RRR ಚಿತ್ರ ಇದರ ಕಾಪಿನಾ? ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್​!

By Suvarna NewsFirst Published Mar 16, 2023, 5:43 PM IST
Highlights

ವಿಶ್ವದ ಗಮನ ಸೆಳೆದಿರುವ ಆರ್​ಆರ್​ಆರ್​ ಚಿತ್ರದಲ್ಲಿನ ಹಲವು ಸನ್ನಿವೇಶಗಳು ಇದರ ಕಾಪಿ ಎನ್ನುವ ತಮಾಷೆಯ ವಿಡಿಯೋ ಒಂದು ವೈರಲ್​ ಆಗಿದೆ. ಏನಿದೆ ಅದರಲ್ಲಿ ಗೊತ್ತಾ?
 

RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಭಾರತವನ್ನು ಪ್ರತಿನಿಧಿಸಿದ್ದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ (Song) ಆಸ್ಕರ್ ಪ್ರಶಸ್ತಿ ಸಂದಿದೆ. ಈ ಮೂಲಕ ಗೆಲುವಿನೊಂದಿಗೆ ಜಾಗತಿಕ ಮನ್ನಣೆಯನ್ನು ಸಾಧಿಸಿದೆ. ಚಿತ್ರದ ಯಶಸ್ಸನ್ನು ಭಾರತಕ್ಕೆ ಹೆಮ್ಮೆಯ ಕ್ಷಣವೆಂದು ಆಚರಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಧನೆಯ ಗೌರವಾರ್ಥವಾಗಿ ಫೋಟೋಗಳು, ವೀಡಿಯೊಗಳು ಮತ್ತು ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಆಸ್ಕರ್ ವೇದಿಕೆಯ ಮೇಲೆ ಈ ಹಾಡನ್ನು ಗಾಯಕರಾದ ಸಿಪ್ಲಿಗಂಜ ಹಾಗೂ ಕಾಲಭೈರವ ಹಾಡಿದರು. ಅಮೆರಿಕದ ನಟ, ಡಾನ್ಸರ್ ಲಾರೆನ್ ಗೋತ್ಲಿಬ್ ನೃತ್ಯ ಮಾಡಿದರು. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ನಾಟು, ನಾಟು ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ.

ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದೆ. ಆರ್​ಆರ್​ಆರ್​ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಹಲವು ಕ್ಷೇತ್ರಗಳ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಅಸಾಧಾರಣ... ನಾಟು ನಾಟು  ಜನಪ್ರಿಯತೆ ಜಾಗತಿಕವಾಗಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡಾಗಲಿದೆ. ಪ್ರತಿಷ್ಠಿತ ಗೌರವ ಪಡೆದ ಎಂ ಎಂ ಕೀರವಾಣಿ ಹಾಗೂ ಚಿತ್ರದ ಇಡೀ ತಂಡಕ್ಕೆ ಅಭಿನಂದನೆಗಳು. ಭಾರತ ಉತ್ಸುಕವಾಗಿದ್ದು ಮತ್ತು ಹೆಮ್ಮೆಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.  

Latest Videos

ಹೀಗೆ ಹವಾ ಸೃಷ್ಟಿಸಿರೋ 'RRR' ಚಿತ್ರದ ಕಥೆಯು 1920 ರ ದಶಕದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಅವರ ಜೀವನದ ಕತೆ ಆಧರಿಸಿದೆ.  ಈ ಕಥೆಯನ್ನು ಕಾಲ್ಪನಿಕವಾಗಿ RRR ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ (SS Rajamouli) ಮಾಹಿತಿ ನೀಡುವ ಸಂದರ್ಭದಲ್ಲಿ  ಈ ಕ್ರಾಂತಿಕಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ, ಆದ್ದರಿಂದ  ಆ ಕೊರತೆಯನ್ನು ನೀಗಿಸಲು RRR ಪ್ರಯತ್ನಗಳನ್ನು ಮಾಡಿದೆ. ಈ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಚಿತ್ರದ ಮೂಲಕ ಗೌರವಿಸಲಾಗಿದೆ ಎಂದಿದ್ದರು. ಆದರೆ ಇದೀಗ ಆರ್​ಆರ್​ಆರ್​ನ ಚಿತ್ರದಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ಬೇರೆ ಕಡೆಯಿಂದ ಕದಿಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿವೆ. ಇಲ್ಲಿ ಬರುವ ಸಾಹಸ ಸನ್ನಿವೇಶಗಳನ್ನು ಬೇರೆ ಕಡೆಯಿಂದ ಕದಿಯಲಾಗಿದೆ. ಇದರಲ್ಲಿ ಮೂಲಅಂಶ ಏನೂ ಇಲ್ಲ ಎಂದು ಹೇಳಲಾಗುತ್ತಿದೆ.

ಹೀಗೆ ಆರೋಪಿಸಿರುವವರು ಮೂಲ ಸನ್ನಿವೇಶಗಳು ಹಾಗೂ ಸಾಹಸ ದೃಶ್ಯಗಳ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ! ಅಷ್ಟಕ್ಕೂ ಅವರು ಮಾಡಿರುವ ಆರೋಪ ಕೇಳಿದರೆ ಹಾಗೂ ಈ ವಿಡಿಯೋ ನೋಡಿದರೆ ಎಂಥವರೂ ಬಿದ್ದೂ ಬಿದ್ದೂ ನಗುವಂತಿದೆ. ಮೂಡ್​ ಸರಿಯಿಲ್ಲದಾಗ ಈ ವಿಡಿಯೋ ನೋಡಿದರೆ ಎಲ್ಲರ ಮೂಡ್​ ಕೂಡ ಸರಿಯಾಗುತ್ತದೆ. ಅಂಥ ವಿಡಿಯೋ ಇದಾಗಿದ್ದು, ಇದನ್ನು ನೋಡಿದ ಆರ್​ಆರ್​ಆರ್​ ಅಭಿಮಾನಿಗಳು ಸುಸ್ತಾಗಿ ಹೋಗಿದ್ದಾರೆ. ಬೇರೆ ಕಡೆಯಿಂದ ಆರ್​ಆರ್​ಆರ್​ ದೃಶ್ಯಗಳನ್ನು ಕದ್ದಿರುವುದಾಗಿ ಓದಿ ನಂತರ ಈ ವಿಡಿಯೋ ನೋಡಿದರೆ ಉಫ್​ ಎನ್ನುವುದಂತೂ ದಿಟ.

Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್​?

ಹಾಗಿದ್ದರೆ ಈ ವಿಡಿಯೋದಲ್ಲಿ ಅಂಥದ್ದೇನಿದೆ ಅಂತೀರಾ? ಆರ್​ಆರ್​ಆರ್​ ಸೀನ್​ಗಳನ್ನು (Scenes) ಎಲ್ಲಿಂದ ಕದ್ದದ್ದು ಎಂಬ ಆರೋಪ ಇದೆ ಎಂಬುದು ಗೊತ್ತಾ? ಬಹುಶಃ ನೀವೂ ಊಹಿಸಲಿಕ್ಕೂ ಸಾಧ್ಯವಿಲ್ಲ. ಈ ವೈರಲ್ ಆಗುತ್ತಿರುವ ವಿಡಿಯೋ ಟಾಮ್​ ಆ್ಯಂಡ್​ ಜೆರ್ರಿಯದ್ದು! ಹೌದು. ನೀವು ಸರಿಯಾಗಿಯೇ ಓದಿದ್ದೀರಿ. ಆರ್​ಆರ್​ಆರ್​ ಚಿತ್ರಕ್ಕೂ ಟಾಮ್​ ಆ್ಯಂಡ್​ ಜೆರ್ರಿಗೂ ಎತ್ತಣತ್ತ ಸಂಬಂಧ ಅನ್ನುವಿರಾ? ಅದನ್ನು ಕೇಳಬೇಕಾದರೆ ನೀವು ಈ ಕೆಳಗಿರುವ ವಿಡಿಯೋ ನೋಡಲೇಬೇಕು.  ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ  ಎಸ್‌ಎಸ್ ರಾಜಮೌಳಿ ಅವರ ಚಲನಚಿತ್ರ 'ಆರ್‌ಆರ್‌ಆರ್' ಮತ್ತು ಟಾಮ್ ಮತ್ತು ಜೆರ್ರಿಯ ವರ್ತನೆಗಳ ನಡುವಿನ ಸಾಂಕೇತಿಕ ದೃಶ್ಯಗಳನ್ನು ನೆಟ್ಟಿಗರು ಹೋಲಿಕೆ  ಮಾಡಿ ವಿಡಿಯೋ ಮಾಡಿದ್ದು, ನಕ್ಕು ನಗಿಸುವಂತಿದೆ. ಇದು ಕೇವಲ ನಗುವನ್ನಷ್ಟೇ ತರುವುದೂ ಅಲ್ಲದೇ, ಎರಡೂ ದೃಶ್ಯಗಳಲ್ಲಿ ಸೇಮ್​  ಟು ಸೇಮ್​ ಹೋಲಿಕೆ ಇರುವುದನ್ನು ನೋಡಿದರೆ ಇದನ್ನು ಮಾಡಿದವರ ತಲೆಗೆ ಭೇಷ್​ ಭೇಷ್​ ಎನ್ನಲೇಬೇಕಾಗುತ್ತದೆ.

ವಿಡಿಯೋದಲ್ಲಿ  ರಾಮ್ ಚರಣ್  ಮತ್ತು ಜೂನಿಯರ್ ಎನ್‌ಟಿಆರ್ ಕೆಲವು ಸನ್ನಿವೇಶಗಳಲ್ಲಿ ನಟನೆ ಮಾಡಿರುವುದು ಹಾಗೂ ಸಾಹಸಮಯ ದೃಶ್ಯಗಳನ್ನು ಮಾಡಿರುವುದು ಸೇಮ್​ ಟು ಸೇಮ್​  ಟಾಮ್ ಅಥವಾ ಜೆರ್ರಿಯಲ್ಲಿ ಇದ್ದಂತೆಯೇ ಕಾಣುತ್ತದೆ.  ರಾಮ್ ಅವರು ತಮ್ಮ ಹಳ್ಳಿಯನ್ನು ದೋಣಿಯಲ್ಲಿ ತೊರೆಯುವ ದೃಶ್ಯ ಮತ್ತು 'ರಾಮ್' ಮತ್ತು 'ಭೀಮ್' ಕೈಜೋಡಿಸುವ ಐಕಾನಿಕ್ ಬ್ರಿಡ್ಜ್ ಸೀಕ್ವೆನ್ಸ್ ಕೂಡ ಟಾಮ್ ಮತ್ತು ಜೆರ್ರಿಯ (Tom and Jerry) ಶೆನಾನಿಗನ್ಸ್‌ಗೆ ಸಮಾನಾಂತರವಾಗಿರುವುದು ಮಾತ್ರ ಅದ್ಭುತ ಎನಿಸುತ್ತದೆ. ಜೊತೆಗೆ, ಇದಕ್ಕೆ ಇನ್ನಷ್ಟು ಜೀವ ತುಂಬುವುದು,  ಆಸ್ಕರ್​ ಪ್ರಶಸ್ತಿ ಪುರಸ್ಕೃತ 'ನಾಟು ನಾಟು' ಹಾಡು. ಈ ಹಾಡನ್ನು ಕೂಡ ಟಾಮ್​ ಆ್ಯಂಡ್​ ಜೆರ್ರಿಯ ನೃತ್ಯಕ್ಕೆ ಹೋಲಿಸಲಾಗಿದ್ದು, ನೋಡಿದರೆ ಹೌದಲ್ವಾ? ಎರಡೂ ಸೇಮ್​ ಇದೆ ಎನ್ನಿಸದೇಇರಲಾರದು. ಈ ವಿಡಿಯೋ ಇದಾಗಿದೆ. ಮೂರು ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ.

Natu Natu ಪ್ರಶಸ್ತಿಗೆ ಅರ್ಹನಾ? ಇದೇನ್​ ಹುಚ್ಚಾಟ ಎಂದ ರಾಷ್ಟ್ರಪ್ರಶಸ್ತಿ ವಿಜೇತ ನಟಿ
 

So RRR is copy of Tom& Jerry 🤨🤨 pic.twitter.com/HzhMAf8KA8

— phunnyRabia (@PhunnyRabia)
click me!