Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

By Suvarna News  |  First Published Feb 5, 2023, 5:49 PM IST

ರಾಜಕೀಯ, ನಟನೆಗಿಂತಲೂ ಹೆಚ್ಚು ಮದುವೆಯ ವಿಷಯದಲ್ಲಿ ಟ್ರೋಲ್​ ಆಗುತ್ತಿರುವ ನಟ ಪವನ್​ ಕಲ್ಯಾಣ್​ ಅವರು ಮದುವೆ, ಆತ್ಮಹತ್ಯೆಯ ಕುರಿತು ಕೆಲವು ವಿಷಯ ಹಂಚಿಕೊಂಡಿದ್ದಾರೆ. ಏನದು?
 


ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ... ಇಷ್ಟೆಲ್ಲಾ ಬಿರುದುಗಳೊಂದಿಗೆ ತೆಲುಗು ಚಿತ್ರರಂಗವನ್ನು ಆಳುತ್ತಿರುವವರು ಪವನ್ ಕಲ್ಯಾಣ (Pawan Kalyan).  ಸಿನಿಮಾ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡು,  ಜನಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಪವನ್​ ಅವರು ಸದಾ ಗಾಸಿಪ್​ ಪ್ರಿಯರ ಬಾಯಲ್ಲಿ ಚರ್ಚೆಯ ವಸ್ತುವಾಗಿಯೇ ಇರುವವರು. ಅದರಲ್ಲಿಯೂ ಇವರು ನಟನೆ, ರಾಜಕೀಯಕ್ಕಿಂತಲೂ ಹೆಚ್ಚಾಗಿ ಹೆಚ್ಚು ಪ್ರಚಲಿತವಾಗಿರುವುದು ಒಂದಲ್ಲ, ಎರಡಲ್ಲ...ಮೂರು ಮದುವೆಯಾಗಿರುವ ಬಗ್ಗೆ. ಇಷ್ಟು ಮದುವೆಯಾದರೂ, ನಟನಾಗಿ ಮಿಂಚುತ್ತಿದ್ದರೂ, ರಾಜಕಾರಣಿಯಾಗಿ ಪ್ರಸಿದ್ಧಿ ಹೊಂದಿದ್ದರೂ ಒಮ್ಮೆ ಆತ್ಮಹತ್ಯೆಯೂ ಯೋಚಿಸಿದ್ದರಂತೆ. ಇವುಗಳ ಕುರಿತು  ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋ ಅನ್‌ಸ್ಟಾಪೆಬಲ್ ಶೋ(Unstoppable Show) ಶೋನಲ್ಲಿ ಇವರು ಮನಬಿಚ್ಚಿ ಮಾತನಾಡಿದ್ದಾರೆ.

ಅನ್​ಸ್ಟಾಪಬಲ್ ವಿತ್ ಎನ್​ಬಿಕೆ 2 ಕಾರ್ಯಕ್ರಮದಲ್ಲಿ ಪವನ್​ ಕಲ್ಯಾಣ್​ ಅವರು ತಮ್ಮ ಸಂಪೂರ್ಣ ಜೀವನದ ಚಿತ್ರಣವನ್ನು ತೆರೆದಿಟ್ಟಿದ್ದಾರೆ.  ಬಾಲಯ್ಯ (Balayya) ಅವರ ಮುಂದೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮೂರು ಮದುವೆ,  ಮಕ್ಕಳು, ಆತ್ಮಹತ್ಯೆ, ಖಿನ್ನತೆ, ನಟನೆ, ರಾಜಕೀಯ ಹೀಗೆ ಎಲ್ಲವುಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.  ಇಷ್ಟೇ ಅಲ್ಲದೇ  ಬಾಲ್ಯದಿಂದಲೂ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವ ಬಗ್ಗೆಯೂ ಹೇಳಿಕೊಂಡಿರುವ ನಟ,  ಒಂದೇ ಬಾರಿಗೆ ಅನೇಕ ಸಮಸ್ಯೆಗಳು ತನ್ನನ್ನು ಕಾಡಿದ್ದ ಕೆಟ್ಟ ದಿನಗಳನ್ನೂ ನೆನೆಸಿಕೊಂಡಿದ್ದಾರೆ.

Tap to resize

Latest Videos

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!

ಮೊದಲಿಗೆ ಇವರ ಮೂರು ಮದುವೆಯ ಕಾಂಟ್ರವರ್ಸಿ (Contraversy) ಕುರಿತು ಹೇಳುವುದಾದರೆ, ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು.  2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು,  2008ರಲ್ಲಿ ರೇಣು ಎಂಬುವವರನ್ನು  ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು.  ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್​ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಅವರಿಗೆ ಡಿವೋರ್ಸ್​ ನೀಡಿದ ಬಳಿಕ ಪವನ್​ ಕಲ್ಯಾಣ್​ ಅವರು  ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು  ಮದುವೆಯಾಗಿದ್ದಾರೆ.  ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.

ಇನ್ನು ಮೂರು ಮೂರು ಮದುವೆಯಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿರುವ ಪವನ್​ ಅವರು ಅದರ ಬಗ್ಗೆ ಅಸಮಾಧಾನ ಹೊರಹಾಕಿ, ತಾವ್ಯಾಕೆ ಇಷ್ಟು ಮದುವೆಯಾಗಿರುವುದು ಎಂಬುದನ್ನು ತಿಳಿಸಿದ್ದಾರೆ. ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಸಲ ಮದುವೆಯಾಗಿಲ್ಲ ಎಂದಿದ್ದಾರೆ. ನಾನು  ಮದುವೆಯನ್ನೇ ಆಗಬಾರದು ಎಂದುಕೊಂಡವ, ಒಂಟಿತನ ಇಷ್ಟವಾಗಿತ್ತು.  ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲ ಮದುವೆ ಹೊಂದಾಣಿಕೆ ಆಗಲಿಲ್ಲ, ಅದಕ್ಕೇ ಎರಡನೆಯದ್ದು ಆದೆ. ಅದು ಕೂಡ  ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದ್ದವು. ಅದಕ್ಕೆ ಆ ಮದುವೆಗೂ (Marriage)ಅಂತ್ಯ ಹಾಡಿದೆ. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿಲ್ಲವಲ್ಲ,  ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು? ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ (Political) ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದಾರೆ.

ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್

ಹಿಂದೊಮ್ಮೆ ತಾವು  ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿರುವ ಬಗ್ಗೆಯೂ  ಪವನ್ ಕಲ್ಯಾಣ್ ಹೇಳಿದ್ದಾರೆ. ಅದ್ಯಾಕೋ ಜೀವನದಲ್ಲಿ ತೀರಾ ಖಿನ್ನತೆಗೆ ಜಾರಿದೆ. ಅಣ್ಣ ಚಿರಂಜೀವಿ ಅವರ ಕೊಠಡಿಯಿಂದ ಪರವಾನಗಿ ಪಡೆದ ರಿವಾಲ್ವರ್ ಎತ್ತಿಕೊಂಡು ಬಂದಿದ್ದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

click me!