ಈ ಚಿತ್ರವನ್ನು ಬರೋಬ್ಬರಿ 200 ಕೋಟಿ ಬಂಡವಾಳದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಚಿತ್ರ ಸೋಲಲು ಕಾರಣ ಏನು ಎಂಬುದನ್ನು ನಿರ್ದೇಶಕರೇ ರಿವೀಲ್ ಮಾಡಿದ್ದರು.
ಮುಂಬೈ: ವಿಕಾಸ್ ಬಹಲ್, ಬಾಲಿವುಡ್ ಅಂಗಳದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಉಡ್ತಾ ಪಂಜಾಬ್, ಕ್ವೀನ್, ಹಂಸಿ ತೂ ಫಂಸಿ ಸೇರಿದಂತೆ ಸೂಪರ್ 30 ಅಂತಹ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದು ಇದೇ ವಿಕಾಸ್ ಬಹಲ್. ಆದ್ರೆ 2023ರಲ್ಲಿ ಬಿಡುಗಡೆಯಾಗಿದ್ದ ಧಮಾಕೇದಾರ್ ಸಿನಿಮಾ ಸೋತ ರೀತಿಯನ್ನು ಕಂಡು ಬಾಲಿವುಡ್ ಅಂಗಳವೇ ಬೆಚ್ಚಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಸ್ವತಃ ನಿರ್ದೇಶಕ ವಿಕಾಸ್ ಬಹಲ್ ಅವರಿಗೆ ಗೊತ್ತಿರಲಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ನಾನೇಕೆ ಈ ಚಿತ್ರ ಮಾಡಿದೆ ಎಂಬ ಯೋಚನೆ ಬಂದಿತ್ತು ಎಂದು ವರದಿಯಾಗಿದೆ. 200 ಕೋಟಿ ಬಂಡವಾಳದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿತ್ತು.
ನಾವು ಹೇಳುತ್ತಿರೋದು 2023ರಲ್ಲಿ ಬಿಡುಗಡೆಯಾದ ಚಿತ್ರ 'ಗಣಪತ್'. ಈ ಸಿನಿಮಾದಲ್ಲಿ ಟೈಗರ್ ಶ್ರಾಫ್, ಕೃತಿ ಸನನ್ ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ಕಲಾವಿದರನ್ನು ಒಳಗೊಂಡಿತ್ತು. ಗಣಪತ್ ಸಿನಿಮಾಗಾಗಿ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗಿತ್ತು. ಆದ್ರೆ ಬಿಡುಗಡೆಯಾದ ನಂತರ ಈ ಚಿತ್ರ ಕೇವಲ 20 ಕೋಟಿ ರೂಪಾಯಿ ಗಳಿಸಿತ್ತು. ಇದನ್ನು 2023ರ ಅತ್ಯಂತ ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಈ ಸಿನಿಮಾ ನೆನಪಾದ್ರೆ ಖಂಡಿತ ಭಯ ಆಗುತ್ತೆ!
ಸಿನಿಮಾ ಬಿಡುಗಡೆಯಾಗುವ ಮುನ್ನ ಟ್ರೈಲರ್ ಹಾಗೂ ಹಾಡುಗಳು ಹುಟ್ಟಿಸಿದ ನಿರೀಕ್ಷೆ ನೋಡಿದ್ರೆ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ನೂರಾರು ಕೋಟಿ ದೋಚುತ್ತೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಸಿನಿಮಾ ಬಿಡುಗಡೆಯಾದಾಗ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಈ ಸಿನಿಮಾ ನಿರ್ದೇಶನ ಮಾಡುವಾಗಲೂ ಸ್ವತಃ ವಿಕಾಸ್ ಬಹಲ್ ಗೊಂದಲದಲ್ಲಿದ್ದರು. ಸಿನಿಮಾ ಬಿಡುಗಡೆಯಾದ ಮರುಕ್ಷಣದಿಂದಲೇ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಹೊರ ಬರಲಾರಂಭಿಸಿವೆ. ಸಿನಿಮಾದಲ್ಲಿ ಯಾವುದೇ ಹೊಸತನ ಇಲ್ಲ ಎಂಬ ಮಾತುಗಳ ಕೇಳಿ ಬಂದ ಬೆನ್ನಲ್ಲೇ ಚಿತ್ರಮಂದಿರಕ್ಕೆ ಜನರೇ ಬರಲಿಲ್ಲ.
ಸಿನಿಮಾದ ಕಳಪೆ ಪ್ರದರ್ಶನ ಹಾಗೂ ಸೋಲುತ್ತಿರುವ ಬಗ್ಗೆ ನಿರಾಶೆಯಲ್ಲಿದ್ದ ವಿಕಾಸ್ ಬಹಲ್, ನಾನು ಗಣಪತ್ ಚಿತ್ರದ ಕತೆ ಬರೆಯುತ್ತಿದ್ದೆ. ಬರೆಯುತ್ತಾ ಹೋದಂತೆ ಕಥೆಯೇ ಬದಲಾಗುತ್ತಾ ಹೋಯ್ತು. ಯಾವಾಗ ಕಥೆ ಸಂಪೂರ್ಣವಾಗಿ ಚೇಂಜ್ ಆಯ್ತು ಅಂತ ಗೊತ್ತಾಗಲೇ ಇಲ್ಲ. ಕೊನೆಗೆ ಇಡೀ ಕಥೆ ಓದಿದಾದ ನನಗೆ ಅರ್ಥವೇ ಆಗಲಿಲ್ಲ. ಆದ್ರೆ ಇದನ್ನು ಪೂರ್ಣ ಮಾಡಬೇಕೆಂದು ಸಿನಿಮಾ ಮಾಡಿದೆ ಎಂದು ವಿಕಾಸ್ ಬಹಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!