Kangana Ranaut: ಅನುಮತಿ ಇಲ್ದೇ ಬಂದ್ರೆ ಶೂಟ್​ ಮಾಡ್ತೀನಿ ಎಂದ ನಟಿ!

By Suvarna News  |  First Published Mar 16, 2023, 6:12 PM IST

ಮುಂಬೈನಲ್ಲಿ ಮನೆಯ ನವೀಕರಣ ಕಾರ್ಯದಲ್ಲಿ ತೊಡಗಿರುವ ನಟಿ ಕಂಗನಾ ರಣಾವತ್​ ಅವರ ಮನೆಯ ಎದುರಿಗಿರುವ ಫಲಕ ಎಲ್ಲರ ಗಮನ ಸೆಳೆದಿದೆ. ಏನಿದೆ ಅದರಲ್ಲಿ?
 


ಮುಂಬೈನಲ್ಲಿದ್ದ ನಟಿ ಕಂಗನಾ ರಣಾವತ್ (Kangana Ranaut) ಅವರ ಮನೆ ಮತ್ತು ಆಫೀಸ್ ಅನ್ನು ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿ ಕಳೆದ ವರ್ಷ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(BMC) ಕೆಡವಿ ಹಾಕಿದ್ದು ಈಗ ಹಳೆಯ ಸುದ್ದಿ.  ಶಿವಸೇನಾ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಹೀಗಾಗಿ ಬಿಎಂಸಿಯನ್ನು ಉಪಯೋಗಿಸಿಕೊಂಡು ನನ್ನ ಮನೆ ಮತ್ತು ಆಫೀಸ್ ಅನ್ನು ಒಡೆದು ಹಾಕಿದೆ ಎಂದು ಕಂಗನಾ ಆರೋಪಿಸಿದ್ದರು. ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ (Mumbai) ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದರು. ನಂತರ ಕೋರ್ಟ್​ ಕೂಡ ಈ ರೀತಿ ಮಾಡಿದ್ದು ತಪ್ಪು ಎಂದು ಹೇಳಿತ್ತು. ಇದಾದ ಬಳಿಕ ಈಗ ಮನೆಯ ವಿಷಯವಾಗಿ ಕಂಗನಾ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. 

ಕಂಗನಾ ರಣಾವತ್ ಅವರು ಮುಂಬೈನಲ್ಲಿ ಬೆಲೆಬಾಳುವ ಅಪಾರ್ಟ್‌ಮೆಂಟ್ ಹೊಂದಿದ್ದು, ನಟಿ ಮನಾಲಿಯಲ್ಲಿ ದೊಡ್ಡ ಭವನವನ್ನು ಹೊಂದಿದ್ದಾರೆ. ನಟಿ ಈಗ  ಮುಂಬೈನ ಮನೆಯನ್ನು ನವೀಕರರಿಸುತ್ತಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.  ಇನ್ಸ್​ಟಾಗ್ರಾಮ್​ನಲ್ಲಿ (Instagram) ಕಥೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮನೆಯ ಅಲಂಕಾರದಲ್ಲಿ ತಮ್ಮ  ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ,  ನನ್ನ ಎಲ್ಲಾ ಮನೆಗಳ ಬಗ್ಗೆ ನಾನು ಯಾವಾಗಲೂ ಸ್ಪಷ್ಟವಾದ ದೃಷ್ಟಿಯನ್ನು ಹೊಂದಿದ್ದೇನೆ ಎಂದು ನಟಿ ಹೇಳಿದ್ದಾರೆ.  ಕಂಗನಾ ಅವರು ತಮ್ಮ ಮನೆಗೆ 'ಮೌಂಟೇನ್ ಚೆಕ್ಸ್ ವಿತ್ ತಂಜೋರ್ ಪೇಂಟಿಂಗ್ಸ್' ಶೈಲಿನಲ್ಲಿ ಅಲಂಕಾರ ಮಾಡಿರುವುದಾಗಿ ಹೇಳಿದ್ದಾರೆ. ತಮ್ಮ ಅಪಾರ್ಟ್​ಮೆಂಟ್​ ಅನ್ನು ತಾವೇ ನವೀಕರಿಸುವುದಾಗಿಯೂ ಹೇಳಿದ್ದಾರೆ.

Tap to resize

Latest Videos

OSCAR ವೇದಿಕೆಯಲ್ಲಿ ದೀಪಿಕಾ ಪಡುಕೋಣೆ: ಹಾಡಿ ಹೊಗಳಿದ ಕಂಗನಾ ರಣಾವತ್
 
ಈ ಸಂದರ್ಭದಲ್ಲಿ ಎಲ್ಲರ ಗಮನ ಹೋಗುವುದು ಅವರ ಒಂದು ಕೋಣೆಯ ಹೊರಗೆ ಹೂವಿನ ವಾಲ್‌ಪೇಪರ್‌ ಮೇಲೆ. ಈ ಗೋಡೆಯ ಮೇಲೆ ಸೈನ್‌ಬೋರ್ಡ್‌ ಅನ್ನು ನೋಡಬಹುದು. ಅದರಲ್ಲಿ ಕಂಗನಾ ಅವರು, 'ಇಲ್ಲಿ ಯಾರಿಗೂ ಅತಿಕ್ರಮಣ ಪ್ರವೇಶವಿಲ್ಲ. ಅತಿಕ್ರಮಣ (Encroach) ಮಾಡಲು ಬಂದರೆ  ಗುಂಡು ಹಾರಿಸಲಾಗುತ್ತದೆ. ಬದುಕುಳಿದವರಿಗೆ ಮತ್ತೆ ಗುಂಡು ಹಾರಿಸಲಾಗುತ್ತದೆ! ಎಂದು ಬರೆದಿದ್ದಾರೆ.
 
 ತಮ್ಮ ಮನೆಯ ವಿಡಿಯೋ ಹಂಚಿಕೊಂಡ ನಟಿ,  'ನಾನು ಯಾವಾಗಲೂ ನನ್ನ ಎಲ್ಲಾ ಮನೆಗಳ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದೇನೆ,  ತಂಜಾವೂರಿನ ವರ್ಣಚಿತ್ರಗಳನ್ನು ತುಂಬಾ ಪ್ರೀತಿಸುತ್ತೇನೆ.   ಆದರೂ ನಾನು  ದಕ್ಷಿಣ ಭಾರತವನ್ನು ಹೆಚ್ಚು ಪ್ರೀತಿಸುತ್ತೇನೆ ಎಂದಿದ್ದಾರೆ.  ಇನ್‌ಸ್ಟಾಗ್ರಾಮ್​ (Instagram) ಸ್ಟೋರಿಯ ವಿಡಿಯೋದಲ್ಲಿ,  ಅವರ ಮನೆಯಲ್ಲಿನ ಹಸಿರು ಗೋಡೆಯ ಮೇಲೆ ದೇವರ ದೊಡ್ಡ ಚಿತ್ರ, ಇನ್ನೊಂದು ಬದಿಯಲ್ಲಿ ತಂಜಾವೂರಿನ (Tanjavore) ವರ್ಣಚಿತ್ರವನ್ನು ಕಾಣಬಹುದು, ಮೆತ್ತೆಗಳನ್ನು ಹೊಂದಿರುವ ಮರದ ಸೋಫಾ ಮತ್ತು ಈ ಕೋಣೆಯಲ್ಲಿ ಬೂದು ಮತ್ತು ಬಿಳಿ ಚೆಕ್ ಮಾದರಿಯು ಹಾಸಿಗೆಯ ಹೊದಿಕೆಗಳನ್ನೂ ನೋಡಬಹುದಾಗಿದೆ. 

ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಬಾಲಿವುಡ್​ ನಟಿಯರಿವರು!

ಆಲಿಯಾ ಭಟ್, ರಣಬೀರ್ ಕಪೂರ್, ಮಿನಿ ಮಾಥುರ್ ಮತ್ತು ದಿವಂಗತ ಇರ್ಫಾನ್ ಖಾನ್ ಅವರಂತಹ ಖ್ಯಾತನಾಮರ ಮನೆಗಳನ್ನು ಅಲಂಕರಿಸಿದ ಇಂಟೀರಿಯರ್ ಡಿಸೈನರ್ ಶಬ್ನಮ್ ಗುಪ್ತಾ (Shabnam Guptha) ಅವರು ಕಂಗನಾ ಅವರ ಅಪಾರ್ಟ್ಮೆಂಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅಂದಹಾಗೆ, ಕಂಗನಾ ಅವರ ಮನೆಯು ಹಳ್ಳಿಗಾಡಿನ ಸ್ವರ್ಗದ ಪರಿಪೂರ್ಣ ಸಮತೋಲನವನ್ನು ಹೊಂದಿದೆ ಎನ್ನಲಾಗಿದೆ. ಅವರ ಲಿವಿಂಗ್ ರೂಮ್ ಕೆಲವು ವರ್ಣರಂಜಿತ ಶೋಪೀಸ್, ರೋಮಾಂಚಕ  ಮೆತ್ತೆಗಳು ಮತ್ತು ಪುರಾತನ ಕೆಲವು ವಿಶಿಷ್ಟ ವಸ್ತುಗಳಿಂದ ತುಂಬಿದೆ.  ಬಾಲ್ಕನಿಯಲ್ಲಿ ಏಕವರ್ಣದ ನೆಲಹಾಸನ್ನು ಹಾಸಲಾಗಿದ್ದು, ಅಲ್ಲಿ ಸುಂದರವಾದ ಆಸನ ವ್ಯವಸ್ಥೆ ಮಾಡಲಾಗಿದೆ.  ಪ್ರಕಾಶಮಾನವಾದ ಹಳದಿ ಬಾಗಿಲಿನಿಂದ ಇನ್ನಷ್ಟು ಕಂಗೊಳಿಸುತ್ತಿದೆ.

click me!