ಬಾಬಾ ಸಿದ್ದಿಕಿ ಶೂಟೌಟ್‌ನಿಂದ ಹೆಚ್ಚಾಯ್ತು ಸಲ್ಮಾನ್ ಹಾರ್ಟ್​ಬೀಟ್; ಫ್ರೆಂಡ್‌ಶಿಪ್‌ನಿಂದ ಇಷ್ಟೆಲ್ಲಾ ಆಯ್ತಾ?

By Vaishnavi Chandrashekar  |  First Published Oct 15, 2024, 5:22 PM IST

ಮತ್ತೆ ಸಲ್ಮಾನ್ ಖಾನ್‌ಗೆ ಡವ ಡವ! ಶೂಟೌಟ್‌ ಶಬ್ಧ ಕೇಳುತ್ತಿದ್ದಂತೆ ಮನೆ ಬಳಿ ಭದ್ರತೆ ಫಿಕ್ಸ್‌.......


ಮಹಾರಾಷ್ಟ್ರದ  ಮಾಜಿ ಸಚಿವ  ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಕೊಲೆ ಇಡೀ ಮುಂಬೈನ ಬೆಚ್ಚಿಬೀಳಿಸಿದೆ. ದಸರಾ ಹಬ್ಬದ ದಿನ ನಡುರಸ್ತೆಯಲ್ಲಿ ನಡೆದ ಈ ಹತ್ಯಾಕಾಂಡ ಎಲ್ಲರಿಗಿಂತ ಹೆಚ್ಚಾಗಿ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್​ಗೆ ಭಯ ತಂದಿದೆ. ಯಾಕಂದ್ರೆ ಸಿದ್ದಿಕಿ ಸಲ್ಲುಮಿಯಾಗೆ ಆಪ್ತರಾಗಿದ್ದವರು. ಅಷ್ಟೇ ಅಲ್ಲ ಸಲ್ಮಾನ್​ಗೆ ಜೀವ ಬೆದರಿಕೆ ಹಾಕಿದ ಬಿಷ್ಣೋಯ್​ ಗ್ಯಾಂಗ್​ನವರೇ ಈ ಕೊಲೆ ಮಾಡಿದ್ದಾರೆ ಎನ್ನಲಾಗ್ತಾ ಇದೆ. ಯೆಸ್!! ಮಹಾರಾಷ್ಟ್ರದಲ್ಲಿ ನಡೆದ ಎಕ್ಸ್ ಮಿನಿಸ್ಟರ್ ಬಾಬಾ ಸಿದ್ದಿಕಿ ಹತ್ಯೆ ಜಸ್ಟ್ ರಾಜಕೀಯ ಲೋಕದಲ್ಲಷ್ಟೇ ಅಲ್ಲ ಸಿನಿಲೋಕದಲ್ಲೂ ತಲ್ಲಣ ಎಬ್ಬಿಸಿದೆ. ಯಾಕಂದ್ರೆ ಎನ್ ಸಿ ಪಿ ನಾಯಕ ಬಾಬಾ ಸಿದ್ದಿಕಿ ಸಿನಿರಂಗದವರಿಗೂ ಆಪ್ತನಾಗಿದ್ದವರು. ಅದ್ರಲ್ಲೂ ಸಲ್ಮಾನ್ ಖಾನ್​ಗೆ ಬಾಬಾ ಸಿದ್ದಿಕಿ ಸಿಕ್ಕಾಪಟ್ಟೆ ಆತ್ಮೀಯ. ಸಿದ್ದಿಕಿ ರಂಜಾನ್ ಸಮಯದಲ್ಲಿ ಆಯೋಜಿಸೋ ಇಫ್ತಾರ್ ಕೂಟಗಳಲ್ಲಿ ಸಲ್ಲು ತಪ್ಪದೇ ಭಾಗಿಯಾಗ್ತಾ ಇದ್ರು.

ಹೌದು! ಕೆಲ ವರ್ಷಗಳ ಹಿಂದೆ ಪಾರ್ಟಿಯೊಂದರಲ್ಲಿ ನಡೆದ ಕಿರಿಕ್​ನಿಂದ ಸಲ್ಮಾನ್ ಮತ್ತು ಶಾರೂಖ್ ಖಾನ್ ಸಂಬಂಧ ಹಳಸಿತ್ತು. ಇಬ್ಬರು ಮಾತು ನಿಲ್ಲಿಸಿದ್ರು.. ಪರಸ್ಪರ ಮುಖಾಮುಖಿ ಆಗ್ತಾ ಇರಲಿಲ್ಲ. ಆಗ ಈ ಇಬ್ಬರೂ ದಿಗ್ಗರಜನ್ನು ಒಟ್ಟಿಗೆ ಇಫ್ತಾರ್ ಕೂಟಕ್ಕೆ ಕರೆಸಿ ಕಾಂಪ್ರಮೈಸ್ ಮಾಡಿಸಿದ್ರು ಇದೇ ಬಾಬಾ ಸಿದ್ದಿಕಿ.ಬಾಬಾ ಸಿದ್ದಿಕಿ ಮೇಲೆ ಶೂಟ್ ಮಾಡಿ ಕೊಲೆ ಮಾಡಿದವರ ಪೈಕಿ ಇಬ್ಬರ ಬಂಧನ ಆಗಿದೆ. ಈ ಇಬ್ಬರು ಕೂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ಗೆ ಸೇರಿದವರು ಎನ್ನಲಾಗ್ತಾ ಇದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ಲಾರೆನ್ಸ್ ಬಿಷ್ಣೋಯ್​ನಿಂದ ಸಲ್ಲು ಮಿಯಾಗೆ ಜೀವ ಬೆದರಿಕೆ ಇದೆ. ಈಗಲೂ ಸಲ್ಲು ಮಿಯಾ ಇದೇ ಬಿಷ್ಣೋಯ್ ಗ್ಯಾಂಗ್ ಭಯದಿಂದಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕ್ತಾ ಇದ್ದಾರೆ.

Tap to resize

Latest Videos

undefined

ಅಮ್ಮ ಓಡಾಡ್ಕೊಂಡು ಆರೋಗ್ಯವಾಗಿರ ಬೇಕು ಅಂತ ದಿನ ದೇವರಲ್ಲಿ ಬೇಡಿಕೊಳ್ಳುತ್ತೀನಿ; ಕಣ್ಣೀರಿಟ್ಟ ಬಿಗ್ ಬಾಸ್ ತನಿಷಾ!

ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಸ್ನೇಹಿತರು ನನಗೆ ಶತ್ರುಗಳು ಅಂತ ಹೇಳಿದ್ದ. ಸಲ್ಮಾನ್ ಅಷ್ಟೇ ಅಲ್ಲ ಅವನ ಆಪ್ತರನ್ನೂ ಮುಗಿಸ್ತಿನಿ ಅಂತ ಹೇಳಿದ್ದ. ಇದೀಗ ಸಿದ್ದಿಕಿ ಹತ್ಯೆ ಇದೇ ಕಾರಣಕ್ಕೆ ನಡೀತಾ ಅನ್ನೋ ಅನುಮಾನ ಮೂಡಿದೆ. ಈ ಆಂಗಲ್​ನಿಂದಲೂ ಮುಂಬೈ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.ಕಳೆದ ಏಪ್ರಿಲ್​​ನಲ್ಲಿ ಸಲ್ಮಾನ್​ ಖಾನ್​ರ ಬಾಂದ್ರಾ ನಿವಾಸದ ಬಳಿ ನಡೆದ ಶೂಟೌಟ್​ ಬಳಿಕ ಭದ್ರತೆ ಹೆಚ್ಚಿಸಲಾಗಿತ್ತು. ಇದೀಗ ಬಾಬಾ ಸಿದ್ದಿಕಿ ಮರ್ಡರ್ ನಂತರ ಮತ್ತಷ್ಟು ಸೆಕ್ಯೂರಿಟಿ ಹೆಚ್ಚಿಸಲಾಗಿದೆ. ಸದ್ಯ ಬಿಗ್ ಬಾಸ್ ಶೋ ಶೂಟಿಂಗ್​ನಲ್ಲಿರೋ ಸಲ್ಮಾನ್​ಗೆ ಶೂಟಿಂಗ್​ನಲ್ಲಿ ಭಾಗಿಯಾಗೋದಕ್ಕೂ ಭಯವಾಗ್ತಾ ಇದೆ. ಜೀವ ಭಯದಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗ್ತಾ ಇದ್ದಾರೆ. ಒಟ್ಟಾರೆ ಈ ಸಿದ್ದಿಕಿ ಶೂಟೌಟ್ ಪ್ರಕರಣ ಟೈಗರ್ ನಿದ್ದೆಗೆಡಿಸಿದೆ. ಯಾವಾಗ ಏನಾಗುತ್ತೆ ಅನ್ನೋ ಭಯದಲ್ಲೇ ಸಲ್ಮಾನ್ ಖಾನ್ ದಿನಗಳೆಯುವಂತೆ ಆಗಿಬಿಟ್ಟಿದೆ. 

click me!