೆ ಆತ್ಮವನ್ನು ಸ್ಪರ್ಶಿಸಬಹುದು ಶುಭೋದಯ ಎಂದು ಬರೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಮಲೈಕಾ ಅರೋರಾ ಜೊತೆ ಬ್ರೇಕಪ್ ಆಗಿದೆ ಅಂತ ಹೇಳ್ತಿರೋ ಸುದ್ದಿ ಬಗ್ಗೆ ಮೊದಲ ಬಾರಿಗೆ ನಟ ಅರ್ಜುನ್ ಕಪೂರ್ ಮಾತಾಡಿದ್ದರು. ಸೋಮವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಎನ್‌ಎಂಎಸ್ ನಾಯಕ ರಾಜ್ ಠಾಕ್ರೆ ಆಯೋಜಿಸಿದ್ದ ದೀಪಾವಳಿ ಪಾರ್ಟಿಗೆ 'ಸಿಂಗಮ್ ಅಗೈನ್' ಚಿತ್ರತಂಡದ ಜೊತೆ ಬಂದಿದ್ರು.
ಕೇವಲ ₹1000ಕ್ಕೆ 7 ಸುಂದರ ಹಾರಗಳು: ರಾಯಲ್ ಲುಕ್ ನಿಮ್ಮದಾಗಿಸಿ!
ಅಲ್ಲಿ ಕಾಯ್ತಿದ್ದ ಮೀಡಿಯಾ ಜನಗಳ ಮುಂದೆ ಫೋಟೋಗೆ ಪೋಸ್ ಕೊಡುವಾಗ, ಒಂದು ಪ್ರಶ್ನೆಗೆ ಉತ್ತರವಾಗಿ "ನಾನೀಗ ಸಿಂಗಲ್, ನೀವು ರಿಲ್ಯಾಕ್ಸ್ ಆಗಿ" (ಅಭಿ ಸಿಂಗಲ್ ಹೂನ್ ಮೈನ್ , ರಿಲ್ಯಾಕ್ಸ್) ಅಂತ ಅರ್ಜುನ್ ಹೇಳಿದ್ದಾರೆ. ಅರ್ಜುನ್ ಕಪೂರ್ ಹೀಗೆ ಹೇಳ್ತಿರೋ ಪಾಪರಾಜಿ ವಿಡಿಯೋ ಈಗಾಗಲೇ ವೈರಲ್ ಆಗಿದೆ.
ದೀಪಾವಳಿ ಪಾರ್ಟಿಯಲ್ಲಿ ಅರ್ಜುನ್ ಕಪೂರ್ ಜೊತೆ 'ಸಿಂಗಮ್ ಅಗೈನ್' ಚಿತ್ರದ ಸಹನಟರಾದ ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಭಾಗವಹಿಸಿದ್ದರು.
2018 ರಿಂದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟಿಂಗ್ ಮಾಡ್ತಿದ್ರು. 2017 ರಲ್ಲಿ ಅರ್ಬಾಜ್ ಖಾನ್‌ರಿಂದ ಡಿವೋರ್ಸ್ ಪಡೆದ ನಂತರ ಮಲೈಕಾ-ಅರ್ಜುನ್ ಸಂಬಂಧ ಬಾಲಿವುಡ್‌ಗೆ ಗೊತ್ತಾಯ್ತು. ಬಾಲಿವುಡ್‌ನ ಹಲವು ಪಾರ್ಟಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರ ವೆಕೇಶನ್ ಫೋಟೋಗಳು ವೈರಲ್ ಆಗ್ತಿದ್ದವು.
2025ರ ಮಹಾ ಕುಂಭಮೇಳ: ರೈಲು ಪ್ರಯಾಣ ಸುಲಭ, ಉಚಿತ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ವಯಸ್ಸಿನ ಅಂತರ ಬಗ್ಗೆ ಚರ್ಚೆಗಳು ಆಗಿತ್ತು. ಆದರೆ ಈ ಗಾಸಿಪ್‌ಗಳನ್ನ ಈ ಬಾಲಿವುಡ್ ಜೋಡಿ ತಳ್ಳಿಹಾಕ್ತಿತ್ತು. ಅರ್ಜುನ್-ಮಲೈಕಾ ಬ್ರೇಕಪ್ ಆಗಿದೆ ಅಂತ ಹಲವು ಬಾರಿ ಸುದ್ದಿ ಬಂದ್ರೂ, ಅದನ್ನ ಇಬ್ಬರೂ ನಿರಾಕರಿಸಿದ್ದರು.
ಆದರೆ ಈ ವರ್ಷ ಸ್ಥಿತಿ ಬೇರೆ. ಮಲೈಕಾ ಹುಟ್ಟುಹಬ್ಬಕ್ಕೆ ಅರ್ಜುನ್ ಶುಭಾಶಯ ಕೋರದೆ ಬೇರೆ ಪೋಸ್ಟ್ ಹಾಕಿದ್ದರಿಂದ ಬ್ರೇಕಪ್ ಸುದ್ದಿ ಹಬ್ಬಿತ್ತು. "ನೀನು ಯಾರು ಅಂತ ಮರೆಯಬೇಡ - ದಿ ಲಯನ್ ಕಿಂಗ್" ಅಂತ ಲಯನ್ ಕಿಂಗ್‌ನ ಮುಫಾಸ ಡೈಲಾಗ್ ಅನ್ನ ಅರ್ಜುನ್ ಹಂಚಿಕೊಂಡಿದ್ದರು.
ಇದೆಲ್ಲದರ ನಡುವೆ ಮಲೈಕಾ ತನ್ನ ರಜಾದಿನಗಳಲ್ಲಿ ನಿಗೂಢ ವ್ಯಕ್ತಿಯೊಂದಿಗೆ ಇರುವ ಫೋಟೋಗಳು ವೈರಲ್ ಆಗಿವೆ. ಅವನು ಯಾರೆಂದು ನಟಿ ಸ್ಪಷ್ಟಪಡಿಸಿಲ್ಲ.
ದೀಪಾವಳಿಗೆ ರಿಲೀಸ್ ಆಗ್ತಿರೋ 'ಸಿಂಗಮ್ ಅಗೈನ್' ಚಿತ್ರದಲ್ಲಿ ಅರ್ಜುನ್ ಕಪೂರ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಅರ್ಜುನ್ ಕಪೂರ್‌ಗೆ ರೋಹಿತ್ ಶೆಟ್ಟಿಯವರ ಸಿಂಗಮ್ ಎಗೇನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.