ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ತಮ್ಮ ಮಗಳೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಸೆಪ್ಟೆಂಬರ್ 8 ರಂದು ಮುಂಬೈನ ಆಸ್ಪತ್ರೆಯಲ್ಲಿ ಜನಿಸಿದ್ದ ಮಗಳನ್ನು ದೀಪಿಕಾ ತಬ್ಬಿಕೊಂಡು ಬರುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ಸ್ಟಾರ್‌ಗಳಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಹೆಣ್ಣು ಮಗುವನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ದಂಪತಿಗಳು ತಮ್ಮ ಮೊದಲ ಮಗುವನ್ನು ಸೆಪ್ಟೆಂಬರ್ 8 ರಂದು ಸ್ವಾಗತಿಸಿದರು. ರಣವೀರ್ ಮತ್ತು ದೀಪಿಕಾ ತಮ್ಮ ಮಗಳು ಹುಟ್ಟಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇವರಿಬ್ಬರು ಆಸ್ಪತ್ರೆಯಿಂದ ಹೊರಟಿರುವ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸನ್ ಗ್ಲಾಸ್ ಧರಿಸಿರುವ ದೀಪಿಕಾ ಮುಖದಲ್ಲಿ ನಗುವಿನೊಂದಿಗೆ ಮಗಳನ್ನು ತಬ್ಬಿಕೊಂಡು ಹಿಡಿದುಕೊಂಡಿದ್ದಾರೆ. ರಣವೀರ್ ಸಿಂಗ್ ಕೂಡ ಮಗುವನ್ನು ನೋಡುತ್ತಾ ನಗುತ್ತಿರುವುದು ಕಾಣಿಸಿದೆ. ಗಂಡನಾಗಿ ಮತ್ತು ಅಪ್ಪನಾಗಿ ತನ್ನ ಜೀವನದ ಪ್ರಮುಖ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಖುಷಿಯಿಂದ ಹೋಗುತ್ತಿದ್ದು, ತಂದೆ ಜಗಜಿತ್ ಸಿಂಗ್ ಭಾವನಾನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದಾರೆ.
ತಮ್ಮ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಇಂಟ್ರೋವನ್ನು ಬದಲಾಯಿಸಿರುವ ದೀಪಿಕಾ ಪಡುಕೋಣೆ , ಫೀಡ್, ಬರ್ಪ್, ಸ್ಲೀಪ್, ರಿಪೀಟ್ (Feed, Burp, Sleep, Repeat) ಎಂದು ಬರೆದುಕೊಂಡಿದ್ದಾರೆ. ಈ ವಿವರಣೆಯನ್ನು ಬದಲಾಯಿಸಿ ತಾಯ್ತನದ ಬಗ್ಗೆ ಕೇಳಿದ ದೀಪಿಕಾ ಇದಾಗಿ ಕೆಲವೇ ಗಂಟೆಗಳ ನಂತರ ತನ್ನ ಮಗಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ಆಸ್ಪತ್ರೆಯಿಂದ ಹೊರಡುವುದು ಕಂಡುಬಂದಿದೆ.
ಸೆಪ್ಟೆಂಬರ್ 15 ರ ಭಾನುವಾರದಂದು, ನಟಿ ದೀಪಿಕಾ ಪಡುಕೋಣೆ ಮುಂಬೈನ H.N. ರಿಲಯನ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿಂಗ್ ಫ್ಯಾಮಿಲಿ ಮತ್ತು ಪಡುಕೋಣೆ ಫ್ಯಾಮಿಲಿಯ ಕಾರುಗಳು ಮನೆಗೆ ಹೋಗುತ್ತಿರುವುದು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಬಿಳಿ ಟೀ ಶರ್ಟ್‌ಗಳನ್ನು ಧರಿಸಿದ್ದರು.
ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಐಶ್ವರ್ಯಾ ರೈ ಅಂತೆಯೇ ಯೋಜಿಸಿದ್ದಾರಂತೆ. ಮಗುವನ್ನು ನೋಡಿಕೊಳ್ಳಲು ಹೋಂ ನರ್ಸ್ ಇರುವುದಿಲ್ಲವಂತೆ. ತಾವೇ ಮಗಳನ್ನು ನೋಡಿಕೊಳ್ಳಲಿದ್ದಾರಂತೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಂತೆ ದಂಪತಿಗಳು ತಮ್ಮ ಹುಟ್ಟಲಿರುವ ಮಗಳ ಯಾವುದೇ ಫೋಟೋಗಳನ್ನು ಬಹಿರಂಗಪಡಿಸದಿರಲು ತೀರ್ಮಾನಿಸಿದ್ದಾರೆ. ಜಗತ್ತಿಗೆ ಅವಳನ್ನು ಪರಿಚಯಿಸುವುದು ಯಾವಾಗ ಎಂಬುದನ್ನು ಭವಿಷ್ಯದಲ್ಲಿ ನಿರ್ಧರಿಸಲಿದ್ದಾರೆ. ಪಿಕು ತಾರೆಯು ತನ್ನ ಹೆರಿಗೆ ರಜೆಯನ್ನು ಮಾರ್ಚ್ 2025 ರವರೆಗೆ ಮುಂದುವರೆಸಲಿದ್ದು ಬಳಿಕ ಕಲ್ಕಿ 2898 AD ಭಾಗ 2 ರ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರಂತೆ, ಇದು ಅವಳ ಅತ್ಯಂತ ಯಶಸ್ವಿ ಇತ್ತೀಚಿನ ಚಿತ್ರದ ಮುಂದುವರೆದ ಭಾಗವಾಗಿದೆ.