ಕರಣ್​ ಜೋಹರ್​ಗೆ ಲಂಡನ್​ನಲ್ಲಿ ಅಂಕಲ್​ ಎನ್ನೋದಾ? ಸಿಟ್ಟಾದ ನಿರ್ದೇಶಕ... ವಿಡಿಯೋ ವೈರಲ್

By Suchethana D  |  First Published Jul 27, 2024, 12:19 PM IST

ಲಂಡನ್​ ಪ್ರವಾಸದಲ್ಲಿರುವ ನಿರ್ಮಾಪಕ ಕರಣ್​ ಜೋಹರ್​ಗೆ ಅಲ್ಲಿನ ಟಿಕ್​ಟಾಕರ್​ ಅಂಕಲ್​ ಎಂದು ಕರೆದಾಗ ರಿಯಾಕ್ಷನ್​ ಹೇಗಿತ್ತು ನೋಡಿ... ವಿಡಿಯೋ ವೈರಲ್​ ಆಗಿದೆ. 
 


ಅಂಕಲ್​, ಆಂಟಿ ಎನ್ನೋದು ಕೆಲವು ಕಡೆಗಳಲ್ಲಿ ಮಾಮೂಲು. ಬೆಂಗಳೂರಿನಂಥ ನಗರಗಳಲ್ಲಂತೂ ಅಜ್ಜ- ಅಜ್ಜಿಯಷ್ಟು ವಯಸ್ಸಾದವರು ಕೂಡ ತಮಗಿಂತ ಚಿಕ್ಕವರಿಗೂ ಆಂಟಿ-ಅಂಕಲ್​ ಎಂದೇ ಕರೆಯುತ್ತಾರೆ. ಅದು ಪ್ರೀತಿಯ ವಿಷಯವೇ ಇದ್ದಿರಬಹುದು. ಕೆಲವರು ತಮಾಷೆಗೆ ಕರೆದರೆ, ಮತ್ತೆ ಕೆಲವರು ಅದನ್ನೇ ರೂಢಿ ಮಾಡಿಕೊಂಡು ಬಿಟ್ಟಿರುತ್ತಾರೆ. ಆದರೆ ಹೀಗೆ ಕರೆದರೆ ಅದನ್ನು ಸಹಿಸದ ದೊಡ್ಡ ವರ್ಗವೇ ಇದೆ. ಬೇರೆ ಊರುಗಳಲ್ಲಿ ಹುಟ್ಟಿ ಬೆಳೆದವರಿಗೆ, ಅದರಲ್ಲಿಯೂ ಮಹಿಳೆಯರಿಗೆ ಯಾರಾದರೂ ಸ್ವಲ್ಪ ಹೆಚ್ಚಿಗೆ ವಯಸ್ಸಾದವರು ಆಂಟಿ ಎಂದು ಕರೆದರೆ ನಖಶಿಖಾಂತ ಉರಿ ಹತ್ತುವುದು ಇದೆ. ಕೆಲವರಿಗಂತೂ ಚಿಕ್ಕ ಮಕ್ಕಳು ಕರೆದರೂ ಸಿಟ್ಟು ಬರುವುದು ಇದೆ. ಇನ್ನು ಸೆಲೆಬ್ರಿಟಿಗಳಿಗೆ ಹೀಗೆ ಕರೆದರೆ ಸುಮ್ಮನೆ ಇರ್ತಾರೆಯೇ. ಇದಾಗಲೇ ಕೆಲವು ನಟಿಯರ ವಿಡಿಯೋಗಳು ಇದಾಗಲೇ ಸೋಷಿಯಲ್​  ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಇದೆ.

ಕೆಲ ದಿನಗಳ ಹಿಂದೆ ಬಾಲಕನೊಬ್ಬ ಮಾಧುರಿ ದೀಕ್ಷಿತ್​ ಅವರಿಗೆ ಆಂಟಿ ಎಂದು ಕರೆದಿದ್ದಾಗ ಮಾಧುರಿಗೆ ಕೋಪ ಬಂದಿತ್ತು.ಕೊನೆಗೆ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇದೆ ಎನ್ನುವುದನ್ನು ಅರಿತ ಅವರು ಕೋಪವನ್ನು ತಣ್ಣಗೆ ಮಾಡಿಕೊಂಡು ನಗುಮುಖದ ನಾಟಕ ಮಾಡಿದ್ದರು. ಆದರೆ ಅವರ ಮುಖದಲ್ಲಿ ಆಗ ಬದಲಾವಣೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಇದೀಗ ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್​ ಅವರ ವಿಡಿಯೋ ಒಂದು ವೈರಲ್​  ಆಗಿದೆ. ಇದರಲ್ಲಿ ಲಂಡನ್​ನ ಟಿಕ್​ಟಾಕ್​ ಸ್ಟಾರ್​ ಒಬ್ಬರು ಅಂಕಲ್​ ಎಂದು ಕರೆದದ್ದರಿಂದ ಕರಣ್​ ಅವರಿಗೆ ವಿಪರೀತ ಕೋಪ ಬಂದು ಅಲ್ಲಿಂದ ಹೊರಟು ಹೋದದ್ದನ್ನು ಇದರಲ್ಲಿ ನೋಡಬಹುದು.

Tap to resize

Latest Videos

ಗಗನಸಖಿ, ಪೈಲೆಟ್​ ವಿರುದ್ಧ ಸಾರಾ ಅಲಿ ಕೆಂಡಾಮಂಡಲ: ಕೂಲ್​ ನಟಿ ಗರಂ ಆಗಿದ್ದೇಕೆ? ವಿಡಿಯೋ ವೈರಲ್​

ಸದ್ಯ ಕರಣ್​ ಜೋಹರ್​ ಲಂಡನ್​ನಲ್ಲಿದ್ದಾರೆ. ಆಗ ಅವರನ್ನು  ಟಿಕ್​ಟಾಕ್​ ಕಂಟೆಂಟ್​ ಕ್ರಿಯೇಟರ್​ ಝೇನ್​ ತಡಾನಿ ನೋಡಿದ್ದಾರೆ. ಕರಣ್​ ಅವರು ಸಾಕಷ್ಟು ಫೇಮಸ್​ ಆಗಿರುವ ಕಾರಣ ಝೇನ್​ ಅವರಿಗೆ ಕರಣ್​ ಅವರನ್ನು ಮಾತನಾಡಿಸುವ ಹಂಬಲವಾಗಿದೆ. ಸುಮ್ಮನೇ ಮಾತನಾಡಿಸಿಬಿಟ್ಟರೆ ಇವರ ವಿಡಿಯೋ ವೈರಲ್​ ಆಗಬೇಕಲ್ಲಾ? ಅದಕ್ಕೆ ತಮಾಷೆ ಮಾಡಿದ್ದಾರೆ. ಕರಣ್​ ಜೋಹರ್​ ಅಲ್ಲಿದ್ದಾರೆ. ನಾನು ಅವರನ್ನು ಹೇಗೆ ಮಾತನಾಡಿಸಲಿ ಎಂದು ಮೊದಲು ಚಿಕ್ಕದಾಗಿ ವೀಕ್ಷಕರಿಗೆ ಕೇಳುವ ಹಾಗೆ ಗುಸುಗುಸು ಮಾಡಿದ್ದಾರೆ. ಮಿಸ್ಟರ್​ ಕರಣ್​ ಜೋಹರ್​ ಅನ್ನಲಾ, ಸರ್​ ಎನ್ನಲಾ, ಕರಣ್​ ಸರ್​ ಎನ್ನಲಾ.... ಹೀಗೆ ಹಲವಾರು ರೀತಿ ಹೇಳಿದ್ದಾರೆ.

ಕೊನೆಗೆ ಕರಣ್​ ಅವರು ಹತ್ತಿರ ಬಂದಾಗ, ಅವರ ಜೊತೆ ನಿಂತು ಹಾಯ್​ ಅಂಕಲ್​  ಎಂದಿದ್ದಾರೆ. ಅಲ್ಲಿಯವರೆಗೆ ಕ್ಯಾಮೆರಾಕ್ಕೆ ಪೋಸ್​ ಕೊಡ್ತಿದ್ದ ಕರಣ್​ ಅವರಿಗೆ ಸಿಟ್ಟು ಬಂದಿದೆ. ಅಂಕಲ್​ ಎಂದು ಕರೆಯುತ್ತೀರಾ ಎಂದು ಸಿಟ್ಟು ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.  ಇದರ ವಿಡಿಯೋ ವೈರಲ್​ ಆಗಿದೆ. ಇದಕ್ಕೆ ಝೇನ್​ ಅವರು ಆರಂಭದಲ್ಲಿ  ‘ಓ ಮೈ ಗಾಡ್​.. ಅಲ್ಲಿ ಕರಣ್​ ಇದ್ದಾರೆ.  ಅವರನ್ನು ನಾನು ಏನೆಂದು ಕರೆಯಲಿ? ಕೆಜೋ? ಕರಣ್​? ಕರಣ್​ ಜೋಹರ್​? ಮಿಸ್ಟರ್​ ಜೋಹರ್​? ಮಿಸ್ಟರ್​ ಕರಣ್​? ಎಂದೆಲ್ಲಾ ಪ್ರಶ್ನಿಸಿ ಆಮೇಲೆ ಹತ್ತಿರ ಬಂದಾಗ ಹಾಯ್​ ಅಂಕಲ್​ ಎಂದು ಕರೆದಿದ್ದನ್ನು ನೋಡಬಹುದು.
 
ಇದನ್ನು ತಮಾಷೆಗೆ ಮಾಡಿದ್ದು, ಸೋಷಿಯಲ್​  ಮೀಡಿಯಾದಲ್ಲಿ ಶೇರ್​ ಕೂಡ ಮಾಡಿಕೊಂಡಿದ್ದಾರೆ. ‘ಒಟ್ಟಿಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಂಕಲ್​’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದು ತಮಾಷೆ ಎಂದು ಅರಿತಿರುವ ಕರಣ್​ ಅವರು,  ‘ನಿಮ್ಮನ್ನು ಭೇಟಿಯಾಗಿದ್ದಕ್ಕೆ ಖುಷಿ ಆಯಿತು’ ಎಂದು ರಿಯಾಕ್ಟ್​ ಮಾಡಿದ್ದಾರೆ. ಕೆಲವರು ಝೇನ್​ ಅವರಿಗೆ ನೀವು ಮಾಡಿದ್ದು ಸರಿಯಿಲ್ಲ ಎಂದು ಹೇಳುತ್ತಿದ್ದರೆ, 52 ವರ್ಷ ವಯಸ್ಸು ಆಗಿದೆ, ಅಂಕಲ್​ ಎಂದ್ರೆ ತಪ್ಪಿಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. 

ಫೋಟೋ ತೆಗೆದು ಸಿಕ್ಕಿಬಿದ್ದ ಬಿಗ್​ಬಾಸ್​ ವಿನ್ನರ್​! ಹಾವಿನ ವಿಷ, ರೌಡಿಸಂ ಬಳಿಕ ಇದೇನಿದು ಮತ್ತೆ ಗಲಾಟೆ?

 
 
 
 
 
 
 
 
 
 
 
 
 
 
 

A post shared by @zanethad

click me!