
ಬಾಲಿವುಡ್ ಸೂಪರ್ ಜೋಡಿ (Bollywood super couple) ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ (Aishwarya Rai Bachchan and Abhishek Bachchan) ಡಿವೋರ್ಸ್ ತೆಗೆದುಕೊಳ್ತಿದ್ದಾರೆ ಎಂಬುವವರ ಬಾಯಿಗೆ ಅಂಬಾನಿ ಕುಟುಂಬ (Ambani family) ಬೀಗ ಹಾಕಿದೆ. ಒಂದೇ ಒಂದು ವಿಡಿಯೋ ಮೂಲಕ, ಎಲ್ಲವೂ ಸರಿ ಇದೆ, ಯಾರೂ ಬೇರೆಯಾಗ್ತಿಲ್ಲ ಎಂಬ ಸ್ಪಷ್ಟನೆ ನೀಡಿದೆ. ಯಾವುದೇ ಕಾರ್ಯಕ್ರಮದಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ಒಟ್ಟಿಗೆ ಕಾಣಿಸಿಕೊಳ್ತಿಲ್ಲ, ಇಬ್ಬರು ಬೇರೆಯಾಗಿದ್ದಾರೆ ಎಂಬ ಸುದ್ದಿ ಅನೇಕ ತಿಂಗಳಿನಿಂದ ಹರಿದಾಡ್ತಿದೆ. ಅನಂತ್ ಅಂಬಾನಿ ಮದುವೆ (Anant Ambani Wedding) ಸಮಾರಂಭದಲ್ಲಿ ಈ ಸುದ್ದಿಗೆ ಹೆಚ್ಚು ರೆಕ್ಕೆಪುಕ್ಕ ಸಿಕ್ಕಿತ್ತು. ಐಶ್ವರ್ಯ ಮತ್ತು ಆರಾಧ್ಯ ಒಟ್ಟಿಗೆ ಮದುವೆಗೆ ಬಂದ್ರೆ, ಅಭಿಷೇಕ್ ತಮ್ಮ ತಂದೆ ಅಮಿತಾಬ್ ಬಚ್ಚನ್, ತಾಯಿ ಜಯಾ ಬಚ್ಚನ್ ಹಾಗೂ ಸಹೋದರಿ ಜೊತೆ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಜನರು, ಐಶ್ ಮತ್ತು ಅಭಿ ಬೇರೆಯಾಗ್ತಿದ್ದಾರೆ ಎಂಬ ಸುದ್ದಿ ಹರಡಲು ಶುರುಮಾಡಿದ್ರು. ಆದ್ರೀಗ ಅಂಬಾನಿ ಕುಟುಂಬವೇ ಐಶ್ ಮತ್ತು ಅಭಿ ಒಟ್ಟಿಗಿರುವ ಝಲಕ್ ತೋರಿಸಿ ಎಲ್ಲರ ಬಾಯಿ ಮುಚ್ಚಿಸಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯನ್ನು ಅಂಬಾನಿ ಕುಟುಂಬ ಭರ್ಜರಿಯಾಗಿ ಮಾಡಿಮುಗಿಸಿದೆ. ಇಡೀ ವಿಶ್ವವೇ ಮಾತಾಡುವಂತೆ ಮದುವೆ ಮಾಡಿದ ಅಂಬಾನಿ ಫ್ಯಾಮಿಲಿ ಈಗ ಜಿಯೋ ಸಿನಿಮಾದಲ್ಲಿ ಅನಂತ್-ರಾಧಿಕಾ ಮದುವೆಯ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ. ಈ ಸಾಕ್ಷ್ಯಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರನ್ನು ನೋಡ್ಬಹುದು. ಅನಂತ್ ಅಂಬಾನಿ ಮದುವೆಯಲ್ಲಿ ಐಶ್ವರ್ಯ-ಅಭಿಷೇಕ್ ಒಟ್ಟಿಗೆ ಸಾಕಷ್ಟು ಎಂಜಾಯ್ ಮಾಡ್ತಿದ್ದಾರೆ. ಮಗಳು ಆರಾಧ್ಯ ಕೂಡ ಜೊತೆಯಲ್ಲಿದ್ದಾರೆ. ಜಾಮ್‌ನಗರದಲ್ಲಿ ನಡೆದ ಮೂರು ದಿನಗಳ ಪೂರ್ವ ವಿವಾಹ ಸಮಾರಂಭದಲ್ಲಿ ಐಶ್ವರ್ಯಾ-ಅಭಿಷೇಕ್ ಜೊತೆಗೆ ಕುಳಿತಿದ್ದು, ಪರಸ್ಪರ ಆ ಕ್ಷಣವನ್ನು ಎಂಜಾಯ್ ಮಾಡ್ತಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮ ಇನ್ನೂ ಮನೆಯಲ್ಲಿದ್ಯಾ? ಅನುಭವ ಬಿಚ್ಚಿಟ್ಟ ಅದಾ ಶರ್ಮಾ
ಜಿಯೋ ಸಿನಿಮಾದ ಅಧಿಕೃತ ಇನ್ಸ್ಟಾಖಾತೆಯಲ್ಲಿ ಡಾಕ್ಯುಮೆಂಟರಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅದ್ರಲ್ಲಿ ನೀತಾ ಅಂಬಾನಿ, ಮದುವೆ ಸಮಾರಂಭಕ್ಕಿಂತ ಮೊದಲು ನಡೆದ ನೃತ್ಯ ಕಾರ್ಯಕ್ರಮ, ಜಾಮ್ ನಗರದ ಬಗ್ಗೆ ಮಾತನಾಡ್ತಾರೆ. ಈ ವೇಳೆ ಅನೇಕ ಸೆಲೆಬ್ರಿಟಿಗಳನ್ನು ನೋಡ್ಬಹುದು. ಅದ್ರಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ಹಾಗೂ ಆರಾಧ್ಯ ಕಾಣಸಿಗ್ತಾರೆ.
ಅಮಿತಾಬ್ ಬಚ್ಚನ್, ಅನಿಲ್ ಕಪೂರ್ ಜೊತೆ ಈ ಫ್ಯಾಮಿಲಿ ಎಂಜಾಯ್ ಮಾಡೋದನ್ನು ವಿಡಿಯೋದಲ್ಲಿ ನೋಡ್ಬಹುದು. ಅಂಬಾನಿ ಕುಟುಂಬ ಉದ್ದೇಶ ಪೂರ್ವಕವಾಗಿಯೇ ಇವರ ವಿಡಿಯೋ ಹಂಚಿಕೊಂಡಂತಿದೆ.
ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದೂರವಾಗೋದು ಸತ್ಯ ಎಂಬ ರೆಡ್ಡಿಟ್ ಪೋಸ್ಟ್ ಒಂದು ವೈರಲ್ ಆಗಿತ್ತು. ಆಪ್ತರೊಬ್ಬರು ಅವರ ಮಧ್ಯೆ ಭಿನ್ನಾಭಿಪ್ರಾಯಮೂಡಿದೆ, ಅದಕ್ಕೆ ಇನ್ನೊಬ್ಬ ನಟಿ ಕಾರಣ ಎಂದಿದ್ದರು. ಆದ್ರೆ ಈ ಚರ್ಚೆ ಮಧ್ಯೆ, ಐಶ್ವರ್ಯಾ, ತಮ್ಮ ಮಾವ ಅಮಿತಾಬ್ ಬಚ್ಚನ್ ಅವರ 82 ನೇ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಮಗಳು ಆರಾಧ್ಯ ಹಾಗೂ ಅಮಿತಾಬ್ ಬಚ್ಚನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಕೌನ್ ಬನೇಗಾ ಕರೋಡ್ಪತಿ ಶೋನಲ್ಲಿಯೂ, ಕುಟುಂಬದ ಸದಸ್ಯರು ಅಮಿತಾಬ್ಗೆ ವಿಶ್ ಮಾಡಿದ ವಿಡಿಯೋವನ್ನು ತೋರಿಸಲಾಗಿದೆ. ಅದ್ರಲ್ಲೂ ಐಶ್ವರ್ಯಾ ಮತ್ತು ಆರಾಧ್ಯ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲ ಸರಿ ಇದೆ ಎಂದು ಫ್ಯಾನ್ಸ್ ಸಮಾಧಾನ ಮಾಡಿಕೊಳ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿದು ಅನ್ಫಿಟ್ ಅಂತ ಕಣ್ಣೀರಿಟ್ಟ ಧನರಾಜ್!
ಟ್ರೋಲರ್ಸ್ ಮಾತ್ರ ಸಮಾಧಾನಗೊಂಡಂತಿಲ್ಲ. ಎಲ್ಲ ಸರಿ, ಐಫಾ ಸೇರಿದಂತೆ ಯಾವುದೇ ಸಮಾರಂಭದಲ್ಲಿ ಐಶ್ ಮತ್ತು ಅಭಿಷೇಕ್ ಯಾಕೆ ಒಟ್ಟಿಗೆ ಕಾಣಿಸಿಕೊಳ್ತಿಲ್ಲ, ಇಷ್ಟೆಲ್ಲ ಚರ್ಚೆಯಾಗ್ಬೇಕಿದ್ರೆ ಸ್ಪಷ್ಟನೆ ಯಾಕೆ ನೀಡ್ತಿಲ್ಲ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.