
ಕನ್ನಡತಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗು ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ 'ಪುಷ್ಪಾ 2' ಸಿನಿಮಾ (Pushpa 2) ಡಿಸೆಂಬರ್ 05 ರಂದು ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ. ಕಾರಣ, ಇದಕ್ಕೂ ಮೊದಲು ತೆರೆಗೆ ಬಂದಿದ್ದ ಪುಷ್ಪಾ ಸಿನಿಮಾ ಸೂಪರ್ ಹಿಟ್ ಆಗಿತ್ತು. 05 ಡಿಸೆಂಬರ್ 2024ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿರುವ 'ಪುಷ್ಪಾ 2' ಸಿನಿಮಾ ದ ಅಂಡರ್‌ಲೈನ್ 'ದಿ ರೂಲ್' ಅಂತಿದೆ. ಅದೇನೇ ಇರಲಿ, ಈ ಸಿನಿಮಾ ಬಹಳಷ್ಟು ನಿರೀಕ್ಷೆಯನ್ನಂತೂ ಹುಟ್ಟುಹಾಕಿದೆ.
ಪುಷ್ಪಾ ಸಿನಿಮಾ ಬಂದಾಗ ಯಾರಿಗೂ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಆದರೆ, ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಅಭೂತಪೂರ್ವ ಯಶಸ್ಸು ಪಡೆಯಿತು. ಆದರೆ, ಈ ಸಿನಿಮಾ ಬರುವುದು ಕೊಂಚ ತಡವಾಯಿತು. ಅದಕ್ಕೆ ಕಾರಣ, ಭಾರೀ ಬಜೆಟ್ ಹಾಗೂ ತುಂಬಾ ನಿರೀಕ್ಷೆ ಎನ್ನಲಾಗುತ್ತಿದೆ. ಆದರೆ, ನಿರೀಕ್ಷೆಗೆ ತಕ್ಕಂತೆ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಕಾರಣಕ್ಕಾಗಿಯೇ ಸಿನಿಮಾ ತಂಡ ಭಾರೀ ಭರವಸೆಯಿಂದ ಬೀಗುತ್ತಿದೆ ಎನ್ನಲಾಗ್ತಿದೆ.
ನನಗೆ ಓದಲು ಹಾಗೂ ಬರೆಯಲು ಬರುವ ಏಕೈಕ ಭಾಷೆ ಕನ್ನಡ; ನಿಜ ಹೇಳಿದ್ಯಾಕೆ ನಿತ್ಯಾ ಮೆನನ್?
ಇದೀಗ 'ಪುಷ್ಪಾ 2' ಚಿತ್ರತಂಡವು ಸಿನಿಪ್ರೇಕ್ಷಕರಿಗೆ ದೀಪಾವಳಿ ಶುಭಾಶಯ ತಿಳಿಸಿದೆ. ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾ ಪೋಸ್ಟರ್ ಹಂಚಿಕೊಂಡು, ಹ್ಯಾಪಿ ದೀಪಾವಳಿ ಎಂದು ಬರೆದು ಪೋಸ್ಟ್ ಮಾಡಿದೆ ಚಿತ್ರತಂಡ. 'ಈ ಚಿತ್ರದಲ್ಲಿ ಶ್ರೀವಲ್ಲಿ ಬಸುರಿ ಇರಬೇಕು' ಎಂಬ ಕಾಮೆಂಟ್ ಸೇರಿದಂತೆ ವಿಭಿನ್ನ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತಿವೆ. ಆದರೆ, 'ಪುಷ್ಪಾ- ದಿ ರೈಸ್' ನಲ್ಲಿ ಇದ್ದ ಕಥೆ ಇಲ್ಲಿ ಅದು ಹೇಗೆ ಮುಂದುವರಿದಿದೆಯೋ ಬಲ್ಲವರಾರು? ಇದೀಗ 'ಪುಷ್ಪಾ-2: ದಿ ರೂಲ್' ಆಗಿದೆ.
ಒಟ್ಟಿನಲ್ಲಿ, ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಪಾಲಿಗೆ ಡಿಸೆಂಬರ್ 5 ತುಂಬಾ ಮಹತ್ವದ್ದು. ಏಕೆಂದರೆ, ಈ ಚಿತ್ರದ ಬಗ್ಗೆ ಸಿನಿಪ್ರೇಕ್ಷಕರಿಗೆ ಮಾತ್ರವಲ್ಲ, ಸ್ವತಃ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅವರಿಗೂ ಕೂಡ ಅಪಾರ ನಿರೀಕ್ಷೆಯಿದೆ. ಆದರೆ, ನಿರೀಕ್ಷೆ ನಿಜವಾಗುತ್ತಾ ಅಥವಾ ತಲೆಕೆಳಗಾಗುತ್ತಾ ಎಂಬುದನ್ನು ಚಿತ್ರ ಬಿಡುಗಡೆ ಬಳಿಕವಷ್ಟೇ ನೋಡಬೇಕು. ಒಟ್ಟಿನಲ್ಲಿ, ಸಿನಿಪ್ರಿಯರಂತೂ ಮುಂಬರುವ ಪುಷ್ಪಾ-2 ಬಗ್ಗೆ ಅಪಾರ ನಿರೀಕ್ಷೆಯಿಟ್ಟು ಕಾಯುತ್ತಿದ್ದಾರೆ!
ಜಾರ್ಜಿಯಾ ವಿಡಿಯೋ ಬಗ್ಗೆ ಹೇಳಿದ ಸಾಯಿ ಪಲ್ಲವಿ; ನಟಿಗೆ ಹಳೆಯವೇ ಕಾಡ್ತಿರೋದು ಯಾಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.