ಮೊಡವೆ ಬರ್ಬಾರ್ದು ಅಂತ 10 ಲೀಟರ್‌ ನೀರು ಕುಡಿದ ವಿದ್ಯಾ ಬಾಲನ್; ವಾಂತಿ ಮಾಡಿದ ಕಥೆ ಇದು

Published : Feb 05, 2023, 04:48 PM IST
 ಮೊಡವೆ ಬರ್ಬಾರ್ದು ಅಂತ 10 ಲೀಟರ್‌ ನೀರು ಕುಡಿದ ವಿದ್ಯಾ ಬಾಲನ್; ವಾಂತಿ ಮಾಡಿದ ಕಥೆ ಇದು

ಸಾರಾಂಶ

ಸದಾ ಬಾಡಿ ಶೇಮಿಂಗ್‌ಗೆ ಗುರಿಯಾಗುವ ವಿದ್ಯಾ ಬಾಲನ್‌ ಒಂದು ಸಮಯದಲ್ಲಿ ದಿನಕ್ಕೆ 10 ಲೀಟರ್ ನೀರು ಕುಡಿಯುತ್ತಿದ್ದರಂತೆ. ಇದರ ಪರಿಣಾಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಯ್ತು ಎಂದು ಹಂಚಿಕೊಂಡಿದ್ದಾರೆ.... 

ಬಾಲಿವುಡ್‌ ಬ್ಯೂಟಿ ವಿದ್ಯಾ ಬಾಲನ್‌ ಅತಿ ಹೆಚ್ಚು ಬಾಡಿ ಶೇಮಿಂಗ್ ಎದುರಿಸಿರುವ ನಟಿಯರಲ್ಲಿ ಒಬ್ಬರು. ಎಷ್ಟೇ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿದ್ದರೂ ವಿದ್ಯಾ ನೋಡಲು ಹಾಗೆ ಹೀಗೆ ಎಂದು ನೆಟ್ಟಿಗರು ಕಾಲೆಯುತ್ತಾರೆ. ಇದಕ್ಕೆ ತಲೆ ಕೆಡಿಸಿಕೊಂಡ ವಿದ್ಯಾ ಒಂದು ಸಮಯಲ್ಲಿ ಏನೋ ಪ್ರಯತ್ನ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರಂತೆ. 

'19 ವರ್ಷವಿದ್ದಾಗ ಯಾರೋ ಒಬ್ಬರು ನನಗೆ ಹೇಳಿದ್ದರು ಹೆಚ್ಚಿಗೆ ನೀರು ಕುಡಿದರ ಸ್ಕಿನ್ ಕ್ಲಿಯರ್ ಆಗುತ್ತದೆ ಏಕೆಂದರೆ ನನ್ನ ಮುಖದಲ್ಲಿ ತುಂಬಾ ಮೊಡವೆಗಳಿತ್ತು.  ಅದನ್ನು ನಂಬಿ ನಾನು ದಿನಕ್ಕೆ 10 ಲೀಟರ್‌ ನೀರು ಕುಡಿಯಲು ಶುರು ಮಾಡಿದ್ದೆ. ನನ್ನ ದೇಹಕ್ಕೆ 10 ಲೀಟರ್‌ ಅತಿ ಹೆಚ್ಚಾಗಿ ವಾಂತಿ ಮಾಡಲು ಆರಂಭಿಸಿದೆ' ಎಂದು ವಿದ್ಯಾ ಬಾಲನ್ ಖಾಸಗಿ ಸಂದರ್ಶನದಲ್ಲಿ ಹೇಳಿದ್ದರು.

'ಕೆಲವೊಮ್ಮೆ ಜಿಮ್‌ನಲ್ಲಿ 2 ಗಂಟೆ 45 ನಿಮಿಷ ಅಥವಾ 3 ಗಂಟೆ ವರ್ಕೌಟ್ ಮಾಡುತ್ತಿದ್ದೆ. ಹೀಗೆ ಒಂದು ದಿನವಲ್ಲ ಸುಮಾರು ತಿಂಗಳು ಮಾಡುತ್ತಿದ್ದೆ ಏಕೆಂದರೆ ನಾನು ಸಣ್ಣಗಾಗಬೇಕು ಎಂದು. ಇದರಿಂದ ನನ್ನ ಹಿಮೋಗ್ಲೋಬಿನ್ ತುಂಬಾನೇ ಕಡಿಮೆ ಆಗಿತ್ತು. ನಾನು ಸಣ್ಣ ಇದಾಗಲೂ ದಪ್ಪ ಇದ್ದೀನಿ ಅನಿಸುತ್ತಿತ್ತು. ನನ್ನ ಜೀವನದಲ್ಲಿ ನಾನು ಮಾಡಿದ್ದ ಮೊದಲ ತಪ್ಪು ಅದೇ, ಮೊದಲು ನಮ್ಮನ್ನು ನಾವು ಸುಂದರವಾಗಿದ್ದೀವಿ ಎಂದು ಹೇಳಿಕೊಳ್ಳಬೇಕು ನಮ್ಮನ್ನು ನಾವು ಒಪ್ಪಿಕೊಳ್ಳಬೇಕು. ಪ್ರತಿಯೊಬ್ಬರು ತುಂಬಾನೇ ಡಿಫರೆಂಟ್ ಆಗಿರುತ್ತಾರೆ' ಎಂದು ವಿದ್ಯಾ ಮಾತನಾಡಿದ್ದಾರೆ. 

6 ತಿಂಗಳು ತಮ್ಮ ಮುಖ ನೋಡಿಕೊಳ್ಳದ ವಿದ್ಯಾ ಬಾಲನ್, ಆಗಿದ್ದೇನು?

ಕರೀನಾಗೆ ಟಾಂಗ್ ಕೊಟ್ಟ ವಿದ್ಯಾ:

ಸೈಜ್‌ ಜೀರೊ ಫೇಮ್‌ನ ಕರೀನಾ ವಿದ್ಯಾಬಾಲನ್‌ ದೇಹ ತೂಕದ ಬಗ್ಗೆ ಕೀಳು ಮಟ್ಟದಲ್ಲಿ ಗೇಲಿ ಮಾಡಿದ್ದರು ಒಮ್ಮೆ.ವಿದ್ಯಾ ಬಾಲನ್‌ಗೂ ಬಾಡಿ ಶೇಮ್ ಮಾಡಿದ್ದರೂ ಈ ರೆಫ್ಯೂಜೀ ನಟಿ. ಯಾರಿಗೂ ಹೆದರದ ವಿದ್ಯಾ, ಸುಮ್ಮನಿರಲಿಲ್ಲ.'ಫ್ಯಾಟ್‌ ಇರುವುದು ಸೆಕ್ಸಿಯಲ್ಲ! ಹಾಗೆ ಹೇಳುವರು ಅರ್ಥವಿಲ್ಲದೆ ಮಾತಾನಾಡುತ್ತಿದ್ದಾರೆ ಎಂದು. ಶೇಪ್‌ನಲ್ಲಿರುವುದು ಸೆಕ್ಸಿ ಫ್ಯಾಟ್‌ ಅಲ್ಲ. ನಾನು ತೆಳ್ಳಗಿರಲು ಬಯಸುವುದಿಲ್ಲ ಎಂದು ಹೇಳುವುದು ನಾನ್ಸೆನ್ಸ್. ಬಳಕುವ ಬಳ್ಳಿಯಂತಿರುವುದು ಪ್ರತಿಯೊಬ್ಬ ಹುಡುಗಿಯರ ಕನಸು, ಎಂದಿದ್ದರು ಕರೀನಾ. ಕರೀನಾ ಅಲ್ಲಿಗೆ ನಿಲ್ಲಿಸದೆ 'ಇದು ಈಗ ಕೆಲವು ನಟಿಯರ ಜೊತೆ ಟ್ರೆಂಡ್‌ ಆಗಿರಬಹುದು, ಆದರೆ ನಾನು ಖಂಡಿತವಾಗಿಯೂ ಪ್ಲಂಪ್‌ ಅಥವಾ ಫ್ಯಾಟ್‌ ಆಗಿ ಕಾಣಲು ಬಯಸುವುದಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.  ಅದಕ್ಕೆ ವಿದ್ಯಾ ತನ್ನದೇ ಶೈಲಿಯಲ್ಲಿ ಉತ್ತರಿಸಿದಳು. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ' ಇದು 'ಡರ್ಟಿ ಪಿಕ್ಚರ್' ಗಿಂತ ಹೆಚ್ಚು ಕೊಳಕಾಗಲು ಸಾಧ್ಯವಿಲ್ಲ. ಅವರು 'ಹಿರೋಯಿನ್‌' ಮಾಡಬಲ್ಲರು. ಆದರೆ 'ದಿ ಡರ್ಟಿ ಪಿಕ್ಚರ್' ಮಾಡುವುದು ಅಂಥವರಿಂದ ಸಾಧ್ಯವೇ ಇಲ್ಲ, ಎನ್ನುವ ಮೂಲಕ ಸೌಂದರ್ಯವೊಂದೇ ಚಿತ್ರಕ್ಕೆ ಮಾನದಂಡವಲ್ಲ. ನಟನೆಯೂ ಮುಖ್ಯವೆಂದಿದ್ದರು.

ಪತಿ ಬಗ್ಗೆ: 

'ನಾನು ನಿಜ ಹೇಳಬೇಕು ನನ್ನ ಪತಿ ಸಿದ್ಧಾರ್ಥ್ ತುಂಬಾ ಒಳ್ಳೆಯ listener. ನಾನು ಹೇಳುವ ಪ್ರತಿಯೊಂದು ವಿಚಾರವನ್ನು ತುಂಬಾ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಅವರು ಯಾವ ರೀತಿ ಸಲಹೆ ನೀಡುವುದಿಲ್ಲ. ಆದರೆ ಅವರಿಗೆ ಹೇಳುತ್ತಲೇ ನನಗೆ ಒಂದು ಕ್ಲಾರಿಟಿ ಸಿಗುತ್ತದೆ. ಅವರು ನನ್ನ ಸಂಗಾತಿ ಆಗಿ ಪಡೆದುಕೊಂಡಿರುವುದಕ್ಕೆ ನಾನು ಪುಣ್ಯ ಮಾಡಿದ್ದೀನಿ. ನಾವು ಮದುವೆಯಾಗಿ 10 ವರ್ಷ ಆಗಿದೆ ಮದುವೆ ಜೀವನವನ್ನು ನಾನು appreciate ಮಾಡುವುದಕ್ಕೆ ಸಿದ್ಧಾರ್ಥ್ ಅವರೇ ಕಾರಣ'ಎಂದು ಇಟೈಮ್ಸ್‌ ಸಂದರ್ಶನದಲ್ಲಿ ವಿದ್ಯಾ ಮಾತನಾಡಿದ್ದಾರೆ.

Actress Beauty Secret: ಪಾರ್ಲರ್‌ಗೆ ಹೋಗಲಿಷ್ಟವಿಲ್ಲದ ಈ ನಟಿ ಸೌಂದರ್ಯಕ್ಕೆ ಸೋಲದವರಿಲ್ಲ

'ನನ್ನ ಮದುವೆ ಬಗ್ಗೆ ಅಥವಾ ನನ್ನ ಪತಿ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ ಏಕೆಂದರೆ ನಾವಿಬ್ಬರೂ ತುಂಬಾನೇ ಪ್ರೈವೇಟ್ ವ್ಯಕ್ತಿಗಳು. ನಾನು ನಟಿ ಎಂದ ಮಾತ್ರಕ್ಕೆ ಎಲ್ಲಾನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಕಿಲ್ಲ. ಕೆಲಸ ಹೊರತು ಪಡಿಸಿ ನಾನು ನನ್ನ ಫೋಟೋನೇ ಹಾಕುವುದಿಲ್ಲ. ನಾನು ನೋಡಲು ತುಂಬಾನೇ ಬೋಲ್ಡ್ ಆಗಿರುವೆ ಆದರೆ ನಿಜಕ್ಕೂ Shy ವ್ಯಕ್ತಿ. ನಾನು ತುಂಬಾನೇ ಪ್ರೈವೇಟ್ ವ್ಯಕ್ತಿ. ಜನರ ಜೊತೆ ಮಾತನಾಡುತ್ತೀನಿ ಆದರೂ ನನಗೆ ನಂದೇ ಸರ್ಕಲ್ ಇದೆ' ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!