ಸಚಿವನೊಂದಿಗೆ ಪತ್ನಿ ಅಕ್ರಮ ಸಂಬಂಧ: ಜೋಡಿ ಕೊಲೆ ಮಾಡಿದ್ದ ಸಂಜಯ್​ ದತ್​! ನಟನಿಂದಲೇ ರಿವೀಲ್

Published : Jul 26, 2024, 02:11 PM ISTUpdated : Jul 26, 2024, 03:48 PM IST
ಸಚಿವನೊಂದಿಗೆ ಪತ್ನಿ ಅಕ್ರಮ ಸಂಬಂಧ:  ಜೋಡಿ ಕೊಲೆ ಮಾಡಿದ್ದ ಸಂಜಯ್​ ದತ್​! ನಟನಿಂದಲೇ ರಿವೀಲ್

ಸಾರಾಂಶ

ಸಚಿವನ ಜೊತೆ ಅನೈತಿಕ  ಸಂಬಂಧ ಇಟ್ಟುಕೊಂಡಿದ್ದ ಪತ್ನಿ ಮತ್ತು ಸಚಿವ ಇಬ್ಬರನ್ನೂ ಕೊಲೆ ಮಾಡಿರುವ ಶಾಕಿಂಗ್​ ವಿಷಯವನ್ನು ನಟ ಸಂಜಯ್​ ದತ್​ ರಿವೀಲ್​ ಮಾಡಿದ್ದಾರೆ.  ಏನಿದು ಘಟನೆ?  

ಬಾಲಿವುಡ್​ ನಟ ಸಂಜಯ್​ ದತ್​ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ. ಒಂದರ ಮೇಲೊಂದರಂತೆ ಹಿಟ್​ ಚಿತ್ರಗಳನ್ನು ನೀಡಿ ಸೂಪರ್​ ಸ್ಟಾರ್​ ಎನಿಸಿಕೊಂಡಿದ್ದರೂ, ಇವರ ಬದುಕಲ್ಲಿ ಎಲ್ಲವೂ ಟ್ರಾಜಡಿಯೇ. 1987 ರಲ್ಲಿ ರಿಚಾ ಶರ್ಮಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಒಂಬತ್ತು ವರ್ಷಗಳ ನಂತರ ರಿಚಾ ಬ್ರೈನ್ ಟ್ಯೂಮರ್‌ನಿಂದ ಸಾವನ್ನಪ್ಪಿದರು. ಆ ನಂತರ ಸಂಜಯ್ ಮತ್ತೆ ಒಂಟಿಯಾದರು. ಅದರ ನಂತರ ಅವರು  ಮತ್ತೆ ಮದುವೆಯಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು ವಿಚ್ಛೇದನ ಪಡೆದರು. 'ಮುನ್ನಾಭಾಯಿ ಎಂಬಿಬಿಎಸ್' (Munnabai MBBS) ಚಿತ್ರದ ಮೂಲಕ ಸಂಜಯ್ ಮತ್ತೊಮ್ಮೆ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡಿದರು. ಇದು ಸೂಪರ್​ ಹಿಟ್​ ಆಗುತ್ತಲೆ,  2008 ರಲ್ಲಿ, ಸಂಜು ಮಾನ್ಯತಾ ಅವರನ್ನು ವಿವಾಹವಾದರು. ನಂತರ ಬಾಲಿವುಡ್​ನಲ್ಲಿ  ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಸಂಜಯ್ ಜೀವನಾಧಾರಿತ ‘ಸಂಜು’ ಸಿನಿಮಾ ಕೂಡ ರಿಲೀಸ್​ ಆಯಿತು.

ಹೀಗೆ ಒಂದರ ಮೇಲೊಂದು ನೋವು ಅನುಭವಿಸುತ್ತಿರುವ ಸಂಜಯ್​ ದತ್​ ತಮ್ಮ ಈ ಎಲ್ಲಾ ನೋವುಗಳ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಕಾಫಿ ವಿತ್​ ಕರಣ್​ ಷೋನಲ್ಲಿ ನಟ ತಮ್ಮ ಜೀವನದ ಬಗ್ಗೆ ಮಾತನಾಡಿದ್ದರು. ಅಲ್ಲಿ ತಮ್ಮ ಕರಾಳ ಜೀವನದ ಚಿತ್ರಣವನ್ನು ತೆರೆದಿಟ್ಟಿದ್ದಾರೆ.  ತಾಯಿ ನರ್ಗೀಸ್ ದತ್, ಮೊದಲ ಪತ್ನಿ ರಿಚಾ ಶರ್ಮಾ ಅವರನ್ನು ಕಳೆದುಕೊಂಟಿದ್ದದು,  ಯಾವುದ್ಯಾವುದೋ ಕಾರಣಕ್ಕೆ ಬಂಧನ, ಜೈಲುವಾಸ, ಇವೆಲ್ಲವನ್ನೂ ಅನುಭವಿಸುತ್ತಿರುವುದು ಏಕೆ ಎಂದು ಈ ಷೋನಲ್ಲಿ ನಟ ಹೇಳಿದ್ದಾರೆ. ಅಷ್ಟಕ್ಕೂ ನಟ ಇಷ್ಟೊಂದು ನೋವು ಅನುಭವಿಸುತ್ತಿರುವುದಕ್ಕೆ ಕಾರಣ ಅವರ ಮಾಡಿರುವ ಕೊಲೆಯಂತೆ! ಹೌದು. ಸಚಿವನೊಬ್ಬನ ಜೊತೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಆ ಲವರ್​ ಇಬ್ಬರನ್ನೂ ಕೊಲೆ ಮಾಡಿದ್ದರಿಂದ ಹೀಗೆಲ್ಲಾ ಅನುಭವಿಸುತ್ತಿರುವುದಾಗಿ ನಟ ಹೇಳಿಕೊಂಡಿದ್ದಾರೆ. 

ನೀನು ನನ್ನನ್ನೇ ಲವ್​ ಮಾಡೋದು ಚೆನ್ನಾಗಿ ಗೊತ್ತು ಎಂದಳಲ್ಲಾ ನಿವೇದಿತಾ! ಮಂಚದಲ್ಲಿ ಕುಳಿತು ಏನಿದು ಹೊಸ ಸ್ಟೋರಿ?


ಅಷ್ಟಕ್ಕೂ ಅವರು ಹೇಳುತ್ತಿರುವುದು ಹಿಂದಿನ ಜನ್ಮದ ಬಗ್ಗೆ! ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ತಮ್ಮನ್ನು ಸುತ್ತುಕೊಂಡಿದೆ. ಈ ಜನ್ಮದಲ್ಲಿ ಇಷ್ಟೊಂದು ನೋವು ಅನುಭವಿಸುತ್ತಿದ್ದೇನೆ ಎಂದಿದ್ದಾರೆ. ತಾಯಿಯ ಹಠಾತ್ ಸಾವಿನ ನಂತರ   ತುಂಬಾ ಒಂಟಿಯಾದೆ. ಡ್ರಗ್ಸ್ ಚಟಕ್ಕೆ ದಾಸನಾದೆ. ಹಾಗಾಗಿ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.  ಹಲವರ ಸಾವನ್ನು ನಾನು  ನೋಡಬೇಕಾಯಿತು. ಎಲ್ಲವನ್ನೂ ಕಳೆದುಕೊಳ್ಳಲು ಕಾರಣ, ನನ್ನ ಹಿಂದಿನ ಜನ್ಮದ ಪಾಪದ ಫಲ ಎಂದಿದ್ದಾರೆ. ಮದ್ರಾಸ್ ಸಮೀಪದ ಹಳ್ಳಿ ಶಿವನಾರಿಯಲ್ಲಿ  ತಮ್ಮ ಹಿಂದಿನ ಭವಿಷ್ಯ ಕೇಳಿಕೊಂಡಿದ್ದೆ ಎಂದಿದ್ದಾರೆ.  ಇದು ಚೆನ್ನೈನಿಂದ  ಎರಡು ಗಂಟೆ ಪ್ರಯಾಣ.  ಸಣ್ಣ ಹಳ್ಳಿ. ಅಲ್ಲಿ ಹಸ್ತ ನೋಡಿ ಭವಿಷ್ಯ ಹೇಳುತ್ತಾರೆ. ಅಲ್ಲಿ ತಾವು ಹಿಂದಿನ ಜನ್ಮದ ವಿಷಯ ಕೇಳಿದ್ದು ಎಂದಿದ್ದಾರೆ.

ಸಂಜಯ್​ ದತ್​ ಹೇಳಿದಂತೆ,  ಅಶೋಕ ಸಾಮ್ರಾಜ್ಯವಿದ್ದ ಕಾಲದಲ್ಲಿ ನಡೆದ ಘಟನೆ ಇದು. ಆ ಜನ್ಮದಲ್ಲಿ ಇವರು ಮಹಾರಾಜನಾಗಿದ್ದರಂತೆ. ಮಹಾರಾಣಿಯಾದಳು ಆಸ್ಥಾನದ ಸಚಿವನ (ಮಂತ್ರ) ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಅದಕ್ಕಾಗಿ ಗಂಡನನ್ನು ಅಂದರೆ ಸಂಜಯ್​ ದತ್​ ಅವರನ್ನು ಸಾಯಿಸಲು ತುಂಬಾ ಪ್ರಯತ್ನ ಮಾಡುತ್ತಿದ್ದಳಂತೆ. ಇದೇ ಕಾರಣಕ್ಕೆ ಪತಿಯನ್ನು  ಯುದ್ಧಕ್ಕೆ ಕಳುಹಿಸಿದಳಂತೆ. ಹೀಗೆ ಹೇಳುತ್ತಲೇ ಅವರು ಜ್ಯೋತಿಷಿ ಹೇಳಿದ ವಿಷಯಗಳನ್ನು ವಿವರಿಸಿದ್ದಾರೆ. 'ನನ್ನ ಪತ್ನಿಗೆ ನಾನು ಸಾಯಬೇಕಿತ್ತು. ಆದರೆ ಯುದ್ಧದಲ್ಲಿ ಗೆಲುವು ಸಾಧಿಸಿದೆ. ಅಷ್ಟೊತ್ತಿಗಾಗಲೇ ಮಹಾರಾಣಿ ನನ್ನ ಪತ್ನಿಯ ಕುತಂತ್ರ ತಿಳಿಯಿತು. ಇದೇ ಕಾರಣಕ್ಕೆ ಪತ್ನಿ ಮತ್ತು ಸಚಿವ ಇಬ್ಬರನ್ನೂ ಕೊಲೆ ಮಾಡಿದೆ. ಜೋಡಿ ಕೊಲೆ ನನ್ನಿಂದ ನಡೆದು ಹೋಯಿತು. ಇದೇ ಕಾರಣಕ್ಕೆ ಈ ಜನ್ಮದಲ್ಲಿ ಇಷ್ಟೊಂದು ಸಾವುಗಳು ಸಂಭವಿಸುತ್ತಿದೆ ಎಂದಿದ್ದಾರೆ.  ಹಳೆಯ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 
 

ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರ ತಿಳಿಸಿದ ಚಂದನ್​ ಶೆಟ್ಟಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!