
ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಪುತ್ರಿಯಾಗಿರುವ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೂಲ್ ನಟಿ ಎಂದೇ ಫೇಮಸ್ ಆಗಿರುವವರು. ಸಾರಾ ಎಂದರೆ ಸಿಂಪಲ್ ಎಂದೇ ಖ್ಯಾತಿ ಪಡೆದವರು. ಸೋಲಿನ ಹಾದಿಯಲ್ಲಿದ್ದ ಸಾರಾ ಅಲಿ, ಇತ್ತೀಚೆಗೆ ಬಿಡುಗಡೆಗೊಂಡ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೂಲಕ ಸುಧಾರಿಸಿಕೊಂಡಿದ್ದಾರೆ. ಹೀಗಿದ್ದರೂ ಆಕೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಈಕೆ ಫೋಟೋ ಮತ್ತು ಒಂದಿಷ್ಟು ಗಾಸಿಪ್ಗಳಿಂದ ಎಷ್ಟೇ ಟ್ರೋಲ್ ಆಗುತ್ತಿದ್ದರೂ ಈಕೆಯನ್ನು ಪ್ರೀತಿಸುವ ಒಂದು ವರ್ಗವೂ ಇದೆ. ಹೆಚ್ಚಿನವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಳೆದ ವಾರ ಈಕೆ ಬೀಚ್ (Beach) ಒಂದರಿಂದ ಆಟೋದಲ್ಲಿ ಹೋದ ಸಂದರ್ಭದಲ್ಲಿಯೂ ಹಲವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೆ. ಅದಾದ ಬಳಿಕ ವೈರಲ್ ಆಗಿದ್ದ ವಿಡಿಯೋದಲ್ಲಿ ನಟಿ, ನಡೆದುಕೊಂಡು ಹೋಗುವುದನ್ನು ನೋಡಬಹುದಾಗಿತ್ತು. ರಸ್ತೆ ಬದಿ ಅಂಗಡಿಯಲ್ಲಿ ಸಾಮಾನ್ಯರಂತೆ ತೆರಳಿ ಬಟ್ಟೆ ಖರೀದಿ ಮಾಡಿದ್ದರು. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದರು. ಸಾರಾ ಅವರನ್ನು ಎಲ್ಲರೂ ಹೊಗಳಿದ್ದಾರೆ. ಈ ಸರಳತೆ ಹೀಗೆಯೇ ಮುಂದುವರಿಯಲಿ ಎಂದು ಅನೇಕರು ಹೇಳಿದ್ದರು.
ಸದ್ಯ ನಟಿ ಸಕತ್ ಸುದ್ದಿ ಮಾಡುತ್ತಿರುವುದು ಹಿಂದೂ ಧರ್ಮದ ಪಾಲನೆ ಮಾಡುತ್ತಿರುವ ಕಾರಣದಿಂದ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ಕೊಟ್ಟು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುವುದೂ ಇದೆ. ಕೇದಾರನಾಥ, ಅಮರನಾಥ ಯಾತ್ರೆ ಮಾಡಿ ಬಂದಿದ್ದಾರೆ. ಶಿವಧ್ಯಾನದಲ್ಲಿಯೂ ತೊಡಗಿಸಿಕೊಂಡು ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾಗ ಕೆಲವರು ಸಾಕಷ್ಟು ಟೀಕೆ ಕೂಡ ಮಾಡಿದ್ದರು. ಇದೀಗ ನಟಿ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗುತ್ತಿದೆ. ಇದೀಗ ನಟಿ ವಿಮಾನದೊಳಗೆ ಗರಂ ಗರಂ ಆಗಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಗಗನಸಖಿಯರನ್ನು ಗುರಾಯಿಸಿ ನಟಿ ವಿಮಾನದ ಸೀಟಿನಿಂದ ಎದ್ದು ಹೋಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ಸಾರಾ ಅಲಿಖಾನ್? ಸೈಫ್ ಪುತ್ರಿಯ ಕೈಹಿಡೀತೀರೋದ್ಯಾರು?
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸಾರಾ ಅಲಿ ಖಾನ್ ಅವರ ವಿಮಾನದಲ್ಲಿ ಕುಳಿತಿರುವುದನ್ನು ಕಾಣಬಹುದು. ಗುಂಗುರು ಕೂದಲಿನ ಸಾರಾ ಬಹು ದುಬಾರಿಯ ಪಿಂಕ್ ಡ್ರೆಸ್ ಧರಿಸಿರುವುದನ್ನು ನೋಡಬಹುದು. ಆದರೆ ಸಾರಾ ಪೈಲಟ್ ಮತ್ತು ಏರ್ ಹೋಸ್ಟೆಸ್ ಅನ್ನು ಕೋಪದಿಂದ ನೋಡುತ್ತಿರುವುದನ್ನಷ್ಟೇ ಇದರಲ್ಲಿ ನೋಡಬಹುದಾಗಿದ್ದು, ನಂತರ ನಟಿ ಎದ್ದು ಹೋಗಿರುವುದನ್ನು ಕಾಣಬಹುದು. ಅದರೆ ಅಸಲಿಗೆ ಆಗಿದ್ದೇನೆಂದರೆ, ಗಗನಸಖಿಯೊಬ್ಬರು ಆಕಸ್ಮಿಕವಾಗಿ ಸಾರಾ ಅವರ ದುಬಾರಿ ಡ್ರೆಸ್ ಮೇಲೆ ಜ್ಯೂಸ್ ತುಂಬಿದ್ದ ಲೋಟವನ್ನು ಚೆಲ್ಲಿಬಿಟ್ಟಿದ್ದಾರೆ. ಗಗನಸಖಿ ಕ್ಷಮೆ ಕೋರಿದರೂ, ದುಬಾರಿ ಡ್ರೆಸ್ ಮೇಲೆ ಜ್ಯೂಸ್ ಬಿದ್ದುದರಿಂದ ಸಾರಾ ಕೆಂಡಾಮಂಡಲ ಆದರು. ಸಾರಾ ಅವರ ಮುಖವು ಕೋಪದಿಂದ ಕೆಂಪಾಯಿತು. ಪೈಲಟ್ ಮತ್ತು ಗಗನಸಖಿಯ ಇಬ್ಬರ ವಿರುದ್ಧವೂ ಗರಂ ಆದ ಸಾರಾ ಅಲ್ಲಿಂದ ಎದ್ದು ಹೋಗಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ. ಇದು ಸಿನಿಮಾ ಕ್ಲಿಪ್ಪಿಂಗ್ ಇರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದರೆ, ಯಾವುದೋ ಜಾಹೀರಾತಿನ ಶೂಟಿಂಗ್ ಇರಬಹುದು ಎನ್ನುತ್ತಿದ್ದಾರೆ ಮತ್ತೆ ಕೆಲವರು. ಆದರೆ ಅದೇನು ಎನ್ನುವುದು ಸ್ಪಷ್ಟವಾಗಿಲ್ಲ. ಇದು ನಿಜವೋ, ಶೂಟಿಂಗ್ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಸಾರಾ ಅಲಿ ಖಾನ್ ಸಿನಿಮಾದ ಕುರಿತು ಹೇಳುವುದಾದರೆ, ಇತ್ತೀಚೆಗೆ ಹೋಮಿ ಅದಾಜಾನಿಯಾ ನಿರ್ದೇಶನದ ಮರ್ಡರ್ ಮುಬಾರಕ್‌ನಲ್ಲಿ ಬಿಡುಗಡೆಯಾಯಿತು. ಇದಕ್ಕಾಗಿ ಸಾರಾ ಅವರಿಗೆ ಬಹುದೊಡ್ಡ ಬ್ರೇಕ್ ಕೂಡ ಸಿಕ್ಕಿದೆ. ಇದನ್ನು ಹೊರತುಪಡಿಸಿದರೆ ಯೇ ವತನ್ ಮೇರೆ ವತನ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಮೆಚ್ಚುಗೆ ಪಡೆದಿದ್ದಾರೆ. ಈ ಚಿತ್ರದಲ್ಲಿ, ಸ್ವಾತಂತ್ರ್ಯ ಪೂರ್ವದ ಯುಗದಲ್ಲಿ, ಸಾರಾ ಬಾಂಬೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಉಷಾ ಪಾತ್ರದಲ್ಲಿ ನಟಿಸಿದ್ದಾರೆ, ಅವರು ಭೂಗತ ರೇಡಿಯೊ ಕೇಂದ್ರವನ್ನು ಸ್ಥಾಪಿಸುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ನಿಗೂಢ ಸಾವಿಗೆ ಮರುಜೀವ! ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ
ಇದಲ್ಲದೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಸಿಖ್ಯ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಆಕ್ಷನ್ ಕಾಮಿಡಿ ಚಿತ್ರದಲ್ಲಿ ಸಾರಾ ಅಲಿ ಖಾನ್ ಮೊದಲ ಬಾರಿಗೆ ಆಯುಷ್ಮಾನ್ ಖುರಾನಾ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಹೊಸ ಜೋಡಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಆದರೂ ಚಿತ್ರದ ಬಗ್ಗೆ ನಿರ್ದಿಷ್ಟ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಇದಲ್ಲದೇ ಅನುರಾಗ್ ಬಸು ನಿರ್ದೇಶನದ ಮೆಟ್ರೋ ಇನ್ ಡಿನೋ ಚಿತ್ರದಲ್ಲಿ ಸಾರಾ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ, ಅವರು ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್ ಮತ್ತು ನೀನಾ ಗುಪ್ತಾ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.